ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಂಬತ್ತು ಇಟ್ಟಿಯ ನಡುವೆ ಒಂದು ಕತ್ತಿಯ ನಟ್ಟು ತುಟ್ಟತುದಿಯ ಮೆಟ್ಟಿ ಆಡಲಾಗಿ, ಆ ಕತ್ತಿ ಇಟ್ಟಿಯ ತಾಗಿ, ಆ ಇಟ್ಟಿ ನಿಷ್ಠೆವಂತರ ತಾಗಿ ಸತ್ತರೆಲ್ಲರು ಆಟಕ್ಕೆ ಮೊದಲೆ ರೇಕಣ್ಣಪ್ರಿಯ ನಾಗಿನಾಥನಲ್ಲಿ.
--------------
ಬಹುರೂಪಿ ಚೌಡಯ್ಯ
ಒಂದರಲ್ಲಿ ಬಂದು, ನಾಲ್ಕರಲ್ಲಿ ಆಡಿ ಒಂದರಲ್ಲಿ ಅಡಗಿ, ಮೂರರಲ್ಲಿ ಕೂಡಿ ಎಂಟರಲ್ಲಿ ಕಂಟಕವಾಯಿತ್ತು. ರೇಕಣ್ಣಪ್ರಿಯ ನಾಗಿನಾಥನಲ್ಲಿ ಪುರೆಹರೆ ಎನುತಿರ್ದೆನು.
--------------
ಬಹುರೂಪಿ ಚೌಡಯ್ಯ
ಒಡೆಯರ ಸಹಪಙ್ಞ್ತಯಲ್ಲಿ ಪರಿಯಾಣ ಅಡ್ಡಣಿಗೆಯನಿರಿಸಿಕೊಂಡು ಉಂಬ ಸಮಗ್ರಾಹಕನಲ್ಲ. ನಿಮ್ಮ ಶರಣರ ಪಾದೋದಕಕ್ಕಲ್ಲದೆ ಕೈಯಾನೆ. ನಿಮ್ಮ ಶರಣರ ಪ್ರಸಾದಕ್ಕಲ್ಲದೆ ಬಾಯ್ದೆರೆಯೆ. ನಿಮ್ಮ ಲಾಂಛನಧಾರಿಯ ಮನೆಯ ಪ್ರತಿಭೃತ್ಯನಾಗಿರಿಸಯ್ಯಾ ನೀನೆನ್ನ ರೇಕಣ್ಣಪ್ರಿಯ ನಾಗಿನಾಥಾ.
--------------
ಬಹುರೂಪಿ ಚೌಡಯ್ಯ