ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾ ನೀನೆಂಬ ಉಭಯವ ವಿಚಾರಿಸುವುದು ಅದೇನು ಹೇಳಾ ? ನಾನೆಂದಡೆ ಎನಗೆ ಹೊರಗು, ನೀನೆಂದಡೆ ಉಭಯಬ್ಥಿನ್ನ. ಏನೂ ಎನ್ನದಿದ್ದಡೆ ಅರಿವಿಂಗೆ ಕುರುಹಿಲ್ಲ. ಉಭಯವ ವಿಚಾರಿಸಿ ತಿಳಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ನಡೆವಾತನ ಕಾಲ ಕೊಯಿದು, ನುಡಿವಾತನ ನಾಲಗೆಯ ತುಂಡಿಸಿ, ಕೊಡುವಾತನ ಕೈಯ ಮುರಿದು, ಕೊಂಡಾಡುವಾತನ ತಲೆಯ ಕುಟ್ಟಿ, ಮೀರಿ ನಿಂದುದು, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ