ಅಥವಾ
(3) (0) (0) (0) (1) (0) (0) (0) (2) (0) (0) (1) (0) (0) ಅಂ (1) ಅಃ (1) (2) (0) (4) (0) (0) (0) (0) (1) (0) (0) (0) (0) (0) (0) (0) (2) (0) (2) (1) (2) (2) (0) (2) (0) (4) (0) (0) (0) (0) (1) (3) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತತ್ವಭಕ್ತಿ, ತತ್ವಮುಕ್ತಿ, ತತ್ವ ಉತ್ಪತ್ಯದ ತನು ಸಾರಾಯ ತತ್ವವೃಕ್ಷದಿಂದ ಪುಟ್ಟಿದವು. ಎಂಬತ್ತು ನಾಲ್ಕು ಲಕ್ಷ ಸಂಕಲ್ಪವೆಲ್ಲ ತತ್ವಾದಿಗಳು. ಯಾತಕ್ಕೆ ಭೇದವ ಮಾಳ್ಪಿರಯ್ಯಾ ? ಪೃಥ್ವಿ ಪೃಥ್ವಿಯ ಕೂಡಿತು ಅಪ್ಪು ಅಪ್ಪುವ ಕೂಡಿತು ವಾಯು ವಾಯುವ ಕೂಡಿತು ಆಕಾಶ ಆಕಾಶದೊಳು ಸಹಕಾರ್ಯವಾಯಿತು. ಆ ಭಕ್ತನ ವಿಭೇದವಿಲ್ಲದ ಕಾರಣದಿಂದ ಶರೀರ ಭಿನ್ನವಾಗದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ತನ್ನ ಧರ್ಮಕೆ ನೀಡಿಸುವ ಅನ್ನ ಉದಕ ಅರವಟ್ಟಿಗೆ ಕೆರೆ ಬಾವಿ ಉನ್ನತವಿತ್ತವಿತ್ತ, ಮನದಂತೆ ಮಾಂಗಲ್ಯ ಘನಮಹಾಲಿಂಗವು ನನ್ನದು ತನ್ನದು ಎಂಬ ಭಿನ್ನಭಾವದ ಭ್ರಾಂತು ಭವಿಗಳು ಅನಿತ್ಯವೆಂಬರು. ಸೊನ್ನಾರಿಯಲ್ಲಿ ಹುಟ್ಟಿದ ಹೊನ್ನು ಸೊನ್ನಾರಿಯ ಮಗನೆ ? ಉನ್ಮತ್ತದಲ್ಲಿ ಹುಟ್ಟಿದ ಹೆಣ್ಣು ಉನ್ಮತ್ತದ ಮಗಳೆ ? ತನ್ಮಯದಲ್ಲಿ ಹುಟ್ಟಿದ ಮಣ್ಣು ತನ್ಮಯದ ಮಗನೆ ? ಸನ್ಮನ ಮೂರರ ಮಾಯವೆ ಅಭ್ರಚ್ಛಾಯೆ ಗೊಹೇಶ್ವರಲಿಂಗನ ಉಪಾಯವು. ನನ್ನದು ನಿನ್ನದುಯೆಂದು ಹೋರಾಡುವ ಅನ್ಯಾಯಿಗಳ ಮಾತಕೇಳಲಾಗದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ