ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರಣವಮಂತ್ರರೂಪ ಪರಶಿವನ ಚೈತನ್ಯ ಎಲ್ಲಾ ಮಂತ್ರಂಗಳಿಗೆ ಚೈತನ್ಯವು. ಎಲ್ಲಾ ತಂತ್ರಂಗಳಿಗೆ ಚೈತನ್ಯವು. ಓಂಕಾರಂ ವ್ಯಾಪ್ತಿ ಸರ್ವತ್ರಂ ಓಂಕಾರಂ ಗೋಪ್ಯ ಮಾನವಂ | ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ || ಎಂದು, ಎಲ್ಲಾ ವೇದಂಗಳಿಗೆ ತಾನೆ ಚೈತನ್ಯವು. ಇಂತಲ್ಲದಡೆ, ಎಲ್ಲಿಹದು ಜ್ಞಾನಸಾಮಥ್ರ್ಯವು. ಅದು ಕಾರಣ, ಮಂತ್ರವೆ ಅವಯವವು ರೇಕಣ್ಣಪ್ರಿಯ ನಾಗಿನಾಥಂಗೆ.
--------------
ಬಹುರೂಪಿ ಚೌಡಯ್ಯ
ಪದ್ಮಾಸನದಲ್ಲಿ ಕುಳ್ಳಿರ್ದು ಆಧಾರಮಂ ಬಲಿದು ವಾಯುವ ಊಧ್ರ್ವಕ್ಕೆ ತಿದ್ದಿ ಮನ ಪವನ ಬಿಂದುವ ತ[ರ]ಹರವಂ ಮಾಡಿ ಷಡಾಧಾರ ಕಮಲವನೂಧ್ರ್ವಮುಖವಂ ಮಾಡಿ ಮೇಲಣ ಸಹಸ್ರಕಮಲಮಧ್ಯದೊಳಿಪ್ಪ ಜ್ಯೋತಿರ್ಲಿಂಗದಲ್ಲಿ ಮನವ ನಿಲಿಸಿ, ನೆನೆನೆನೆದು ಕೀಟಭೃಂಗನ್ಯಾಯದಂತಪ್ಪುದೆ ಯೋಗ ರೇಕಣ್ಣಪ್ರಿಯ ನಾಗಿನಾಥ.
--------------
ಬಹುರೂಪಿ ಚೌಡಯ್ಯ