ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತರ ಬರವಿಂಗೆ ಮಂಚವನಿಳಿಯದ ಕಾರಣ ಧಮ್ಮು ದ್ಥಿಮ್ಮನೆ ಬೆನ್ನಬಡಿದು ಅವರಟ್ಟುಗೆಲಸಕ್ಕೆ ಹೋಗೆನಾಗಿ ಎನ್ನ ತೊಡೆಯ ಕೊಯ್ದುಕೊಂ[ಬೆ]. ರೇಕಣ್ಣಪ್ರಿಯ ನಾಗಿನಾಥನ ಮಹಾಮನೆಯಲ್ಲಿ ಕಾಯದಂಡ ಕಲಕೇತ [ನಾನು].
--------------
ಬಹುರೂಪಿ ಚೌಡಯ್ಯ
ಭಕ್ತದೇಹಿಕದೇವನೆಂದು ಅಂಜದ ಮತವದೇನಪ್ಪುದೊ ? ಭಯವಿಲ್ಲದ ಭಕ್ತಿ, ದಯವಿಲ್ಲದ ಶೀಲ ಗುಣವಿಲ್ಲದ ನಂಟು ಮುಂದೇನಪ್ಪುದೊ ? ಭಯವ ಮರೆದು, ಲಿಂಗದೊಡನೆ ಸಹಭೋಜನ ಮಾಡಿದಡೆ ಪಂಚಮಹಾಪಾತಕ ತಪ್ಪದು. ಅದೆಂತೆಂದಡೆ : ಗುರುವ ಬಿಟ್ಟು ಲಿಂಗವನೊಲಿಸಿಹೆನೆಂದಡೆ ಗುರು ಲಿಂಗ ಎರಡೂ ಇಲ್ಲದೆ ಹೋಹವು. ಗುರುವೆಂಬುದೆ ಭಯಭಕ್ತಿ, ಲಿಂಗವೆಂಬುದೆ ಶಿವನು. ಈ ಭಯಭಕ್ತಿಯಿಲ್ಲದೆ ಶಿವನನೊಲಿಸಬಾರದು ರೇಕಣ್ಣಪ್ರಿಯ ನಾಗಿನಾಥಾ.
--------------
ಬಹುರೂಪಿ ಚೌಡಯ್ಯ
ಭವಭಾರಿ ಬಂಡಿ ಎತ್ತಿನ ಕಣ್ಣಿ ಹರಿದ ಕಾರಣ ನಿನ್ನ ಅರಿವಿನ ಬೆಳಗು ಗುರಿ ತಾಗಿ ಬಿದ್ದಡೂ ಎತ್ತು ಅತ್ತ ಹೋಗಿಯೆ ಮರಳಿತು. ಆ ಹೆಜ್ಜೆಯನು ಏಕೆ ಇಕ್ಕರೊ ? ಎತ್ತ ಎತ್ತನೆ ಹೊತ್ತು ಮೀರಿ ಓಡಿತ್ತಾಗಿ ಹಿಂದೆ ಅರಸುವರಿಲ್ಲ. ರೇಕಣ್ಣಪ್ರಿಯ ನಾಗಿನಾಥನ ಗೊಗ್ಗನೆತ್ತಿಗೆ ಹಗ್ಗವಿಲ್ಲ.
--------------
ಬಹುರೂಪಿ ಚೌಡಯ್ಯ