ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತತ್ವ ಅಂಗವಾಗಿ, ಪರತತ್ವ ಪ್ರಾಣವಾಗಿ, ಉಭಯದಲ್ಲಿ ನಿಂದ ನಿಜ ಹೊರಗಾಯಿತ್ತು, ಮನಸಂದ ಮಾರೇಶ್ವರಾ.
--------------
ಮನಸಂದ ಮಾರಿತಂದೆ
ತೊರೆಯ ಹಾವನ್ನಕ್ಕ, ಒಂದು ಹರುಗೋಲ ಬೇಕು. ಹರುಗೋಲದೊಳಗಿಹನ್ನಕ್ಕ, ಒಂದು ಅಡಿಗಟ್ಟಿಗೆ ಬೇಕು. ತೊರೆ ಬತ್ತಿ, ಹರುಗೋಲ ಹಾಕಿ, ಅಡಿಗಟ್ಟಿಗೆ ಮುರಿದಲ್ಲಿ ತ್ರಿವಿಧವಲ್ಲಿ, ನಾನಿಲ್ಲಿ, ನೀನೆಲ್ಲಿ ? ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ತನುವಿಂದ ಅನುವನರಿತೆಹೆನೆಂದಡೆ, ಆ ಅನುವಿಂಗೂ ತನುವಿಂಗೂ ಸಂಬಂಧವಲ್ಲ. ಅನುವಿಂದ ತನುವನರಿತೆಹೆನೆಂದಡೆ ಅನು ಬಯಲು, ತನು ರೂಪು. ಕಾಷ* ಪಾಷಾಣ ಘಟದಲ್ಲಿ ತೋರಿ, ಉರಿವ ಅಗ್ನಿಯಂತೆ, ಒಂದನಳಿದು, ಒಂದನುಳಿದಿಹವಹ್ನಿಯ ತೆರನನರಿದಲ್ಲಿ, ಬೇರೊಂದನ್ಯವ ಕುರುಹಿಡಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ತ್ರಿವಿಧಶಕ್ತಿಯನರಿದಲ್ಲಿ, ತ್ರಿಗುಣಾತ್ಮವ ಮರೆದಲ್ಲಿ, ತ್ರಿಭೇದಂಗಳ ಕಾಬಲ್ಲಿ, ತ್ರಿಗುಣ ತನ್ಮಯವಾಗಿ ಚರಿಸುವಲ್ಲಿ, ಇಂತೀ ತ್ರಿಗುಣ ಏಕವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ತತ್ವವೆಲ್ಲ ಬ್ರಹ್ಮನ ಒಡಲು. ಪರತತ್ವವೆಲ್ಲ ವಿಷ್ಣುವಿನ ಒಡಲು. ಪಂಚವಿಂಶತಿತತ್ವದೊಳಗಾಗಿ ತೋರುವುದೆಲ್ಲ ರುದ್ರನ ಪ್ರಳಯಕ್ಕೊಳಗು. ಇಂತೀ ಒಳಗು ಹೊರಗ ತಿಳಿದು, ಅಹುದು ಅಲ್ಲಾ ಎಂಬೀ ಸಂದೇಹ ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ತನು ಒಡಲುಗೊಂಡು ನಿಂದಲ್ಲಿಯೆ ಗುರುವಿಂಗೆ ಹಂಗಾಯಿತ್ತು. ಲಿಂಗ ಸಾಕಾರವಾಗಿ ಬಂದಲ್ಲಿಯೆ ಜಂಗಮಕ್ಕೆ ಹಂಗಾಯಿತ್ತು. ಮನವು ಮಹವನರಿಯದೆ ಸಕಲ ಜೀವಕ್ಕೆ ಹಂಗಾಯಿತ್ತು. ಅಂಗ ಜೀವದ, ಸಂದೇಹವನರಿತಲ್ಲಿ, ದಂದುಗಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ತಪಕ್ಕೆ, ಬಂಧನಕ್ಕೆ ಸಿಕ್ಕದ ವಸ್ತು, ಜಪಕ್ಕೆ, ಮಣಿಮಾಲೆಯೊಳಗಲ್ಲ. ಮಂತ್ರಕ್ಕೆ ಅಲಕ್ಷಮಯವಾಗಿಪ್ಪುದು. ತ್ರಿಕರಣ ಶುದ್ಧವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ತಮದ ಸತಿಯ ಸ್ವಯಂಜ್ಯೋತಿ, ಪುರುಷನಪ್ಪಿದಲ್ಲಿ ತೆಕ್ಕೆಗೊಡಲುಂಟೆ ? ಅಪ್ಪಿದಲ್ಲಿಯೆ ಬಚ್ಚಬಯಲು. ತಮಸತಿಯೆಂಬ ನಾಮವಡಗಿತ್ತು. ಭಾವಕ್ಕೆ ಭ್ರಮೆಯಿಲ್ಲ, ಎನಗೆ ಕುರುಹಿಲ್ಲ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ