ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೂವ ಕೊಯಿವುದಕ್ಕೆ ಮುನ್ನವೆ, ವಾಸನೆಯ ಕೊಯ್ಯಬೇಕು. ಲಿಂಗ ಬಹುದಕ್ಕೆ ಮುನ್ನವೆ, ಅರಿವನರಿಯಬೇಕು. ನಾನೆಂಬುದಕ್ಕೆ ಮೊದಲೆ, ವಸ್ತುಭಾವದಲ್ಲಿ ಮನಸಂದಿರಬೇಕು, ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಹುಟ್ಟದ ಮುನ್ನವೆ ಬೆಳೆದ ಬೆಳೆಯ, ಕೊಯ್ಯದ ಮುನ್ನವೆ ಒಕ್ಕಿ, ಒಕ್ಕುವುದಕ್ಕೆ ಮುನ್ನವೆ ರಾಸಿಯಾಗಿ, ರಾಸಿಗೆ ಮೊದಲೆ ಅಳೆತ ಸಂದಿತ್ತು. ಕೊಳಗದ ಕೊರಳು ಹಿಡಿಯದೆ, ಅಳೆವನ ಕೊರಳು ತುಂಬಿ, ಹೇಳುವಾತನ ಕಣ್ಣು ಬಚ್ಚಬಯಲಾಯಿತ್ತು, ಮನಸಂದ ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಹರಿವ ಗರಗಸವೊಂದೆ ಬಗೆಯಲ್ಲಿ ಹರಿವುದೆ ? ಉಭಯದ ಕೊಯಿತೆ ಶರಣರ ಸಂಗ. ಅರಿಬಿರಿದಿನ ತೊಡಕು. ಉತ್ತರ ಕೊಟ್ಟಲ್ಲಿ ಭಕ್ತಿ ನಿಂದಿತ್ತು. ಗೆಲ್ಲ ಸೋಲಕ್ಕೆ ನಾ ನುಡಿದು ಗೆದ್ದೆಹೆನೆಂದಡೆ, ಹಿಡಿದ ನೇಮಕ್ಕೆ ಅದೇ ಕಡೆ. ಸತಿಪತಿಯಾಗಬಹುದೆ ? ಏನೆಂದಲ್ಲಿ ನಾನೆಂಬುದಳಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಹರಿವ ಹಾವು, ಉರಿವ ಕಿಚ್ಚೆಂದಡೆ ಮುಟ್ಟುವವರಿಗೆ ಭೀತಿಯಲ್ಲವೆ ? ಅರಿದು ಹಿಡಿದಡೆ, ಉರಗ ಹೊರಳೆಗೆ ಸರಿ. ಸ್ತಂಭಕ್ಕೆ ಅಗ್ನಿ ಚಂದನದ ಮಡು. ಲಿಂಗವ ಹಿಡಿಯಬಲ್ಲಡೆ, ಅಂಗ ನಿರಂಗದ ಕೂಟ. ಉಭಯದ ಸಂಗವನರಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ