ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏಕತತ್ತ್ವ ತ್ರಿತತ್ತ್ವ ಪಂಚತತ್ತ್ವ ಪಂಚವಿಂಶತಿತತ್ತ್ವ ಷಟ್‍ತ್ರಿಂಶತ್ ತತ್ತ್ವ ಇಂತೀ ತತ್ತ್ವ ಂಗಳೆಲ್ಲವನೂ ಗರ್ಭೀಕರಿಸಿಕೊಂಡಿಪ್ಪ ಈ ತತ್ತ್ವಂಗಳೆಲ್ಲವಕ್ಕೆಯೂ ಅಧಿಕವಾಗಿಪ್ಪ ಮಹಾತತ್ತ್ವವೂ `ನ ಗುರೋರಧಿಕಂ ನ ಗುರೋರಧಿಕಂ' ಎಂದುದಾಗಿ `ನಾಸ್ತಿ ತತ್ತ್ವಂ ಗುರೋಃ ಪರಂ' ಎಂದುದಾಗಿ 'ಅದ್ವೈತಂ ತ್ರಿಷು ಲೋಕೇಷು ನಾದ್ವೈತಂ ಗುರುಣಾ ಸಹ' ಎಂದುದಾಗಿ `ಗುರುದೇವೋ ಮಹಾದೇವೋ' ಎಂದುದಾಗಿ ಶ್ರೀಗುರುತತ್ತ್ವವೇ ಪರತತ್ತ್ವವು. ಶಿವ ಶಿವಾ ಸಕಲವೇದ ಶಾಸ್ತ್ರಪುರಾಣ ಆಗಮ ಅಷ್ಟಾದಶವಿದ್ಯಂಗಳು ಸರ್ವವಿದ್ಯಂಗಳು ಸಪ್ತಕೋಟಿಮಹಾಮಂತ್ರಂಗಳು ಉಪಮಂತ್ರಂಗಳು ಅನಂತಕೋಟಿಗಳನೂ ಗರ್ಭೀಕರಿಸಿಕೊಂಡಿಪ್ಪ ಇವಕೆ ಮಾತೃಸ್ಥಾನವಾಗಿ, ಇವಕೆ ಉತ್ಪತ್ತಿ ಸ್ಥಿತಿ ಲಯ ಕಾರಣಂಗಳಿಗೆ ಕಾರಣವಾಗಿಪ್ಪ ಮಹಾತತ್ತ್ವ ಮಹಾಮಂತ್ರರಾಜನು, ಶ್ರೀಮೂಲಮಂತ್ರವು. ಈ ಮಹಾತತ್ವ್ತವು ಏಕವಾದ ಮಹಾಲಿಂಗವು. ಈ ಮಹಾಲಿಂಗವೆ ಅಂಗವಾಗಿಪ್ಪ ಮಹತ್ತಪ್ಪ ಮಹಾಸದ್ಭಕ್ತನು. ಆತನೇ ತತ್ತ್ವಜ್ಞನು, ಆತನೇ ತತ್ತ್ವಮಯನು, ಆತನೇ ತತ್ತ್ವಮೂರ್ತಿ. ಈ ಮಹಾಮಂತ್ರ ಮುಖೋದ್ಗತವಾದ ಮಹಾಭಕ್ತನು. ಆತನೇ ವೇದವಿತ್ತು, ಆತನೇ ಶಾಸ್ತ್ರಜ್ಞನು, ಆತನೇ ಪುರಾಣಿಕನು, ಆತನೇ ಆಗಮಜ್ಞನು, ಆತನೇ ಸರ್ವಜ್ಞನು. ಈ ಮಹಾಘನ ಮಹತ್ತನೊಳಕೊಂಡ ಸದ್ಭಕ್ತಂಗೆ ಇತರ ತತ್ತ್ವಂಗಳನೂ ಇತರ ದೇವತೆಗಳನೂ ಇತರ ದೇವದಾನವಮಾನವರುಗಳನೂ ಇತರ ಮಂತ್ರಂಗಳನೂ ಇತರ ಪದಂಗಳನೂ ಸರಿ ಎನಬಹುದೆ ? ಶಿವ ಶಿವಾ ಸರಿ ಎಂದಡೆ ಮಹಾದೋಷವು. ಈ ಮಹಾಭಕ್ತನೇ ಉಪಮಾತೀತನು ವಾಙ್ಮನೋತೀತನು. ಈ ಮಹಾದೇವನ ಭಕ್ತನೇ ಮಹಾದೇವನು. ಈ ಮಹಾಭಕ್ತನ ಪೂಜೆಯೇ ಶಿವಲಿಂಗಪೂಜೆ. ಈ ಮಹಾಭಕ್ತನ ಪದವೇ ಪರಮಪದವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಏಕಮೂರ್ತಿ ತ್ರಿಧಾ ಭೇದವಾಯಿತ್ತು ಗುರುಲಿಂಗಜಂಗಮವೆಂಬುದನರಿಯಿರೆ. ಅರಿದು ಮತ್ತೇಕೆ ಮರೆದಿರಿ ? ಲಿಂಗರೂಪಿನಲ್ಲಿ ಹಿರಿದ ಕೊಟ್ಟು ಜಂಗಮರೂಪಿನಲ್ಲಿ ಕಿರಿದ ಬೇಡಿಕೊಂಡು ಗುರುರೂಪಿನಲ್ಲಿ ಹಿರಿದು ಪರಿಣಾಮಿಸಿ ಮುಕ್ತಿಯ ಕೊಡುವನು. ಅಕಟಕಟ ಭಕ್ತಿಯನರಿಯರು, ಮುಕ್ತಿಗೆಟ್ಟಿತ್ತು. ಕೊಡುವವನು ಶಿವನು, ಶಿವನೆಂದರಿದು ಬದುಕಿರೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಏನು ಮನ ಶುದ್ಧವಾದಡೆ ಸ್ವಲ್ಪದ್ರವ್ಯ ಘನತರವಾಯಿತ್ತು ನೋಡಿರೆ ಮೋಳಿಗೆಯ ಮಾರತಂದೆಗೆ, ನುಲಿಯ ಚಂದಯ್ಯಂಗೆ ಆಯ್ದಕ್ಕಿಯ ಮಾರಣ್ಣಗಳಿಗೆ. ತನು ಮನ ಶುದ್ಧವಲ್ಲದಡೆ ಬಹಳತರ ಮಹದೈಶ್ವರ್ಯ ಸ್ವಲ್ಪವಾಗಿ ಕರಗಿ ಕೆಟ್ಟು ಹೋಗದೆ ರಾವಣಂಗೆರಿ ಇಂಗಿ ಹೋಗದೆ ದಕ್ಷಂಗೆರಿ ಉರಿದು ಉರಿದು ಹೋಗದೆ ತ್ರಿಪುರದಾನವರಿಗೆರಿ ಇದನರಿತು ತನು ಮನ ಶುದ್ಧವಾಗಲು ತೃಣ ಮಹಾಮೇರುಪರ್ವತವಪ್ಪುದಯ್ಯಾ. ಇಹದಲೂ ಮಹಾಗ್ರಾಸ, ಪರದಲೂ ಮಹಾಮುಕ್ತಿ, ಮಹಾಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ