ಅಥವಾ
(3) (0) (0) (0) (1) (0) (0) (0) (2) (0) (0) (1) (0) (0) ಅಂ (1) ಅಃ (1) (2) (0) (4) (0) (0) (0) (0) (1) (0) (0) (0) (0) (0) (0) (0) (2) (0) (2) (1) (2) (2) (0) (2) (0) (4) (0) (0) (0) (0) (1) (3) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಲಿಂಗ ಜಂಗಮವೆಂಬರಲ್ಲದೆ ಅರಿವುದಕ್ಕೆ ಒಬ್ಬರೂ ಇಲ್ಲವಯ್ಯ. ಕರುವ ಕಟ್ಟಿ ಎರದಲ್ಲದೆ ಕಂಚಿನ ಸ್ವರೂಪು ಅಪ್ಪುದೆ ? ಸ್ಥಿರಚಿತ್ತದಿಂದ ಜೀವನೆ ಪರಮ, ಪರಮನೆ ಜೀವನೆಂದು ಅರಿವುದು. ಪರಿಪೂರ್ಣವಪ್ಪುದೇ ವಿರಹಿತ ಲೋಕಕ್ಕೆ ? ಅದಲ್ಲದೆ ಏಕವಾಕ್ಯನು ಅಲ್ಲ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಪ್ರಾಣಲಿಂಗ ಸಂಗ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಗುರು ತೀರ್ಥಪ್ರಸಾದ ಅರುಹಿನಘಟ್ಟಿ ದೊರಕೊಂಬುದೆ ನರಕೀಲಕರಿಗೆ ಬರಿಯ ಮಾತಿನಮಾಲೆ ಕೊಳುಕೊಡೆಯಲ್ಲವು. ಕರವೆತ್ತಿ ಕೊಟ್ಟಾತ ಗುರುವಲ್ಲ ; ಕೊಂಡಾತ ಶಿಷ್ಯನಲ್ಲ. ನಿರುತ ನಿಜಗೊಹೇಶ್ವರನಲ್ಲಿ ಬೆರದು ಕೊಂಬುದು ತೀರ್ಥ; ಅರಿತು ಕೊಂಬುದು ಪ್ರಸಾದ. ಮರೆಯಿದು ಮಾಟ, ಮತ್ರ್ಯದ ಕೂಟ, ಮತಿಗೆ ಬೇಟ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಗುರುವ ತನ್ನೊಳಗರಿವುದು ಗುಪ್ತಜ್ಞಾನವಯ್ಯ. ಪುರೋಹಿತನಾಗುವುದು ಅಂಗದ್ವಾರಕ್ಕೆ. ಪುರುಷಾರ್ಥ ಮರುಳುಗಳು ಎತ್ತ ಬಲ್ಲರು ಮಂತ್ರ ಉಪದೇಶವ ? ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಅರುಹಿತರಿಗುಂಟಲ್ಲದೆ ಅನಂಗಿಗುಂಟೆ ? ಗರಿಯಿಲ್ಲದ ಅಂಬ ಹೆದೆಯಿಲ್ಲದ ಬಿಲ್ಲಿನಲ್ಲಿ ಸ್ವರವಂದಿಗನಿಲ್ಲದೆ ಎಚ್ಚಂತೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಗುರುಭಕ್ತಿಸ್ಥಲ ತತ್ವಜ್ಞಾನವು ಅರುಹುತರಿಗಲ್ಲದೆ ದೊರಕುವುದೆ ? ದೂರಣ ಮಾರ್ಗಕೆ ಕರಿ ಕನ್ನಡಿಯೊಳಡಗಿರದೆ ? ಕಾರ್ಯಕಾರಣ ಪರುಷ ಪಾಷಾಣದೊಳಗಿದ್ದರೇನು ? ಪಾಷಾಣದ ಮಗನೆ ? ಗುರುಸ್ಥಲದರುಹು ನರಜೀವನದವರಿಗೆ ಸಿಕ್ಕದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ