ಅಥವಾ
(3) (0) (0) (0) (1) (0) (0) (0) (2) (0) (0) (1) (0) (0) ಅಂ (1) ಅಃ (1) (2) (0) (4) (0) (0) (0) (0) (1) (0) (0) (0) (0) (0) (0) (0) (2) (0) (2) (1) (2) (2) (0) (2) (0) (4) (0) (0) (0) (0) (1) (3) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಂದುಸಂಶಯವನಳಿದಲ್ಲದೆ ಮುಂದುದೋರದು ಭಕ್ತಿಸ್ಥಲ. ಗಂಧ ಗರಗಸದಿಂದ ಕೊರದು ಅರದು ಸುಟ್ಟರೆ ಪರಿಮಳ ಮಾಣ್ಬುದೆ ? ವೃಂದ ವನದಿ ವೃಕ್ಷ ಫಲವಾಪಕಾಲಕ್ಕೆ ಪಾಷಾಣದಲ್ಲಿಯಿಡುವೆಡೆ ನೊಂದೆನೆಂದು ನೋವ ತಾಳ್ದ ಮರನು ವರುಷಕೆ ಆಪುದೆ ? ಅಂದು ಏನು, ಇಂದು ಏನು ಭಕ್ತಂಗೆ ಕುಂದು ನಿಂದೆ ಸ್ತುತಿ ಒಂದೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಸೂತಕದೊಳು ಪುಟ್ಟಿತು ಸುಜ್ಞಾನ ; ಶೀತಳದೊಳು ಅಪವಿತ್ರವೆ ಪವಿತ್ರ. ಜ್ಯೋತಿ ಹೊಲೆಯರ ಮನೆಯಲ್ಲಿರೆ ಕುಲಹೀನನೆನಬಹುದೆ ? ಕಾತುರವೆ ಅಕ್ಕುಲ, ಹುಸಿಯೆಂಬುದೆ ಹೊಲೆಯ, ಹಸುವೆಂಬುದೆ ಹಾರುವ, ವಿಷಯವೆಂಬುದೆ ಮಾದಿಗ. ಜಾತಿಯ ಜನಿತದ ಮೂತ್ರದ ಕುಕ್ಷಿಯೊಳಗಣ ಮೋಹವಲ್ಲವೇನಯ್ಯ ? ನೂತನ ನೂರೊಂದು ಕುಲ, ಹದಿನೆಂಟು ಸಮಯ, ಆರು ದರಿಸಿನ, ಜ್ಯೋತಿರ್ಮಯದ ಲಿಂಗದ ಗೂಡು. ಅಂಗವಿಕಾರ ಗೀತದ ಮಾತು ಅಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ