ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಾವಭಾವಿಸಿದಲ್ಲಿ, ಜೀವ ಸಂಚರಿಸುವಲ್ಲಿ, ಜ್ಞಾನ ಪರಮನೆಂದು ಅರಿದಲ್ಲಿ, ಬೇರೊಂದು ಬೀಜವುಂಟೆ ? ನಾನಾರೆಂಬುದ ತಾನರಿದ ಮತ್ತೆ, ನಿರ್ವೀಜವಾಗಿ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಭಕ್ತಂಗೆ ಪ್ರತ್ಯುತ್ತರ ಘಟಿಸಿದಾಗ, ಮತ್ಸರಕ್ಕೊಡಲಾಗಲಾಗಿ, ಸತ್ಯ ಜಾರಿತ್ತು. ನಿತ್ಯ ಕಾಲಂಗಳಲ್ಲಿ ಅರ್ಚನೆ ಪೂಜೆ ಸತ್ತಿತ್ತು. ಹುಸಿ ಕುಹಕವೆಂಬ ಭಾವ ಚಿತ್ತದಲ್ಲಿ ತೋರಿದಾಗವೆ ತೋರುವ ತೋರಿಕೆಗೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಭಟಂಗೆ ಭಾಷೆಯಲ್ಲದೆ, ಅಂಜಿ ತೊಲಗಿದವಂಗೆ ಚೌಭಟದ ರಣರಂಗವುಂಟೆ ? ವಾಗದ್ವೈತಿ ಸ್ವಯಾನುಭಾವಕ್ಕೆ ಸಂಬಂಧಿಯಪ್ಪನೆ ? ಕೀಟಕ ಅರುಣನ ಕಿರಣವ ಜರೆದಂತೆ, ದೂಷಣವ ಮಾಡುವಲ್ಲಿ, ಆ ದೂಷಣಕ್ಕೆ ತಾನೊಳಗಹಲ್ಲಿ, ತಿಳಿದು ವಿಚಾರಿಸುವಲ್ಲಿ, ಒಳಹೊರಗುಯೆಂಬುದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಭಕ್ತರು ನಾವೆಂದು ನಿತ್ಯನೇಮವ ಮಾಡಿಕೊಂಡೆವೆಂದು ಮನೆಮನೆಯ ಬಾಗಿಲ ತಪ್ಪಲ ಕಾಯಲೇತಕ್ಕೆ ? ಇದು ಶಿವಭಕ್ತರಿಗೆ ಒಪ್ಪುವುದೆ ? ಇಂತೀ ವ್ರತನೇಮವ ಮಾರಿ, ಘಟವ ಹೊರೆವ ಕುಟಿಲರಿಗಂಜಿ, ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ