ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜ ಎಂದಲ್ಲಿ ಜನನ ನಾಸ್ತಿಯಾಗಿ, ಗ ಎಂದಲ್ಲಿ ಗಮನ ನಾಸ್ತಿಯಾಗಿ, ಮ ಎಂದಲ್ಲಿ ಮರಣ ನಾಸ್ತಿಯಾಗಿ, ಅರಿತು ತಿರುಗುವುದು ಸ್ವಯ ಚರ ಪರವಲ್ಲದೆ, ಕೂಟಕ್ಕೆ ನೆರೆದ ಅಗುಳಾಸೆಯ ವಿಹಂಗನಂತಾಗಬೇಡ. ತ್ರಿವಿಧಾಕ್ಷರವ ತ್ರಿಗುಣದಲ್ಲಿ ಇರಿಸಿ ತ್ರಿಗುಣಕ್ಕೆ ಹೊರಗಾಗು. ತ್ರಿಗುಣರಹಿತ ಸಗುಣಭರಿತನಾಗು. ಅದ ನಿನ್ನ ನೀನರಿ, ಲಿಂಗ ಜಂಗಮವೆ ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಜಲದುಡುಕೆಯ ತುಂಬಿ ಮೊಲೆನೀರ ಮೀವವರೆಲ್ಲರು ಅಮಲನ ಗುಣ ನೇಮವ ಮಾತಾಡಲೇಕೆ? ಸುಮನೆಯ ಸುಖದೊಳಗೆ ಲಯವಹರೆಲ್ಲರು. ಆ ಸುಮನನ ಭಾವವ ವಿಘಟಿಸುವ ಪರಿಯಿನ್ನಾವುದು? ಬಾಲೆ ಭವಕ್ಕೆ ಬೀಜ. ನಿರ್ಗತಿ ನಾಮರೂಪಿಲ್ಲ. ಇಂತೀ ಭೇದವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಜಡೆಮುಡಿ ಬೋಳು ಹೇಗಾದಡಾಗಲಿ, ನಡೆನುಡಿ ಸಿದ್ಧಾಂತವಾದಡೆ ಸಾಕು, ಆತ ಪರಂಜ್ಯೋತಿ ಗುರುವಹ. ಆ ಇರವ ನಿನ್ನ ನೀನರಿ, ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಜಲದ ಮಧ್ಯದಲ್ಲಿ ಅಯಿಮೂಲೆಯ ಕೆಲದಲ್ಲಿ ಒಂದು ಹೊಲ ಬೆಳೆಯಿತ್ತು. ಬೆಳೆಯ ಮೇಯ ಬಂದ ಎರಳೆ ತೆನೆಯಿಲ್ಲದ ಮರಿಗಂಡಿತ್ತು. ಆ ಮರಿ ಕಣ್ಣ ತೆಗೆದು ನೋಡಿ ಎನ್ನ ಹೆತ್ತ ತಾಯಿಯಲ್ಲಾಯೆಂದು ಎರಳೆಯ ಮರಿ ನುಂಗಿತ್ತು. ಹೊಲದೊಡೆಯ ಬಂದು ನಿಂದು ನೋಡಿ ಮರಿಯ ಕಂಡು ಅಂಜಿ ಹೊಲಬುದಪ್ಪಿದ. ಹುಲ್ಲೆ ತಪ್ಪಿ ಹೊಲದಣ್ಣ ಕಪ್ಪಿನಲ್ಲಿ ಬಿದ್ದ. ಆ ಹೊಲಬ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ