ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಕಲ ವ್ಯಾಪಾರದಲ್ಲಿ ವ್ಯವಹರಣೆಯ ಮಾಡಿ ಬಂದು ನಿಂದ ಧರೆಯ ಮೇಲೆ ಅಯಿದು ರೂಪಾಗಿ ರೂಪಿಂಗೈದು ಕುರುಹಿನ ಭೇದದಲ್ಲಿ ಆರೋಪಿಸಿ ರೂಪು ರೂಪಿನಿಂದ ಅಳಿದು ದೃಷ್ಟವ ದೃಷ್ಟದಿಂದ ಕಾಬಂತೆ ಅರಿವ ಅರಿವಿಂದ ಭಾವವ ಭಾವದಿಂದ ತನ್ನ ತಾ ಕುರುಹಿಟ್ಟುಕೊಂಡು ತತ್ವ ನಿಶ್ಚಯವಾಗಿ ನಿಜವ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸೂತೆಯಲ್ಲಿ ಬೀಜ ಹುಟ್ಟಿದಡೆ ಅದೇತಕ್ಕೆ ಬಾತೆ? ಪಾಷಾಣದ ಕೈಯಲ್ಲಿ ಈಶ ರೂಪ ಧರಿಸಿದಡೆ ಅದು ನೆಲೆಗಳೆದ ತಟಾಕದ ತೂಬು. ಆ ಪಥವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸದ್ಗತಿಯ ತೋರುವ ಗುರುವಿಂಗೆ ರಾಜಸ ತಾಮಸವುಂಟೆ? ಕೆಡದ ಜ್ಯೋತಿಗೆ ಪಡಿಕುಡಿಗೆ ಎಣ್ಣೆ ಉಂಟೆ? ಆ ಬಿಡುಮುಡಿಯ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸಂಪಗೆಯ ತಂಬೆಲರಿನಲ್ಲಿ ಒಂದು ಭೃಂಗ ತತ್ತಿಯನಿಕ್ಕಿತ್ತು. ತನ್ನ ಬಾಳು ಕುಸುಮದ ವಾಸನೆ ಬಲಿವನ್ನಕ್ಕ ತುಂಬಿಯಿದ್ದಿತ್ತು. ವಾಸನೆ ತೋರಿ ತುಂಬಿ ಸತ್ತು ಮರಿ ಹಾರಿ ಹೋಯಿತ್ತು. ಆ ಮರಿಯ ಅರಿವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸ್ಥಳಕುಳವನೆತ್ತಿದಲ್ಲಿ ಸಮಯಕ್ಕೆ ದೂರ. ಚಿದ್ಘನ ಭೇದ ಭೇದಾಂತವನೆತ್ತಿದಲ್ಲಿ ಅಧ್ಯಾತ್ಮಕ್ಕೆ ದೂರ. ಸರ್ವವು ಸಮವೆಂದಡೆ ವಿಧಿ ನಿಷೇಧ ಕಾಲಕರ್ಮಕ್ಕೊಳಗಹರುಂಟು. ಅದು ತನ್ನೊಪ್ಪದ ದರ್ಪಣದಂತೆ; ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸಮಯ ಸಮೂಹ ದರುಶನ ಆಡಂಬರ ವಾಚಾರಸದಿಂದ ನೀತಿಯ ತೋರಿ, ವಾಸವ ಹೊಕ್ಕು ಧಾತುಗೆಡುವ ಘಾತರಿಗೇಕೆ ಮೂರಕ್ಷರ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸಂಜೀವನವ ತಂದೆನೆಂದಡೆ ಅದು ಬಂದ ಠಾವಿಲ್ಲವೆ? ಕಾಮಧೇನುವ ಕಟ್ಟಿದೆನೆಂದಡೆ ಅದು ಹುಟ್ಟಿದ ಠಾವಿಲ್ಲವೆ? ಇಷ್ಟನರಿಯದೆ ವಿರಕ್ತನಾದೆನೆಂಬ ವಿಧಾಂತರ ಕತ್ತೆಗಾಹಿಯ ಮಾತು ಬೇಡ. ಕುರುಹಿನ ಮರೆಯ ನಿಜವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸತ್ತ ಹಾವು ಹೆಣನ ಕಚ್ಚಿ ಮತ್ತೆ ಸತ್ತಿತ್ತು. ಸತ್ತುದ ಕಂಡು ಹದ್ದು ಎತ್ತಲಾಗಿ, ಎತ್ತಿದ ಬೆಂಬಳಿಯಲ್ಲಿ ಹಾವಿನ ಜೀವವೆದ್ದು ಹೆಡೆಯನೆತ್ತಿ ಆಡಲಾಗಿ, ಹದ್ದು ಬಿಟ್ಟಿತ್ತು; ಹಾವು ಹಾವಡಿಗಂಗೆ ಈಡಾಯಿತ್ತು. ಆ ಹದ್ದು ಹಿಡಿದು ಬಿಟ್ಟೆನಲ್ಲಾ ಎಂದು ಮರೆದೊರಗಿತ್ತು. ಹಾವು ಹದ್ದು ಕೂಡಿ ಬದುಕಿದವು; ಅದೇನುಕಾರಣವೆಂಬುದನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸದ್ಗುರುಮೂರ್ತಿಯ ಇರವು ಕರ್ಪುರವ ತಾಳಿರ್ದ ಕರಂಡದಂತಿರಬೇಕು. ದರ್ಪಣದೊಳಗಣ ಪ್ರತಿಬಿಂಬದಂತಿರಬೇಕು. ಕಮಲಪತ್ರದ ಬೆಂಬಳಿಯ ಅಂಬುವಿನಂತಿರಬೇಕು. ಪುಡಿಸಂಗದ ಸಂಚಾರದ ಸಂಗದಂತಿರಬೇಕು. ಕುಡಿವೆಳಗಿನ ಬುಡದ ಬೆಳಗಿನಂತಿರಬೇಕು. ಸದ್ಗುರು ಸದಮಲಾನಂದಮೂರ್ತಿ ಗುರುವಾದುದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸುಖದುಃಖ ಸತಿ ಪುರುಷಂಗೂ ಸರಿ. ಗತಿ ಭೇದ ಕರ್ತೃ ಭೃತ್ಯಂಗೂ ಸರಿ. ನೀರು ನೆಲದಂತೆ, ಸಾರ ಸುಧೆಯಂತೆ ಭಕ್ತ ಜಂಗಮದ ಇರವು. ಕರ್ಪೂರ ಉರಿಯಂತೆ ಇದು ನಿಶ್ಚಯ. ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ
--------------
ಕೋಲ ಶಾಂತಯ್ಯ
ಸತ್ವ ರಜ ತಮವೆಂಬ ಮೂರು ಭಿತ್ತಿ ಕೂಡಿ ಘಟ್ಟಿಯಾದಲ್ಲಿ ಚಿತ್ತೆಂಬ ಪುತ್ಥಳಿ ಹುಟ್ಟಿತ್ತು. ಪುತ್ಥಳಿಯ ಪತ್ಥಳಿಯಲ್ಲಿ ಜಗಕರ್ತೃ ಹುಟ್ಟಿದ. ಕರ್ತೃವಂ ಹೆತ್ತವನ ನಾಭಿಯ ಮಧ್ಯದ ಬಾಲಲೀಲೆಯ ಸಾಲಿನೊಳಗಾದ ಸಂಪದವರಿವರಲ್ಲಾ ಕಾಲಕ್ಷಯನ ಕರ್ಮನಾಶನ ಭಾಳಾಂಬಕನ ಲೀಲೆಯಲ್ಲಿ ಆಡುತ್ತಿರೆಂದು ಸರ್ವಮಯಕ್ಕೆ ಹೊರಗಾದ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ