ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರಿಯನೆಚ್ಚಲ್ಲಿ ತಾಗಿದವೊಲು, ತಪ್ಪಿದ ಭೇದವ ನಿಶ್ಚೈಸಿ ಕೈ ಅರಿವಂತೆ, ಕಾಯ ಜೀವದ ಸಂದಣಿಯಲ್ಲಿ, ಅರಿವೆಂಬ ವಸ್ತು ತಿರುಗಾಡುತ್ತಿರಲಾಗಿ, ಆ ಗುಣವ ಕರಿಗೊಂಡು, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಗುರುವಿನಲ್ಲಿ ಆಚರಣೆಯ, ಲಿಂಗದಲ್ಲಿ ಅನುಸರಣೆಯ, ಜಂಗಮದಲ್ಲಿ ದೂಷಣ ಮಾಡುತ್ತ ಲಿಂಗವನರಿತು, ಗುರುವ ಮರೆಯಬೇಕು. ಅರಿವನರಿತು, ಜಂಗಮವ ಮರೆಯಬೇಕು. ಗುರುವೆ ಲಿಂಗವಾಗಿ, ಲಿಂಗವೆ ಜಂಗಮವಾಗಿ, ಜಂಗಮವೆ ಅರಿವಾಗಿ ನಿಂದಲ್ಲಿ ಲಿಂಗವನರಿತು, ಗುರುವೆಂಬುದ ಮರೆಯಬೇಕು. ಗುರುವನರಿತು, ಜಂಗಮವ ಮರೆಯಬೇಕು. ಜಂಗಮವ ಮರೆದಲ್ಲಿ ಅರಿವು ಕರಿಗೊಂಡಿತ್ತು, ಮನಸಂದ ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಗೋವಧೆಯ ಮಾಡಿ, ಗೋದಾನವ ಮಾಡಿದಡೆ, ಕೊಂದ ಕೊಲೆಗೂ ಮಾಡಿದ ದಾನಕ್ಕೂ ಸರಿಯೆ ? ಆಚಾರಕ್ಕೂ ಅನಾಚಾರಕ್ಕೂ ಪಡಿಪುಚ್ಚವುಂಟೆ ? ನೇಮಕ್ಕೆ ಹಾನಿಯಾದಲ್ಲಿ ಭಂಗಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಗುರುವಿನಲ್ಲಿ ವಿಶ್ವಾಸಿಸಿ, ಲಿಂಗವ ಮರೆಯಬೇಕು. ಲಿಂಗದಲ್ಲಿ ವಿಶ್ವಾಸಿಸಿ, ಜಂಗಮವ ಮರೆಯಬೇಕು. ಜಂಗಮದಲ್ಲಿ ವಿಶ್ವಾಸಿಸಿ, ತ್ರಿವಿಧವ ಮರೆಯಬೇಕು. ತ್ರಿವಿಧವ ಮರೆದು ಅರಿದಲ್ಲಿ, ಲಿಂಗ ಬಿದ್ದಿತ್ತೆಂಬ ಸಂದೇಹವಿಲ್ಲದೆ, ಎತ್ತಿ ಅವಧರಿಸಿಕೊಂಡು, ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ, ಅರಿವಿಂಗೆ ಎಡೆದೆರಪಿಲ್ಲದೆ ನಿಂದುದು. ಅಂಗಕ್ಕೆ ಅದೆ ಪ್ರಾಯಶ್ಚಿತ್ತ, ಮನಸಂದ ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಗರಳವ ಬೈಚಿಟ್ಟುಕೊಂಡಿಪ್ಪ ಉರಗನಂತೆ, ಫಲವನಿಂಬಿಟ್ಟುಕೊಂಡಿಹ ತರುವಿನಂತೆ, ನಿಧಾನವ ಮರೆಸಿಕೊಂಡಿಪ್ಪ ಧರೆಯಂತೆ, ಗಂಧವನಿಂಬಿಟ್ಟ ಚಂದನದಂತೆ ಇವರಂಗವಾವ ತೆರದಲ್ಲಿ ನಿಂದಿತ್ತು ? ಸಂಗ ದುಸ್ಸಂಗವನರಿದು ಸಲೆ ಸಂದುದು, ನಿಂದುದು, ಮನಸಂದುದು ಮಾರೇಶ್ವರಾ.
--------------
ಮನಸಂದ ಮಾರಿತಂದೆ