ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇದಿರಿಟ್ಟು ಪೂಜಿಸುವಲ್ಲಿ ಷೋಡಶ ಉಪಚರಿಯದಲ್ಲಿ ಭರಿತನಾಗಿ ಇರಬೇಕು. ಅದು ಆರೋಪಿಸಿದಲ್ಲಿ ಭಾವ ಇದಿರಿಡದಲ್ಲಿ ಬೇರೊಂದು ಬಯಕೆಯ ಅರಿತಿರಬೇಕು. ಅರಿವನರಿತೆನೆಂದು ಕುರುಹ ಮರೆದಡೆ ಆ ಮರೆವುದೆ ತನ್ನ ತಿಂಬ ಮಾಯೆ ಎಂದರಿ ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಇಷ್ಟ ಪ್ರಾಣವ ಸಂಬಂಧಿಸಬೇಕೆಂಬರು. ಪ್ರಾಣ ಇಷ್ಟದಲ್ಲಿ ನಿಂದ ಮತ್ತೆ ಕಾಯದ ಸುಳುಹುಂಟೆ? ಇಷ್ಟದ ಕಳೆ ಪ್ರಾಣದಲ್ಲಿ ನಿಂದ ಮತ್ತೆ ಇಷ್ಟವ ಮುಟ್ಟಿ ಪೂಜಿಸುವ ಪರಿಯಿನ್ನೆಂತೊ? ಉಭಯದ ಘಟ ಬಿದ್ದಲ್ಲಿ ಅರಿವೆಲ್ಲಿ ನಿಂದಿತ್ತು? ಅಲ್ಲಿ ಶೂನ್ಯಕ್ಕೆ ಸುಳುಹುಂಟೆ? ಇದು ಅವಿದ್ಯರ ಮತ, ವಿದ್ಯರ ಮತವಲ್ಲ; ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಇಚ್ಛಾಶಕ್ತಿ ಹೋತಿಂಗೆ ಸತಿಯಾಹಲ್ಲಿ, ಕ್ರಿಯಾಶಕ್ತಿ ಕೋಡಗಕ್ಕೆ ಸತಿಯಾಹಲ್ಲಿ, ಜ್ಞಾನಶಕ್ತಿ ಬಳ್ಳುವಿನ ಬಾಗಿಲು ಕಾವಲ್ಲಿ ಇವರೆಲ್ಲರ ನೀ ನೋಡುತ್ತಿದ್ದೆ. ನೀ ನೋಡುವ ನೋಟ ತ್ರಿವಿಧ ನಾಶ. ಕೋಲಿನ ಶಾಂತನ ವೇಷ, ನಿನ್ನ ಕಾರುಣ್ಯವಾಸ, ಎನ್ನ ಭ್ರಾಂತಿನ ವೇಷ ನಾಶವಾಯಿತ್ತು. ಪುಣ್ಯಾರಮ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ