ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವೇದ ಹುಟ್ಟುವುದಕ್ಕೆ ಮುನ್ನವೆ ಓದಿದವರಾರು ? ಶಾಸ್ತ್ರ ಹುಟ್ಟುವುದಕ್ಕೆ ಮುನ್ನವೆ ಕಲಿತವರಾರು ? ಪುರಾಣ ಹುಟ್ಟುವುದಕ್ಕೆ ಮುನ್ನವೆ ಕೇಳಿದವರಾರು ? ಉತ್ಪತ್ತಿ ಸ್ಥಿತಿ ಲಯಕ್ಕೆ ಮುನ್ನವೆ ನಾನೆಂಬವರಾರು. ಮನಸಂದ ಮಾರೇಶ್ವರಾ ?
--------------
ಮನಸಂದ ಮಾರಿತಂದೆ
ವಾಚಕ ಚಪಳತ್ವದಿಂದ ಮಾತನಾಡಿದಡೇನು, ತ್ರಿವಿಧದ ಆಸೆ ಬಿಡದನ್ನಕ್ಕ ? ರೋಷದ ಪಾಶ ಕೀಳದನ್ನಕ್ಕ ? ಮಾತೆಲ್ಲವೂ ಮೂರರಾಸೆಯಲ್ಲಿ ಸಿಕ್ಕಿ, ರೋಷದ ಪಾಶದಲ್ಲಿ ಕಟ್ಟುವಡೆದು, ಮತ್ತೇತರ ಭಾಷೆಯ ನೀತಿ ? ಹೋತಿನ ಕೊರಳ ಮೊಲೆಯ ಆಸೆ ಮಾಡಿ ಉಂಡಡೆ, ಅಲ್ಲೇತರ ಸುಖ ? ಮತ್ತೀ ಗುಣದಾಸೆ ಹರಿದು ನಿಂದಡೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ವಿರಳ ಅವಿರಳವೆಂಬನ್ನಬರ, ಕುರುಹು ನಾಮಕ್ಕೆ ಒಡಲಿಲ್ಲ. ಆ ಉಭಯ ಏಕೀಕರವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ವೇದವ ಕಲಿತಲ್ಲಿ, ಪಾಠಕನಲ್ಲದೆ ಜ್ಞಾನಿಯಲ್ಲ, ನಿಲ್ಲು. ಶಾಸ್ತ್ರ ಪುರಾಣವನೋದಿದಲ್ಲಿ, ಪಂಡಿತನಲ್ಲದೆ ಜ್ಞಾನಿಯಲ್ಲ, ನಿಲ್ಲು. ವ್ರತ ನೇಮ ಕೃತ್ಯ ಪೂಜಕನಾದಡೇನು ? ದಿವ್ಯಜ್ಞಾನದ ಠಾವನರಿಯಬೇಕು. ಈ ಭೇದಂಗಳ ತಿಳಿದರಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ವೀರನಾದಲ್ಲಿ ವಿತರಣ ಬೇಕು. ವಿತರಣನಾದಲ್ಲಿ ಸಕಲವನರಿಯಬೇಕು. ಸಕಲ ನಿಃಕಲವೆಂಬುದನರಿತು, ಇದಿರನರಿಯದೆ ತನ್ನನರಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ