ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಡಿನ ಕಾಲ ಮುರಿದು, ಕೋಡಗದ ಹಲ್ಲ ಕಿತ್ತು, ಉಡುವಿನ ಕುಡಿನಾಲಗೆಯ ಕೊಯಿದು, ಬಳ್ಳುವಿನ ಸೊಲ್ಲನರಿದು ಇವೆಲ್ಲವ ನಿನ್ನಲ್ಲಿಗೆ ತಂದೆ; ಇವ ಬಲ್ಲವ ನೀನಲ್ಲದಿಲ್ಲ. ಎನಗೆ ಅಲ್ಲಿಯೊ ಇಲ್ಲಿಯೊ ಮತ್ತೆ ಅಂದು ನೀ ಹೇಳಿದಲ್ಲಿಯೊ ಎಂಬುದ ನಾನರಿಯೆ, ನೀ ಹೇಳು, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಆತ್ಮತತತ್ವ ವಸ್ತುವಾದಡೆ ನಾನಾ ಘಟದಲ್ಲಿ ಇರಲೇಕೆ? ಆ ಘಟ ವಸ್ತುವ ಗರ್ಭೀಕರಿಸಿದಲ್ಲಿ ಪಂಚಭೌತಿಕಕ್ಕೆ ಒಡಲಾಗಲೇಕೆ? ಹಿಡಿಯಬಾರದು, ಹಿಡಿದು ಬಿಡಬಾರದು. ಒಡಲು ದಿಟವೆಂದಡೆ ಅದು ಒಡೆಯ ಹಾಕುವ ಕುಂಭ. ಒಡಲೊಡೆಯ ದಿಟವೆಂದಡೆ ರೂಪಿಲ್ಲದ ಛಾಯ. ಅರಿದು ಮುಕ್ತಿಯ ತೆರನಾವುದು? ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಆಸೆಯಳಿದು ನಿರಾಸಕನಾದಲ್ಲಿ ಪಾಶಬದ್ಧರೊಳಗಣ ಮಾತಿನ ಮಾಲೆಯೇಕೆ? ಸರ್ವವ ನೇತಿಗಳೆದು ನಿಂದಲ್ಲಿ ಸ್ತುತಿ ನಿಂದೆಯ ಮಾತಿನ ಬಿರುಬು ಅದೇತಕ್ಕೆ? ಇಂತಿವನರಿದು ನುಡಿದು ನಡೆಯಲಿಲ್ಲದ ತ್ರಿವಿಧ ಸುರೆಗುಡಿಹಿಗಳ ಮಾತು. ಮಂಜಿನ ಹರಿಗೆಯ ಬಿಸಿಲಂಬು ತಾಗಿದಂತಾಯಿತ್ತು. ಇಷ್ಟರ ಗುಣ ಏತರಿಂದಾಯಿತ್ತು, ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಆರು ಸ್ಥಲವನರಿದು ಮೂರು ಸ್ಥಲವ ಮುಟ್ಟಿ, ಮೂವತ್ತಾರು ಸ್ಥಲವ ಕೂಡಿ, ಇಪ್ಪತ್ತೈದು ಸ್ಥಲದಲ್ಲಿ ನಿಂದು, ನೂರೊಂದರಲ್ಲಿ ಸಂಗವ ಮಾಡಿ ಬೇರೆ ನೆಲೆಗಳೆದು ನಿಂದಲ್ಲಿ, ಕಾಯ ಜೀವದ ಬಂಧ ಅದೇತರಿಂದ ನಿಂದಿತ್ತೆಂದರಿ ನಿನ್ನ ನೀನೆ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಆರೂ ಇಲ್ಲದ ಠಾವಿನಲ್ಲಿ ಊರ ಕಟ್ಟಿ, ಊರವರೆಲ್ಲರು ಒಳಗೆ ತಾ ಹೊರಗಾಗಿ, ಕೆರೆಯ ಕಟ್ಟಿ, ಕೆರೆಯ ಬಾಗಿಲು ಊರೊಳಗೆ ಮನೆ ಹೊರಗಾಗಿ ಎಡೆಯಾಡುತ್ತಿದ್ದಾತನ ನೀತಿಯನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಆತ್ಮನಿದ್ದು ಶಯನಾಂತನಾಗಿ ಇದ್ದಲ್ಲಿ ಸಕಲ ಭೋಗಂಗಳನರಿಯಬಲ್ಲುದೆ? ರಾಜಸ ತಾಮಸದ ಮರೆಯಲ್ಲಿದ್ದು ಸಾತ್ವಿಕವನರಿಯಬಲ್ಲುದೆ? ಏತರಲ್ಲಿದ್ದು ಚೇಟಿಯ ಕೊಡದಂತಿರಬೇಕು. ಇಷ್ಟ ನಿನ್ನ ನೀನರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಆರಿಗೂ ತೋರದ ಅಂಬರದಲ್ಲಿ ಒಂದು ಎರಳೆ ಮರಿಯನಿಕ್ಕಿ ಸತ್ತಿತ್ತು. ಮರಿಯ ಮಂಡೆಯ ದೆಸೆಯಲ್ಲಿ ಮರಿ ತಾಯ ನೆರೆನೋಡಿ, ಸತ್ತುದನರಿಯದೆ ಗೊತ್ತ ಮೂಸುತ್ತಿದ್ದಿತ್ತು. ಹೊಲಸಿನ ಗಲವಲು ನಾಸಿಕವ ತಾಗಿ ಸತ್ತುದು ಎಂಬುದನರಿದು ಮರಿ ಬಚ್ಚಬಯಲಾಯಿತ್ತು. ಬಯಲ ತಿಳಿದರಿ ನಿನ್ನ ನೀ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ