ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವ್ರತ ನೇಮವ ತೋರಿ ಗದಕದಲ್ಲಿ ಮಾಡುವ ಭಕ್ತಿ ಪಶುವ ಕೊಂದು ಹಸಿಯ ಭಕ್ಷಿಸುವವನ ದೆಸೆ ಲೇಸು. ಪಶುಪತಿಯ ಭಕ್ತನಾಗಿದ್ದು ಹುಸಿದು ಸರ್ವರ ವಂಚಿಸಿ ಪಿಸುಣತನದಿಂದ ಕಾಡಿ ಬೇಡಿ ತಂದವನ ಮನೆಯನ್ನ ಕಿಸುಕುಳಕೆ ಸರಿ. ಅದು ಹುಸಿಯಲ್ಲ, ನಿನ್ನ ನೀ ತಿಳಿದು ನೋಡು, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ವೇಸಿಯ ಸಂಗ ದ್ರವ್ಯದ ಕೇಡು, ದಾಸಿಯ ಸಂಗ ಮಾನಹಾನಿಗೆ ಮೊದಲು; ನಿಮ್ಮ ಶರಣರ ಸಂಗ ಕರಣಂಗಳ ಕೇಡು. ಇಂತೀ ಆಗುಚೇಗೆಯನರಿ ನಿನ್ನ ನೀ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ವಾರಿ ಸಲಿಲದಲ್ಲಿ ಒಂದು ಶರಧಿ ಹುಟ್ಟಿ ಊರೆಲ್ಲರ ಉರುಳುತ್ತದೆ. ಆ ಉರುಳು ಕೊರಳ ಬೀರಿ ಬ್ರಹ್ಮನ ಉಸುರಡಗಿತ್ತು; ವಿಷ್ಣುವಿನ ಎಡೆಯಾಟ ಬಿಟ್ಟಿತ್ತು, ರುದ್ರನ ಹಣೆಗಿಚ್ಚು ದಳ್ಳುರಿ ಬೇವುತ್ತದೆ. ಅದ ನಂದಿಸುವರಿಲ್ಲ, ಮೂರರ ಬಿಂದುವನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ