ಅಥವಾ
(3) (0) (0) (0) (1) (0) (0) (0) (2) (0) (0) (1) (0) (0) ಅಂ (1) ಅಃ (1) (2) (0) (4) (0) (0) (0) (0) (1) (0) (0) (0) (0) (0) (0) (0) (2) (0) (2) (1) (2) (2) (0) (2) (0) (4) (0) (0) (0) (0) (1) (3) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದ್ವಂದ್ವವು ಜೀವನ ಕಾಯಕ್ಕೆ ಒಂದಲ್ಲ ಅನಂತ ಆಸ್ಕರ. ಚಂದ್ರಾರ್ಕ ಹುಟ್ಟು ಹೊಂದು ಹೋಹುದು, ಬಪ್ಪುದು ; ಒಂದನೆ ತಿಳಿವುದು ಸದ್ಬಿಂದು ಬೀಜ ಸಹಜವ. ಮುಂದಣ ಸ್ಥಿತಿ ಹಿಂದಣ ಭವ. ಅಂದಿಗಂದಿಗೆ ಕಾಬುದು ಅಗಣಿತಗಣಿತ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ದಾನಧರ್ಮ ಪರೋಪಕಾರವೆಂಬ[ವ] ಹೀನ ಮರುಳರು ಎತ್ತ ಬಲ್ಲರಯ್ಯ ? ದೀನನಾರು ? ದಾನದಾರು ? ಮಾನಿತ ಜ್ಞಾತ ಕೈಯಪರ ಉಪಕಾರ ಬಾನದ ಕುರುಳೊಳು ಚೇಳಹಾಕಿ ಮಡಗುವರೆ ? ಜ್ಞಾನದ ವಾಕ್ಯವಲ್ಲವು. ನಾನು ನೀನುಯೆಂಬ ಧೇನುಕರ ಮಾತಿಗೆ ಮೇಘಸುರಿಯುತಿದೆ ಬೆಳೆ ಬೆಳೆಯುತಿದೆ ನಾ ನೀಡಿದೆ ನಾ ಮಾಡಿದೆ, ನಾ ಬೇಡಿದೆನೆಂಬ ಜನ್ಮಕೆ ನರಕ ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ
--------------
ವೀರಸಂಗಯ್ಯ