ಅಥವಾ
(3) (0) (0) (0) (1) (0) (0) (0) (2) (0) (0) (1) (0) (0) ಅಂ (1) ಅಃ (1) (2) (0) (4) (0) (0) (0) (0) (1) (0) (0) (0) (0) (0) (0) (0) (2) (0) (2) (1) (2) (2) (0) (2) (0) (4) (0) (0) (0) (0) (1) (3) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪುಣ್ಯಪಾಪವೆಂಬೆರಡನು ಕಣ್ಣಿಲಿ ಕಾಣರು, ಕಿವಿಯಲಿ ಕೇಳರು. ಪಣ್ಣ ಮೆದ್ದು ಬೀಜವನುಗುಳುವಂತೆ ಪುಣ್ಯವನೆತ್ತಬಲ್ಲರಯ್ಯ ? ಕಣ್ಣೊಳು ಪಾಪ, ಕರ್ಣದೊಳು ಪುಣ್ಯ ಬಣ್ಣಿಸುವರಾರಳವಲ್ಲ . ಬಯಲನೆ ಬಯಲು ನುಂಗಿತ್ತು . ನಿರ್ವಯಲು ಈ ದೇಹ ಮಣ್ಣಿನ ಮಾಟಕೂಟದೊಳು ಬಣ್ಣವನಂತ ಸಿಕ್ಕಿಯವೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಪೃಥ್ವಿಯ ಪೋಲ್ವಡೆ ಭಕ್ತ , ಅಪ್ಪುವ ಪೋಲ್ವಡೆ ಮಹೇಶ್ವರ, ಅಗ್ನಿಯ ಪೋಲ್ವಡೆ ಪ್ರಸಾದಿ, ವಾಯುವ ಪೋಲ್ವಡೆ ಪ್ರಾಣಲಿಂಗಿ, ಆಕಾಶವ ಪೋಲ್ವಡೆ ಶರಣ, ಅಂತು ಐಕ್ಯ ಅಯ್ದರೊಳು ಸಕಾರಣ ಸಂಗತವದು ಸೌಖ್ಯ ಷಡುಸ್ಥಲಬ್ರಹ್ಮ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ