ಅಥವಾ
(3) (0) (0) (0) (1) (0) (0) (0) (2) (0) (0) (1) (0) (0) ಅಂ (1) ಅಃ (1) (2) (0) (4) (0) (0) (0) (0) (1) (0) (0) (0) (0) (0) (0) (0) (2) (0) (2) (1) (2) (2) (0) (2) (0) (4) (0) (0) (0) (0) (1) (3) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಾತೇ ಮಂತ್ರ, ಮಾತೇ ತಂತ್ರ, ಮಾತೇ ಯಂತ್ರ, ಮಾತೇ ಮಾತಿನಿಂದಲಿ ಮಥನ ಮರಣವು. ಮಾತು ತಪ್ಪಿ ಆಡುವಂಗೆ ಆತ್ಮಲಿಂಗವೆಲ್ಲಿಯದು ? ಪ್ರೇತ ಲಿಂಗಸಂಸ್ಕಾರಿಯೆಂಬವ ಮಾತಿಗೆ ತಪ್ಪುವನೆ ? ಭೂತಪ್ರಾಣಿ ಲಿಂಗಪ್ರಾಣಿಯಾಪನೆ ? ಬನ್ನಣೆ ಮಾತಿನ ರೀತಿ- ನಿರುತವೆ ಸದಾಚಾರ, ನಿರ್ಣಯವೆ ಲೋಕಾಚಾರ, ನಿಜ ಸ್ವರೂಪವೇ ಸದಾಚಾರ, ಯಾತನ ಶರೀರಕ್ಕೆ ಅಳವಡದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಮಲಿನವುಂಟೆ ಮಹಾಸಮುದ್ರಕ್ಕೆ ? ಅರಸಲು ಕೊಲೆ ಹಗೆ ಉಂಟೆ ಸರ್ವ ಜೀವದಯಾಳ್ದಂಗೆ ? ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ? ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲು? ಭೇದವುಂಟೆ ಅಗ್ನಿ ಆಪೋಷಣಕೆ ? ನಿದ್ದರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯೆ ಆಧಾರ ಪ್ರಿಯವೆ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಮಾಡುವರೆ ಮಾಟದಂತಲ್ಲ ; ಕೂಡುವರೆ ಕೂಟದಂತಲ್ಲ. ಕೃಪೆಯದು ಲಿಂಗವ ಮಾಡುವರೆ ಕಂಗಳುಯಿಲ್ಲ ತ್ರಿವಿಧ ಸೂತ್ರವ ನೀಡಿ ನಿಜವಿಲ್ಲದೆ ಕೆಟ್ಟಿತ್ತು. ಆಡಾಡಿ ಅರ್ಥವುಹೋಯಿತ್ತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಮಿಸುರವಂ ನುಡಿವರು, ಮುಸುರುವರು ನೋಣದಂತೆ. ಆಶಾಬದ್ಧಕೆ ಅಸಗ ಮೋಳಿಗೆ ಹೊತ್ತಂತೆ ಜಡೆ ಮಕುಟಗಳು. ಉಸುರುವರು ಪ್ರಣಮ ಉಪದೇಶವ, ಅಶನಾರ್ಥಿಗಳು ಬಸವನ ಕಂಡು ಅರಿಯರು, ಕೇಳಿ ಅರಿಯದೆ ಒಡೆಯರಾದರು. ಉಂಡಮನೆಗೆರಡ ಬಗೆದ ಕಾರಣ ಕೆಂಡವು ಆರಿ ಬೂದಿಯಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ