ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಃಕಲಶಿವ ತಾನೆ ಗುರುರೂಪವಾಗಿ ಕೊಂಡಾಡಿದನಯ್ಯ ಬಸವಣ್ಣನು. ಆ ಬಸವಣ್ಣನಿಂದ ಬಹುರೂಪ ಧರಿಸಿ ಹಲವಾಕಾರವನಾಡಿ ಸಾಕಾರದಲ್ಲಿ ಸನುಮತನಾದೆನು. ನಿರಾಕಾರದಲ್ಲಿ ನಿರತವಾದ ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಲಿರ್ದೆನು.
--------------
ಬಹುರೂಪಿ ಚೌಡಯ್ಯ
ನಿಃಪತಿ ಬಂದು ಒಳಕೊಂಡಲ್ಲಿ ನಿರಾಶ್ರಯ ಬಂದು ಹೊದಕೆಯಾದಲ್ಲಿ ನಿರಾಲಂಬವಾಯಿತ್ತಲ್ಲಾ ಎನ್ನ ಬಹುರೂಪು. ಎನ್ನ ಬಹುರೂಪಕ್ಕೆ ಪ್ರಾಣಲಿಂಗ ಬಸವ ಕಾಣಾ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿದೆ
--------------
ಬಹುರೂಪಿ ಚೌಡಯ್ಯ
ನನಗೆ ನಾನೆ ಗುರುವಾದೆನಯ್ಯಾ. ನನಗೆ ನಾನೆ ಲಿಂಗವಾದೆನಯ್ಯಾ. ನನಗೆ ನಾನೆ ಜಂಗಮವಾದೆನಯನ್ಯಾ. ನನಗೆ ನಾನೆ ಪ್ರಸಾದವಾದೆನಯ್ಯಾ. ನನಗೆ ನಾನೆ ಭಕ್ತನಾದೆನಯ್ಯಾ. ರೇಕಣ್ಣಪ್ರಿಯ ನಾಗಿನಾಥನಲ್ಲಿ ಆಗುಹೋಗನರಿಯೆನಯ್ಯಾ.
--------------
ಬಹುರೂಪಿ ಚೌಡಯ್ಯ