ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉದಕವೊಂದರಲ್ಲಿ ತಂದು, ವರ್ಣ ಭೇದಕ್ಕೆ ಹಲವಾದ ತೆರನಂತೆ, ಆತ್ಮ ನಾನೆಂಬುದ ಮರೆದು, ಸರ್ವರಲ್ಲಿ ಬೆರಸುವ ಚಿತ್ತ ಒಂದೋ, ಎರಡೋ ? ನೆಲಜಲ ಒಂದಾದಡೆ, ಬೆಳೆವ ವೃಕ್ಷ ಹಲವಾದ ತೆರದಂತೆ, ಅರಿವು ಮರವೆಗೊಳಗಾದ ಆತ್ಮನ ತಿಳಿದಲ್ಲಿ, ಬೇರೊಂದೆಡೆಗೆ ತೆರಪಿಲ್ಲ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಉಟ್ಟುದ ಹೊದ್ದುದ ಬಿಟ್ಟು ಬಂದು, ಮತ್ತೊಬ್ಬರ ಅಂಗಳದ ಬಟ್ಟೆಯ ಕಾಯಲೇತಕ್ಕೆ ? ದೃಷ್ಟದ ವಸ್ತುವಿದೆಯೆಂದು ಮಿಕ್ಕಾದವರಿಗೆ ಹೇಳುತ್ತ, ತ್ರಿವಿಧಬಟ್ಟೆಯ ತಾ ಕಾವುತ್ತ, ಈ ಕಷ್ಟರ ಕಾಬುದಕ್ಕೆ ಮೊದಲೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಉದಕ ಹಲವು ತೆರದಲ್ಲಿ ಬೆರಸಿ, ಸವಿ ಸಾರವ ಕೊಡುವಂತೆ, ವಸ್ತು ಸರ್ವಮಯನಾಗಿ, ಷಡುಸ್ಥಲಬ್ರಹ್ಮಿಯಾಗಿ, ಪಂಚವಿಂಶತಿತತ್ವ ಪರಬ್ರಹ್ಮಮೂರ್ತಿಯಾಗಿ, ಹೇಮದ ಸ್ವರೂಪದಂತೆ ರೂಪಿಂಗೊಡಲಾಗಿ, ಅದನಳಿಯೆ, ಏಕಭಾವವಾಗಿ ನಿಂದ ನಿಜದಲ್ಲಿ ನೋಡೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಉಚಿತ ಬಂದಲ್ಲಿ ನಾಳೆಗೆಂದಾಗವೆ ಕುಚಿತವಲ್ಲವೆ ? ನೆರೆ ಅರಿದು ಸಂಸಾರವ ಹರಿಯದಿದ್ದಾಗವೆ ಮರವೆಯಲ್ಲವೆ ? ಅರಿದಡೆ ಮರೀಚಿಕದಂತೆ, ಸುರಚಾಪದಂತೆ, ಅಂಬರದ ಆಕಾರದಂತೆ ತೋರಿ ಅಡಗುವ ನಿಜಲಿಂಗಾಂಗಿಯ ಇರವು. ಅದರಂಗ ವೇಧಿಸಿದಲ್ಲಿಯೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ