ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತನಾದಲ್ಲಿ ಆವ ಸೋಂಕು ಬಂದಡೂ ಭಾವಶುದ್ಧವಾಗಿರಬೇಕು. ಭಕ್ತಂಗಲ್ಲದೆ ತಾಕು ಸೋಂಕು ಮತ್ತೊಬ್ಬರಿಗೆ ಬಾರವು. ಬಿರಿದ ಕಟ್ಟಿದ ಬಂಟಂಗೆ ತಡಹಲ್ಲದೆ ಬರುಬರಿಗುಂಟೆ ಮನೆದಗಹು? ನಿಮ್ಮನರಿವಂಗೆ ಮರವೆ ಬಂದಡೆ ನಿಮ್ಮನರಿದು ತನ್ನ ತಾನರಿಯಬೇಕೆಂಬುದ ನಿನ್ನ ನೀ ತಿಳಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಭಕ್ತಿಜ್ಞಾನ ವೈರಾಗ್ಯದಿಂದ ಅರಿಯಬೇಕೆಂಬುದು ಭಕ್ತಿಯೊ ಜ್ಞಾನವೊ ವೈರಾಗ್ಯವೊ? ಮೂರಿಕ್ಕೆ ಬೇರೊಂದೆಡೆಯುಂಟೆ? ಅದರ ಎಡೆ ಗುಡಿಯ ತೋರು, ಬರಿಯ ಮಾತಿನ ಮಾಲೆ ಬೇಡ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಭಕ್ತನಾದಲ್ಲಿ ದ್ರವ್ಯವ ಸವೆಸಿ ಮರ್ಮವನರಿಯದೆ ವ್ಯರ್ಥವಾಯಿತ್ತು. ಖ್ಯಾತಿಗೆ ಇಕ್ಕಿ ಕೊಟ್ಟು ಮಾಡುವಾತನ ಭಕ್ತನೆಂದಡೆ ವಾಸಿಯ ಮಾತಿಗೆ ಸತ್ತವನ ಪಾಶದಂತೆ ಆತನ ಮಾಟ. ಮಾಟವನರಿದುಣ್ಣಬೇಕು, ಸರ್ವವ ನೇತಿಗಳೆದ ನಿರ್ಮಲಗುರು. ಆತನ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ