ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತನಾದಡೆ ತನುಮನದಾಸೆಯಳಿದುಳಿದಿರಬೇಕು. ಮಹೇಶ್ವರನಾದಡೆ ಪರಧನ ಪರಚಿಂತೆ ಪರಾಂಗನೆಯರೆಡೆಯಳಿದಿರಬೇಕು. ಪ್ರಸಾದಿಯಾದಡೆ ಸುಖರುಚಿಯ ಗ್ರಹಣ ಮರೆದು, ಪ್ರಸಾದ ಪುಟವಳಿಯದೆ ಉಳಿದಿರಬೇಕು. ಪ್ರಾಣಲಿಂಗಿಯಾದಡೆ ಘಟದಾಸೆಯಂ ತೊರೆದು, ಪ್ರಾಣಲಿಂಗದೊಳಗೆ ಬೆರಸಿ ಬೇರಿಲ್ಲದಿರಬೇಕು. ಶರಣನಾದಡೆ ಸತಿಯ ಸಂಗವಳಿದು, ಲಿಂಗಕ್ಕೆ ತಾಯಾಗಿರಬೇಕು. ಲಿಂಗೈಕ್ಯನಾದಡೆ ಆಪ್ಯಾಯನಮಡಸಿ, ಸುಖದುಃಖಮಂ ತಾಳಿ ನಿಭ್ರಾಂತನಾಗಿರಬೇಕು. ಮಾತಿನ ಮೋಡಿಯಲ್ಲಿ ಸಿಲ್ಕದು ಶಿವಾಚಾರ. ಇಂತೀ ಷಡುಸ್ಥಲವಾರಿಗೂ ಅಳವಡದು. ಸೊಡ್ಡಳದೇವನು, ಷಡುಸ್ಥಲಭಕ್ತಿಯನು ಬಸವಣ್ಣಂಗೆ ಮೂರ್ತಿಯ ಮಾಡಿದನು.
--------------
ಸೊಡ್ಡಳ ಬಾಚರಸ
ಭಕ್ತಭಕ್ತನೆಂದು ಯುಕ್ತಿಗೆಟ್ಟು ನುಡಿವಿರಿ, ಭಕ್ತಿಸ್ಥಲವೆಲ್ಲರಿಗೆಲ್ಲಿಯದೊ ? ಹಾಗದಾಸೆ, ಹಣವಿನಾಸೆಯುಳ್ಳನ್ನಕ್ಕ ಭಕ್ತನೆ ? ಅಯ್ಯಾ, ಅರ್ಥಪ್ರಾಣಾಭಿಮಾನ ವಂಚನೆಯುಳ್ಳನ್ನಕ್ಕ ಭಕ್ತನೆ ? ಹೊನ್ನು ಹೆಣ್ಣು ಮಣ್ಣು ಹಣಿದವಾಡದದನ್ನಕ್ಕ ಭಕ್ತನೆ ? ಭಕ್ತರಿಗೆ ನಾವು ಹೇಳಿದಡೆ ದುಗುಡ ದುಮ್ಮಾನ, ನೀನೊಮ್ಮೆ ಹೇಳಾ, ಪ್ರಳಯಕಾಲದ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಭೃಗುಮುನೀಶ್ವರನ ಶಾಪದಿಂದ ವಿಷ್ಣು ದಶಾವತಾರವಾಗಿ ಬಂದಲ್ಲಿ, ಶಿವಭಕ್ತಿಯನೆ ಮಾಡಿದನೆಂಬುದಕ್ಕೆ ಶಿವಧರ್ಮಪುರಾಣ ಪ್ರಸಿದ್ಧ ನೋಡಿ. ಅದೆಂತೆಂದಡೆ : ಮತ್ಸ್ಯ ಕೂರ್ಮೋ ವರಾಹಶ್ಚ ನಾರಸಿಂಹಶ್ಚ ವಾಮನಃ | ರಾಮೋ ರಾಮಶ್ಚ ರಾಮಶ್ಚ ಬೌದ್ಧಶ್ಚ ಕಲಿ ಕಾಹ್ವಯಃ || ಎಂದುದಾಗಿ, ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ಮತ್ಸ್ಯಾವತಾರದಲ್ಲಿ ಮತ್ಸ್ಯಕೇಶ್ವರದೇವರ ಲಂಕಾಪುರಿಯಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ಕೂರ್ಮಾವತಾರದಲ್ಲಿ ಕೂರ್ಮೇಶ್ವರದೇವರ ಧಾರಾವತಿಯಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ವರಾಹವತಾರದಲ್ಲಿ ವರಾಹೇಶ್ವರದೇವರ ವೃಂದಗಿರಿಯಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ವಾಮನಾವತಾರದಲ್ಲಿ ವಾಮೇಶ್ವರದೇವರ ವಾರಣಾಸಿಯಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ರಾಮಾವತಾರದಲ್ಲಿ ರಾಮೇಶ್ವರದೇವರ ಸೇತುವಿನಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ನಾರಸಿಂಹಾವತಾರದಲ್ಲಿ ನರಸಿಂಹೇಶ್ವರದೇವರ ಆವು [ಅಹೋ]ಬಳದಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ ಬೌದ್ಧಾವತಾರದಲ್ಲಿ ಬೌದ್ಧಕಲಿಕೆಯೆಂಬ ಹೆಸರ ದೇವರ ಕಾಶಿಯಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ಪರಶುರಾಮಾವತಾರದಲ್ಲಿ ಪರಶುರಾಮೇಶ್ವರದೇವರ ಕಪಿಲೆಯ ತೀರದಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ಕೃಷ್ಣಾವತಾರದಲ್ಲಿ ಕೃಷ್ಣೇಶ್ವರದೇವರ ಹಿಮವತ್ಪರ್ವತದಲ್ಲಿ ಶಿವಲಿಂಗವ ಹರಿ ಪ್ರತಿಷೆ*ಯ ಮಾಡಿದ. ಕಲಿಯುಗದಲ್ಲಿ ಸ್ತ್ರೀ ರೂಪಿಂದ ಅಗಲಕ್ಕೆ ನಿಂದ. ಇಂತೀ ದಶಾವತಾರದಲ್ಲಿಯೂ ಹರಿಯೆ ಭಕ್ತ. ಹರಿಯ ಬಿಟ್ಟು ಭಕ್ತರಿಲ್ಲ. ಸೊಡ್ಡಳದೇವರಿಂದ ಬಿಟ್ಟು ಕರ್ತರಿಲ್ಲ ಕೇಳಿರಣ್ಣಾ.
--------------
ಸೊಡ್ಡಳ ಬಾಚರಸ
ಭಕ್ತರಲ್ಲದವರೊಡನೆ ಆಡದಿರು, ಆಡದಿರು. ಅರ್ಥದಾಸೆಗೆ ದುರ್ಜನರ ಸಂಗವ ಮಾಡದಿರು, ಮಾಡದಿರು. ಉತ್ತಮರ ಕೆಡೆನುಡಿಯದಿರು, ನುಡಿಯದಿರು. ಮುಂದೆ ಹೊತ್ತ ಹೊರೆ ದಿಮ್ಮಿತ್ತಹುದು. ನಿತ್ಯವಲ್ಲದ ದೈವಕ್ಕೆರಗದಿರು, ಎರಗದಿರು. ಕರ್ತು ಸೊಡ್ಡಳನ ನೆರೆ ನಂಬು, ಡಂಬಕ ಬೇಡ.
--------------
ಸೊಡ್ಡಳ ಬಾಚರಸ
ಭವಿಯ ಕಳದು ಭಕ್ತನ ಮಾಡಿದ ಬಳಿಕ, ಲಿಂಗಾಂಗಸಂಬಂಧಿಯಾಗಿ ಸರ್ವಭೋಗಂಗಳನು ಲಿಂಗ ಮುಂತಾಗಿ ಭೋಗಿಸುತ್ತ, ಷಡುರಸಂಗಳನು ಮುಂದೆ ಗಡಣಿಸಿಕೊಂಡು, ಆಚಾರಾದಿ ಮಹಾಲಿಂಗಂಗಳಿಗೆ ನಿವೇದಿಸುತ್ತ, ಗುರು ಮುಟ್ಟಿ ಶುದ್ಧಪ್ರಸಾದ, ಲಿಂಗ ಮುಟ್ಟಿ ಸಿದ್ಧಪ್ರಸಾದ, ಜಂಗಮ ಮುಟ್ಟಿ ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧವ ಇಷ್ಟ ಪ್ರಾಣ ಭಾವಕ್ಕೆ ಸಂಬಂಧಿಸುತ್ತ , ರೂಪು ರುಚಿ ತೃಪ್ತಿಯನರಿದು, ಪ್ರಸನ್ನಪ್ರಸಾದವ ಭೋಗಿಸುವಲ್ಲಿ , ಭವಿದೃಷ್ಟಿ ಸೋಂಕುತ್ತಿರಲು, ಸಂಕಲ್ಪಿಸಿ ಬಿಟ್ಟಡೆ ಪ್ರಸಾದದ್ರೋಹ, ಕೊಂಡಡೆ ಭವಿದೃಷ್ಟಿ ಕಿಲ್ಬಿಷ. ಬಿಡಲೂ ಬಾರದು, ಕೊಳ್ಳಲೂ ಬಾರದು ನೋಡಯ್ಯ. ಇನ್ನೇನೆಂದು ಚಿಂತಿಸಬೇಡ, ಎಲ್ಲವೂ ಮಹಾಪ್ರಸಾದದಿಂದಲೇ ಹುಟ್ಟಿದವು. ಆ ಮಹಾಪ್ರಸಾದವನೆ ಉಂಡು ಬೆಳೆದವು, ಆ ಮಹಾಪ್ರಸಾದದಲ್ಲಿಯ ಲಯ. ಸರ್ವವೆಲ್ಲವೂ ಶಿವನಿಂದಲೇ ಹುಟ್ಟಿದವು. ಶಿವನೇ ಶರಣ, ಶರಣನೇ ಶಿವ ನೋಡಯ್ಯ. ಎಲ್ಲವೂ ತನ್ನಿಂದಲಾದ ಬಳಿಕ, ಭವಿಯೆಂಬುದು ಎಲ್ಲಿಯದು ಹೇಳಾ. ಪರಿಪೂರ್ಣ ತಾನಾದ ಬಳಿಕ, ಸಂಕಲ್ಪಿಸಲಾಗದು ನೋಡಾ, ಮಹಾದಾನಿ ಸೊಡ್ಡಳಾ.
--------------
ಸೊಡ್ಡಳ ಬಾಚರಸ