ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅರೆಬಿರುದು ನುಡಿದವರು ಕೇಳಿರೆ. ಕೆರಳಿಕೆಯ ನುಡಿವರು, ನೆರೆದ ಮಂದಿಯ ಕಂಡುಬ್ಬುವರು ಕೊಬ್ಬುವರು, ನಿರುತದ ಕಾಳಗವೆಂದಡೆ ಬಿರುದ ಬೀಸಾಡುವರು, ಅರೆದು ಭಕ್ತಿಯ ಮಾಡಿ, ನೆರೆಭಕ್ತನೆಂದರೆ ಎಂತು ಮೆಚ್ಚುವನಯ್ಯಾ, ನಮ್ಮ ದೇವರಾಯ ಸೊಡ್ಡಳ.
--------------
ಸೊಡ್ಡಳ ಬಾಚರಸ
ಅಂಗಲಿಂಗಸಂಬಂಧವೆಂಬ ದ್ವಂದ್ವವನಳಿದು, ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗ ಹರಿದು, ಸೋಹಂ ಸೋಹಂ ಎನುತ್ತಿದ್ದಿತ್ತು. ಸೋಹಂ ಸೋಹಂ ಎಂಬ ಸುಖದ ಸವಿಯ, ಮಹಾದಾನಿ ಸೊಡ್ಡಳಲಿಂಗವಾರೋಗಣೆಯ ಮಾಡಿ, ನಿಜನಿವಾಸಿಯಾದ ಕಾರಣ, ನಾನು ನಾಮಸೀಮೆಗೆಟ್ಟೆನಯ್ಯ.
--------------
ಸೊಡ್ಡಳ ಬಾಚರಸ
ಅಟ್ಟಿ ಹಾವುತಲೊಮ್ಮೆ , ಹೋಗಿ ನಿಲುತಲೊಮ್ಮೆ , ಬೀಗಿ ನಗುತಲೊಮ್ಮೆ , ಮರುಳಿನಂತೆ, ಮಂಕಿನಂತೆ ದೆಸೆದೆಸೆಯ ನೋಡುತ್ತ, ಅಂಗಡಿ ರಾಜಬೀದಿಯ ಶೃಂಗಾರಂಗಳ ನಲಿನಲಿದು ನೋಡುತ್ತ , ಇತ್ತರದ ಭದ್ರದ ಮೇಲೆ ನಾಟ್ಯವನಾಡುವವರ ನೋಡಿ ನಗುತ್ತ , ನೋಡುವ ಗಾವಳಿಯ ಜನರನಟ್ಟಿ ಹೊಯಿವಂತೆ ಹರಿವುತ್ತ , ಗುದಿಯಿಕ್ಕಿದಂತೆ ನಿಂದಿರೆ ಬೀಳುತ್ತ , ನಾಟ್ಯವನಾಡುವವವರಿಗೆ ಇದಿರಾಗಿ, ತಾ ಮರಳಿಯಾಡುತ್ತ , ಹಾಡುತ್ತ ಬೈವುತ್ತ ಕೆರಳಿ ನುಡಿವುತ್ತ , ವಾದ್ಯ ಮೇಳಾಪವ ಕಂಡು ಆಳಿಗೊಂಡು ನಗುತ್ತ , ಹಸ್ತವನಾಡಿಸಿ ಗತಿಯ ಮಚ್ಚರಿಸಿ ಕೈಯೊಡನೆ ಮರುಳಾಟವನಾಡುತ್ತ , ಮೆಲ್ಲಮೆಲ್ಲನೆ ನಿಂದು ನೋಡಿ ನಡೆವುತ್ತ , ಎಂದಿನ ಸುಳುಹಿನೊಳಗಲ್ಲದ ಸುಳುಹು, ಬಸವಣ್ಣ ನಿಮ್ಮಾಣೆ, ಸೊಡ್ಡಳನಾಗದೆ ಮಾಣನು.
--------------
ಸೊಡ್ಡಳ ಬಾಚರಸ
ಅಂಗ ಲಿಂಗಕ್ಕೆ ಗೂಡಾಯಿತ್ತು, ಲಿಂಗ ಅಂಗಕ್ಕೆ ಗೂಡಾಯಿತ್ತು. ಅಂಗಲಿಂಗಸಂಗವೆಂಬ ಸಂದಳಿದು ನಿಜಲಿಂಗೈಕ್ಯವಾಯಿತ್ತು. ಭಾವ ನಿರ್ಭಾವ ನಿಷ್ಪತ್ತಿಯಲ್ಲಿ, ಮಹಾದಾನಿ ಸೊಡ್ಡಳಂಗೆ ಸರ್ವನಿರ್ವಾಣವಾಯಿತ್ತು.
--------------
ಸೊಡ್ಡಳ ಬಾಚರಸ
ಅಡಿಗಡಿಗೆಲ್ಲಾ ಮಡಿಯ ಹಾಸೆಂಬರು, ನಡೆನಡೆಗೆಲ್ಲಾ ದೇವಾದೇವಾ ಎಂಬರು, ನುಡಿನುಡಿಗೆಲ್ಲಾ ಜೀಯಾಜೀಯಾ ಎಂಬರು, ಎನ್ನೊಡೆಯ ಸೊಡ್ಡಳದೇವರದೇವನ ಮುಡಿಗೊಂದರಳನೇರಿಸಿದವರಾ.
--------------
ಸೊಡ್ಡಳ ಬಾಚರಸ
ಅಂಗದ ಮೇಲೆ ಲಿಂಗವ ಬಿಜಯಂಗೈಸಿಕೊಂಡು, ಲಿಂಗವಿಲ್ಲದಂಗನೆಯರನಪ್ಪಿದಡೆ, ಸುರಾಭಾಂಡವನಪ್ಪಿದಂತೆ ಕೇಳಿರಣ್ಣ. ಲಿಂಗಸಾಹಿತ್ಯವಾಗಿರ್ದು, ಲಿಂಗವಿಲ್ಲದ ಸತಿಯರ ಕೂಡಿಕೊಂಡಿಹ ಪರಿಯೆಂತಯ್ಯ ! ಲಿಂಗವುಳ್ಳ ತನು ಲಿಂಗವಿಲ್ಲದ ತನುವಿನೊಡನೆ ಸಂಯೋಗಮಂ ಮಾಡಿದಡೆಂತಕ್ಕು, ಹಾಲಗಡಿಗೆಯ ಹಂದಿ ಮುಟ್ಟಿದಂತಕ್ಕು ! ಅದೆಂತೆಂದಡೆ : ಲಿಂಗೇನ ಸಹಿತೋ ದೇಹೀ ಲಿಂಗಹೀನಾಂ ತು ಯಃ ಸತೀಮ್ | ಸಹವಾಸೇ ಸಹತೇ ನಿತ್ಯಂ ಕಿಂ ಫಲಂ ಕಿಂ ಕೃತಂ ಭವೇತ್ || ಕಿಂ ತೇನ ಕ್ಷೀರಭಾಂಡೇನ ಸೂಕರೈ ಃ ಸಹ ವರ್ತಿನಾ | ಎಂದುದಾಗಿ, ಲಿಂಗವುಳ್ಳ ಲಿಂಗಾರ್ಚಕರು ಲಿಂಗೈಕ್ಯರು, ಲಿಂಗವಿಲ್ಲದೆ ಭವಿಯಾಗಿರ್ದ ಸತಿಯರ ಆಲಿಂಗನ, ಚುಂಬನವ ಮಾಡಿದಡೆ, ಗುರುಕಾರುಣ್ಯ ಉಂಟೆಂದು ಸಾಧಾರಣಪಕ್ಷದಲ್ಲಿ ಮಾಡಿಕೊಂಡಿರ್ದಡೆ, ಮಾಡಿದ ಲಿಂಗಾರ್ಚನೆ ನಿಷ್ಫಲಂ. ಶತಜನ್ಮ ಪರಿಯಂತರ ಹೊಲೆಯರಲ್ಲಿಕ್ಕದೆ ಮಾಣ್ಬನೆ, ನಮ್ಮ ದೇವರಾಯ ಸೊಡ್ಡಳ.
--------------
ಸೊಡ್ಡಳ ಬಾಚರಸ
ಅಣ್ಣ ನೆಂಬಣ್ಣಗಳಣ್ಣಿ ಸೂದೈ ಹೊನ್ನು. ಅಣ್ಣಗಳ ಹೆಂಡಿರನಣ್ಣಿ ಸೂದೈ ಹೆಣ್ಣು. ಅಣ್ಣನೆಂಬಣ್ಣಗಳನಣ್ಣಿ ಸೂದೈ ಮಣ್ಣು. ಹೊನ್ನ ಕಂಡ ಬಳಿಕ ಅಣ್ಣದಣ್ಣಗಳುಂಟೆ ? ಹೆಣ್ಣ ಕಂಡ ಬಳಿಕ ಅಣ್ಣದಣ್ಣಗಳುಂಟೆ ? ಮಣ್ಣ ಕಂಡ ಬಳಿಕ ಅಣ್ಣದಣ್ಣಗಳುಂಟೆ ? ಹೆಣ್ಣು ಹಿರಣ್ಯ ಭೂಮಿಯೆಂಬ ಹುಡಿಯ ಜಗದ ಕಣ್ಣಲ್ಲಿ ಹೊಯ್ದು, ನಿಮ್ಮ ನೆನೆವುದಕ್ಕೆ ತೆರಹುಗುಡದಿದೆಯಲ್ಲಾ, ಮುಕ್ಕಣ್ಣ ಸೊಡ್ಢಳ ಗರಳಧರಾ.
--------------
ಸೊಡ್ಡಳ ಬಾಚರಸ