ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಹದಲ್ಲಿ ಕಾಬ ಸುಖ, ಪರದಲ್ಲಿ ಮುಟ್ಟುವ ಭೇದ. ಉಭಯದ ಗುಣ ಏಕವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಇಷ್ಟಲಿಂಗ, ಪ್ರಾಣಲಿಂಗವೆಂದು ಬೇರೊಂದು ಕಟ್ಟಣೆಯ ಕಟ್ಟಬಹುದೆ ? ವೃಕ್ಷ ಬೀಜದಲ್ಲಿ ಅಡಗಿ, ಬೀಜ ವೃಕ್ಷವ ನುಂಗಿಪ್ಪ ತೆರನಂತೆ, ಇಷ್ಟ ಪ್ರಾಣ ಬೆಚ್ಚಂತಿರಬೇಕು. ಅಪ್ಪು ಮುತ್ತಾದಂತೆ, ಉಭಯದ ಗೊತ್ತು ತಾನೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಇದಿರೆಡೆಯಾದಲ್ಲಿ ಹಿಂದಣಲಗ ಸತ್ತಿತ್ತು. ಕಡ ಚೀಟ ಕೊಟ್ಟಲ್ಲಿ ಒಡೆಯನ ಬೇಡಲಿಲ್ಲ. ವಸ್ತುವ ಅಡಿ ಅರಿದು ಕೂಡಿದಲ್ಲಿ, ಬೇರೊಂದು ಬಿಡುಗಡೆ ಉಂಟೆ ? ಆ ತೆರನನರಿದು ಕರಿಗೊಂಡಲ್ಲಿ. ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಇಷ್ಟವ ಹಿಡಿದಾಡುವನ್ನಬರ ಪೂಜೆಯ ಕಟ್ಟುಗೊತ್ತಿನಲ್ಲಿ ಇರಬೇಕು. ಇಷ್ಟವರತು ಅಂಗದ ಆಚರಣೆ ಅಳಿದಲ್ಲಿ, ಉಭಯ ನಷ್ಟವಾದಲ್ಲಿ, ಮನಸಂದಿತ್ತು ಮಾರೇಶ್ವರಾ
--------------
ಮನಸಂದ ಮಾರಿತಂದೆ