ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೊದಲಿಗೆ ಮರ ನೀರನೆರೆದಡೆ ಎಳಕುವುದಲ್ಲದೆ, ಕಡೆ ಕಿಗ್ಗೊಂಬಿಗೆರೆದವರುಂಟೆ ? ಅರಿದು ಪೂಜಿಸುವಲ್ಲಿ ಹರಿವುದು ಮನಪಾಶ. ಅರಿದು ಅರ್ಪಿಸುವಲ್ಲಿ ಲಿಂಗದ ಒಡಲೆಲ್ಲ ತೃಪ್ತಿ. ತನ್ನನರಿದಲ್ಲಿ ಸಕಲಜೀವವೆಲ್ಲ ಮುಕ್ತಿ. ತನ್ನ ಸುಖದುಃಖ ಇದಿರಿಗೂ ಸರಿಯೆಂದಲ್ಲಿ, ಅನ್ನಬ್ಥಿನ್ನವಿಲ್ಲ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಮಾಟದಿಂದ ಮಾಡಿ ಕಂಡೆಹೆನೆಂಬವರೆಲ್ಲರು ಸ್ಥೂಲ ಸೂಕ್ಷ್ಮ ಅಧಮವೆಂದರಸಿ ಕೆಟ್ಟರು. ಅರಿದೆಹೆನೆಂದು ತಿರುಗಾಡುವರೆಲ್ಲರು ಕಂಗಳ ನೋಟ ಕಾಮನ ಕೂಟ, ಅಂಗದ ಸುಖಕ್ಕಾಗಿ ಕೆಟ್ಟರು. ಲಿಂಗವ ಪೂಜಿಸುವರೆಲ್ಲರು ಆ ಲಿಂಗದ ಅರ್ಚನೆಯನರಿಯದೆ, ಲಿಂಗದ ಅರ್ಪಿತವನರಿಯದೆ, ನೀರು ಓಗರವೆಂಬ ರೋಗದಲ್ಲಿ ಸತ್ತರು. ಇಂತೀ ಭೇದವನರಿದಲ್ಲಿ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಮನ ಬುದ್ಧಿ ಚಿತ್ತ ಅಹಂಕಾರವೆಂಬೀ ನಾಲ್ಕರಲ್ಲಿ ನಿಂದು ವಿಚಾರಿಸುವುದು ಜೀವನೋ, ಪರಮನೋ ? ಅದು ಮುಕುರದ ಒಳಹೊರಗಿನಂತೆ. ಘಟ ಪ್ರಾಣದ ಯೋಗವನರಿತಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಮನವನರಿದು, ನಯನ ಕಂಡು, ಕೈಯಲ್ಲಿ ಹಿಡಿದಂತಿರಬೇಕು. ಏನನರಿದಲ್ಲಿಯೂ ಕಾಯಕ್ಕೆ ಕರ್ಮವಳಿದು, ಜೀವಕ್ಕೆ ಭವ ಹರಿದು, ಉರಿ ಕೊಂಡ ಕರ್ಪುರದಂತೆ ಉಭಯಕ್ಕೊಡಲಿಲ್ಲ. ನಿಂದಲ್ಲಿ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಮನೋವಿಕಾರವೆಂದೆನಬಾರದು. ತನುವಿಕಾರವೆಂದೆನಬಾರದು. ತನು ಮನದ ಅನುವನರಿತಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಮೋಹದಿಂದ ಮಾಡುವುದೆಲ್ಲ ಬ್ರಹ್ಮನ ಪೂಜೆ. ಭಾವದಿಂದ ಮಾಡುವುದೆಲ್ಲ ವಿಷ್ಣುವಿನ ಪೂಜೆ. ನಿರ್ಭಾವದಿಂದ ಕಂಡೆಹೆನೆಂಬುದೆಲ್ಲ ರುದ್ರಪದ. ಇಂತೀ ತ್ರಿವಿಧಕ್ಕೆ ಹೊರಗಾಗಿ ನಿಂದುದು, ಮನಸಂದುದು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಮಾತಿಗೆ ಮಾತಡಗಿ, ನೀತಿಗೆ ನೀತಿಯಡಗಿ, ಮತ್ತೇತಕ್ಕೂ ಕಲೆದೋರದೆ ಉರಿ ಧರೆಯಂತೆ, ಸಿರಿ ಮೋಹದಂತೆ, ಉರವಣಿಯಳಿದ ಪರತತ್ವದ ಬೆಳಗು. ಇರವಿಗೆ ನಾಮ ನಷ್ಟವಾಯಿತ್ತು. ಉಭಯದ ಕುಲವಳಿದು, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ