ಅಥವಾ
(3) (0) (0) (0) (1) (0) (0) (0) (2) (0) (0) (1) (0) (0) ಅಂ (1) ಅಃ (1) (2) (0) (4) (0) (0) (0) (0) (1) (0) (0) (0) (0) (0) (0) (0) (2) (0) (2) (1) (2) (2) (0) (2) (0) (4) (0) (0) (0) (0) (1) (3) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿವಲಿಖಿತಕ್ಕೆ ಸಿಕ್ಕು-ವಕ್ರಗಳುಂಟೇನಯ್ಯ ? ಭವಭವದಲ್ಲಿ ಬಂದರು ಬ್ರಹ್ಮ ವಿಷ್ಣು ರುದ್ರರು, ಮಾರ್ಕಂಡೇಯಗೆ ಮರಣ ತಪ್ಪುವುದೆ ? ರವಿ ಚಂದ್ರರ್ಕಗಳಿಗೆ ರಾಹು ಕೇತು ಅಡರದೆ ಬಿಡುವುದೆ ? ಭುವನದ ಹೆಪ್ಪುವೊಡದು ಭೂತಳವೊಂದಾಗದೆ ? ದಿವಾರಾತ್ರಿಯೇಕ ದೀಪ್ತಿ ; ಏಕೋವರ್ಣ ಶಾಂತಕ್ಕೆ ಪವಿತ್ರ ಅಪವಿತ್ರ ಲೋಕಕ್ಕೆ ಬ್ಥಿನ್ನ ಕಾಣೈ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಶರೀರ ಭಿನ್ನ, ಪರಮಾತ್ಮ ಏಕವೆಂಬುದೇ ವೇದವಾಕ್ಯ. ಶರೀರ ಗೊಹೇಶ್ವರ, ಈಶ್ವರ ಪರಮಾರ್ಥ, ಪರಿಪೂರ್ಣನೆಂಬುದೇ ಭಕ್ತಿವಾಕ್ಯ. ವನಚರವಿದೇಕೆ ? ಚರವಿದೇಕೆ ? ನರರೇನ ಬಲ್ಲರಯ್ಯ ಅಪ್ರತಿಮಲಿಂಗಾಂಗವ ? ಅರುಹಿನ ತಿರುಳು, ಮರಹಿನ ಮರುಳು, ಕರುಳು ಕಡುಸೂತ್ರ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಶಬ್ದವೇ ಸಾಹಿತ್ಯ, ಶಬ್ದವೇ ಸಾರೂಪ್ಯ, ಶಬ್ದವೇ ಸಾಲೋಕ್ಯ, ಶಬ್ದವೇ ಸಾಮೀಪ್ಯ, ಶಬ್ದವೇ ಸಾಯುಜ್ಯ ಶಬ್ದ ಸಮಾಧಾನಲಿಂಗಾಂಗಿಗೆ ಚತುರ್ವಿಧಪದ. ಶಬ್ದವ ಸೂಸುವರು, ಆಸ್ಕ[ರಿಸ]ರು ಸೂಸರು. ಈಶ್ವರನ ಭಕ್ತರು ಶಬ್ದದಲ್ಲಿಯೇ ಮೋಸಹೋದರು. ಆಶಾಕೃತದಿಂದೀ ಅಭಾಷರು ಶಬ್ದದ ಮನದ ಕೊನೆಯಲ್ಲಿ ಆಡುತಿಪ್ಪರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ