ಅಥವಾ
(3) (0) (0) (0) (1) (0) (0) (0) (2) (0) (0) (1) (0) (0) ಅಂ (1) ಅಃ (1) (2) (0) (4) (0) (0) (0) (0) (1) (0) (0) (0) (0) (0) (0) (0) (2) (0) (2) (1) (2) (2) (0) (2) (0) (4) (0) (0) (0) (0) (1) (3) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನುಡಿನಡೆಯಿಂದ ಪಡೆದರು ಮೃಡನ ಸದ್ಭಕ್ತರು. ಕೊಡುವೆಡೆಗೆ ಕೊಂಬೆಡೆಗೆ ಆಸ್ಕರಿಸರು ವೇಷವಂ ತಾಳರು. ಬಡತನ ಬಂದರೆ ಅನುಭವಿಸಿ, ಬಾರದ ಬಯಸರು. ಹಿಡಿದ ವ್ರತವ ಬಿಡದೆ ನಡೆದು ಕೈವಲ್ಯವ ಪಡದರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ನಾನು ಭಕ್ತ , ನಾನು ಮಹೇಶ್ವರ, ನಾನು ಪ್ರಸಾದಿ, ನಾನು ಪ್ರಾಣಲಿಂಗಿ, ನಾನು ಶರಣ, ನಾನು ಐಕ್ಯನೆಂಬುದು ಅಜ್ಞಾನವಾಕ್ಯ. ವಾನರ ವನದೊಳಗಿದ್ದರೆ ಹನುಮನೆನಬಹುದೆ ? ಶ್ವಾನ ಬೂದಿಯೊಳು ಹೊರಳಿದರೆ ಭಸ್ಮಾಂಗಿಯಹುದೆ ? ಮಾನವರೆಲ್ಲ ಭಕ್ತರಾಪರೆ ? ಮರನೆಲ್ಲ ಗಂಧ ಚಂದನವಾಪುದೆ ? ಬಾನದ ಕುರುಳ ಸುಟ್ಟ ಬೂದಿಯಲ್ಲಿ ಭಸಿತವಾಪುದೆ ? ನಾನು ನೀನುಯೆಂಬ ವಂತಿನ ಸಂತೆಗೆ ಜ್ಞಾನವಳವಡದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ