ಅಥವಾ
(3) (0) (0) (0) (1) (0) (0) (0) (2) (0) (0) (1) (0) (0) ಅಂ (1) ಅಃ (1) (2) (0) (4) (0) (0) (0) (0) (1) (0) (0) (0) (0) (0) (0) (0) (2) (0) (2) (1) (2) (2) (0) (2) (0) (4) (0) (0) (0) (0) (1) (3) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕುರುವ ಹಿಡಿವರೆ ಗುರು ಕರಜಾತ. ಅರುಹಿನ ಪಿಂಡಕ್ಕೆ ಮರವೆ ಸೋಂಕುವುದೇನಯ್ಯ ? ವರಲಿಂಗ ಕರುಣದಿಂದ ವ್ಯರ್ಥವೆ ಅರ್ಥವಾಯಿತು. ಪರಮ ತೃಪ್ತ ತಾನು ತಾನಾದ ಬಳಿಕ ಪರಿಕ್ಷುಪ್ತವುಂಟೆ ? ವರಕೃಪೆಯುಳ್ಳ ವಸ್ತುವಿನ ವಚನವಂತಗೆ ಸಲ್ಲದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಕಲಿಕೆಯ ಮಾತಿನ ಮಾಲೆಯ ನೀಲೆ ಸೀಲೆಗೆ ನಿಲುಕದು ಸಂಗನ ಶರಣಸ್ಥಲ. ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ? ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ? ಕೊಲೆ ಆತ್ಮದಲಿ ಕೊನೆನಾಲಿಗೆಯ ಮೃದು ಕ್ರೋಧ..... ಫಲ ನಿಃಫಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ