ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜೀರ್ಣಕುಂಭದಲ್ಲಿ ತೋರುವ ಅನಲನಂತೆ, ಬುಡವೊಂದು ಛಿದ್ರದಿಂದ ಹಲವಾದ ತೆರದಂತೆ, ಕಾಯಜೀವದ ಭೇದವನರಿತಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಜೀವದಿಂದ ಕಾಬ ಅರಿವು, ಪ್ರಕೃತಿರೂಪಾಗಿಪ್ಪುದು. ಪರಮನಿಂದ ಕಾಬ ಜ್ಞಾನ, ಸಂದೇಹಕ್ಕೊಡಲಾಗಿಪ್ಪುದು. ಸಂದೇಹವೊಂದೆಂದು ತಿಳಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಜ ಎಂಬುದನರಿದಲ್ಲಿ ಬ್ರಹ್ಮತತ್ವ. ಗ ಎಂಬುದನರಿದಲ್ಲಿ ವಿಷ್ಣುತತ್ವ. ಮ ಎಂಬುದನರಿದಲ್ಲಿ ರುದ್ರತತ್ವ. ತ್ರಿವಿಧವ ಹರಿದು ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ