ಏಳುಕೋಟಿ ಮಹಾಮಂತ್ರಗಳ
ಉಪಮಂತ್ರ ಕೋಟ್ಯಾನುಕೋಟಿಗಳ
ಕಲಿತು ತೊಳಲಿ ಬಳಲುವುದೇಕೋ ?
ಭಾಳಾಕ್ಷನ ಮೂಲಮಂತ್ರ ಒಂದೇ ಸಾಲದೇ !
ಸಕಲವೇದಂಗಳ ಮೂಲವಿದು, ಸಕಲಶಾಸ್ತ್ರಂಗಳ ಸಾರವಿದು,
ಸಕಲಾಗಮಂಗಳ ಅರುಹಿದು, ಸಕಲಮಂತ್ರಂಗಳ ಮಾತೆಯಿದು.
ಇಂತಪ್ಪ ಶಿವಮಂತ್ರವೆಂಬ ಸಂಜೀವನವು ಎನ್ನಂಗಕ್ಕೆ ಸಂಗಿಸಲಾಗಿ
ಎನಗೆ ಮರಣದ ಭಯ ಹಿಂಗಿತಯ್ಯಾ ಅಖಂಡೇಶ್ವರಾ !