ಅಥವಾ
(5) (3) (3) (0) (0) (0) (0) (0) (5) (0) (0) (3) (0) (0) ಅಂ (1) ಅಃ (1) (5) (0) (2) (1) (0) (1) (0) (4) (0) (0) (0) (0) (0) (0) (0) (1) (0) (0) (0) (3) (2) (0) (5) (3) (3) (1) (0) (0) (2) (1) (2) (2) (3) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಸವಣ್ಣನಿಂದ ಶುದ್ಧಪ್ರಸಾದಿಯಾದೆ. ಚನ್ನಬಸವಣ್ಣನಿಂದ ಸಿದ್ಧಪ್ರಸಾದಿಯಾದೆ. ಪ್ರಭುದೇವರಿಂದ ಪ್ರಸಿದ್ಧಪ್ರಸಾದಿಯಾದೆ. ಇವರೆಲ್ಲರ ಪ್ರಸಾದಿಯಾಗಿ ರೇಕಣ್ಣಪ್ರಿಯ ನಾಗಿನಾಥನಲ್ಲಿ ಸೊಬಗ ಮೆರೆದೆ
--------------
ಬಹುರೂಪಿ ಚೌಡಯ್ಯ
ಬಿತ್ತೆತ್ತ ಮುಂತಾಗಿ ಬಿತ್ತಿದಡೇನೋ ? ಬೀಜ ನಿರಾಳದ ಬೆಳಸು. ಶರಣಚಾರಿತ್ರವೆಂತಿರ್ದಡೇನೋ ? ರೇಕಣ್ಣಪ್ರಿಯ ನಾಗಿನಾಥನ ಶರಣರ ಅವರಿವರೆಂದಡೆ ನಾಯಕನರಕ.
--------------
ಬಹುರೂಪಿ ಚೌಡಯ್ಯ
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ ಐವರು ಮಕ್ಕಳು ಜನಿಸಿದರೆಂತೆಂಬೆ : ಒಬ್ಬ ಭಾವದ ರೂಪು, ಒಬ್ಬ ಪ್ರಾಣದ ರೂಪು. ಒಬ್ಬ ಕಾಯದ ರೂಪು, ಒಬ್ಬನೈಮುಖನಾಗಿ ವಿಷಯಕ್ಕೆ ಕಾಯರೂಪನಾದ. ಒಬ್ಬನೆಲ್ಲರ ಕೂಡಿಕೊಂಡು ನಿರವಯವಾಗಿರ್ಪ. ಇಂತಿವರ ಕೂಡಿಕೊಂಡು ಈ ಲೋಕಕ್ಕೆ ಬಂದೆನು. ಆನು ಹೋಗೆನಯ್ಯಾ, ಇನ್ನು ಹೋದೆನಾದಡೆ ಎನಗಿರ ಠಾವಿಲ್ಲ. ಮುನ್ನ ಹೋದವರೆಲ್ಲಾ ತಗಹಿನಲ್ಲಿ ಕುಳ್ಳಿರ್ದರು. ಆನು ಆ ತಗಹನರಿತೆನಾಗಿ ಬಲ್ಲಡೆ ಬಂದೆನಿಲ್ಲಿಗೆ. ಇಲ್ಲೆನ್ನೊ ಮದ್ದಳಿಗ, ಒಲ್ಲೆನ್ನೊ ಕಹಳೆಕಾರ. ಬಿಂದುವ ಹರಿದು ತಿಂದು ಹಾಕಿರೊ, ತಂತಿಯ ಹರಿಯಿರೊ. ತಾಳ ವಿತಾಳವಾಯಿತ್ತಲ್ಲಾ ಕೇಳಿರೆ ಕೇಳಿರೆ. ನಿಃಶೂನ್ಯವಾಯಿತ್ತಲ್ಲಾ ಕೇಳಯ್ಯ ಕೇಳಯ್ಯ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಬಂದ ಬಹುರೂಪದಲ್ಲಿ ಸಂದಿಲ್ಲದೆ ಆಟವನಾಡುತ್ತ ಬಂದ ಬಂದವರ ಮೆಚ್ಚಿಸುತ್ತ ಅವರವರಂದಕ್ಕೆ ಕೊಂಡಾಡಿ, ಬಂದುದ ಕೈಕೊಂಡೆ ರೇಕಣ್ಣಪ್ರಿಯ ನಾಗಿನಾಥನಲ್ಲಿ.
--------------
ಬಹುರೂಪಿ ಚೌಡಯ್ಯ
ಬಾಯೊಳಗಿದ್ದ ರುಚಿಯನುಗುಳಿ ನುಂಗಲೇಕೇ ? ಕಣ್ಣಿನೊಳಗಿದ್ದ ರೂಪನಗಲಿ ನೋಡಲುಂಟೆ ? ಕೈಯೊಳಗಿದ್ದ ವಸ್ತುವ ಬಿಟ್ಟು ಹಿಡಿಯಲುಂಟೆ ? ತನ್ನೊಳಗಿದ್ದ ಘನವ ಭಿನ್ನವಿಟ್ಟರಸುವಡೆ. ರೇಕಣ್ಣಪ್ರಿಯ ನಾಗಿನಾಥಾವಣ್ಣನಿಂದ ಬುದುಕಿತೀ ಲೋಕವೆಲ್ಲ.
--------------
ಬಹುರೂಪಿ ಚೌಡಯ್ಯ