ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಶಿಯಲ್ಲಿಪ್ಪ ಈಶನನರಿಯದ ಮೂವರ ಕೊರಳು ಕೈಗಳು ಮುರಿದು ಬಿದ್ದವು. ಕೈಲಾಸದಲ್ಲಿಪ್ಪ ಈಶನನರಿಯದ ಮೂವರ ದೇಹ ಕಾಲು ಕೈಗಳು ಮುರಿದುಬಿದ್ದವು. ಶ್ರೀಶೈಲದಲ್ಲಿಪ್ಪ ಈಶನನರಿಯದ ಮೂವರ ದೇಹ ಕರುಳು ತೊಗಲುಗಳು ಉದುರಿಬಿದ್ದವು. ಸಮುದ್ರದಲ್ಲಿಪ್ಪ ಈಶನನರಿಯದಿಬ್ಬರು ಒಬ್ಬರ ಹೊಟ್ಟೆಯ ಒಬ್ಬರು ಹೊಕ್ಕು ಬಿದ್ದರು. ಇಂತೀ ದೇವ ದಾನವ ಮಾನವರು ಮೊದಲಾದ ಸಕಲರೂ ಮಹಾದಾನಿ ಸೊಡ್ಡಳನನರಿಯದೆ ತರ್ಕಿಸಿ, ಕೆಟ್ಟುಹೋದರು.
--------------
ಸೊಡ್ಡಳ ಬಾಚರಸ
ಕುಡುವವ ಮಾನವನೆಂದಡೆ ಹೊಡೆ ಬಾಯ ಕೆರವಿನಟ್ಟೆಯಲ್ಲಿ , ಮಾನುಷನ ಹೃದಯದೊಳು ತಾನೀಶ ಹೊಕ್ಕು, ಸಲ್ಲುವಷ್ಟು ಕುಡಿಸುವ, ದೇವರಾಯ ಸೊಡ್ಡಳ.
--------------
ಸೊಡ್ಡಳ ಬಾಚರಸ
ಕರ್ತಾರನಟ್ಟಿದ ವಿದ್ಥಿಗಂಜಿ, ಪಾತಾಳಲೋಕದಲ್ಲಿ ಹೊಕ್ಕಡಗಿದಡೆ, ಭೂತಳದ ಮೇಲೆ ಹೊಮ್ಮರೆಯಾಗಿ ಹರಿದಡೆ, ಕೊಲ್ಲದೆ ವಿದ್ಥಿ ? ತಪ್ಪು ತಡೆಯಿಲ್ಲದ ತಪಸಿಗಪ್ಪುದೆ ಶಲದ ವಿದ್ಥಿ ? ಹರನಟ್ಟಿದ ಬೆಸನದಿಂದ ಮೆಕ್ಕೆ ಹಾವಾಗಿ ತಿನ್ನದೆ ವಿದ್ಥಿ ? ದೇವ ದಾನವ ಮಾನವರ ಒಕ್ಕಲಿಕ್ಕಿ ಕೊಲ್ಲದೆ ವಿದ್ಥಿ ? ಮುಕ್ಕಣ್ಣ ಸೊಡ್ಡಳನಾಣತಿವಿಡಿದು.
--------------
ಸೊಡ್ಡಳ ಬಾಚರಸ
ಕೂರ್ಮನ ಶಿಶುವಿನ ಸ್ನೇಹದಂತಿರ್ಪ ದೇವನೆನಗಿಂದು ಪ್ರತ್ಯಕ್ಷ ಕಣ್ಣ ಮುಂದೆ ಗೋಚರವಾದ ನೋಡಾ. ಎನ್ನ ಅಂತರಂಗದಲ್ಲಿ ಹೂಣೆಹೊಕ್ಕು, ವಿನಯ ಸದ್ಗೋಷಿ*ಯ ಮಾಡುವ ನಿಷ್ಕಳಂಕ ಚೈತನ್ಯನು ಸಕಲರೂಪ ಸನ್ನಹಿತವಾದ ನೋಡಾ. ಬಟ್ಟಬಯಲು ಬಲಿದು ಗಟ್ಟಿಗೊಂಡಂತೆ, ಏಕಾಂತವೀರ ಸೊಡ್ಡಳಾ, ನಿಮ್ಮ ಶರಣ ಪ್ರಭುದೇವರ ನಿಲವು.
--------------
ಸೊಡ್ಡಳ ಬಾಚರಸ
ಕಾಮದಲ್ಲಿ ಲೋಲುಪ್ತವಾದವರೆಲ್ಲರೂ ಮಹವನೆತ್ತ ಬಲ್ಲರು ! ಸೋಮಧರನ ಓಲಗದಲ್ಲಿ ಕಾಮಗಣಂಗಳುಂಟೆ ? ಕಾಮಾರಿ ಲಿಂಗವಲ್ಲದೆ ಈ ಬಣ್ಣದ ಹೆಣ್ಣೆಂಬ ಜಾಲವ ಬೀಸಿದನೆಲ್ಲಾ. ಕಾಮ ಭಂಡುಗಳಿಗೆ ತನ್ನ ತೋರುವನೆ, ದೇವರಾಯ ಸೊಡ್ಡಳ ?
--------------
ಸೊಡ್ಡಳ ಬಾಚರಸ
ಕೆಮ್ಮ ಕೆಮ್ಮನೆ ಕೇಳಯ್ಯ. ಬ್ರಹ್ಮಾಂಡವ ಬೆರಣಿಯ ಮಾಡಿ, ಅಯ್ಯಾ ಕಾಲಕರ್ಮವೆಂಬ ಯುಗಜುಗಂಗಳನೆಲ್ಲವ ಬಣ್ಣಿಗದೆನೆಯಂ ಮಾಡಿ, ಅವ ಹುರಿವನು, ಒರಸುವನು, ಮುಕ್ಕುವನು. ಅದೆಂತೆಂದಡೆ : `ಈಶಃ ಸರ್ವಸ್ಯ ಜಗತಃ ಪ್ರೇರಕೋ ವಿಶ್ವಭುತ್ ಪ್ರಭುಃ' ಇತೆಂದುದು ಶ್ರುತಿ. ಸರ್ವಜಗಂಗಳ ಪುಟ್ಟಿಸುವ, ರಕ್ಷಿಸುವ, ಭಕ್ಷಿಸುವ ತನ್ನಿಚ್ಛೆಗಾರ ಸೊಡ್ಡಳದೇವನು.
--------------
ಸೊಡ್ಡಳ ಬಾಚರಸ
ಕಿಚ್ಚಿಲ್ಲದುರಿವ [ದೇವನು] ಮತ್ತೊಬ್ಬರಿಗಂಜುವನಲ್ಲ. ಕೌತುಕದ ದೇವ ಕಾಣಿಭೋ ನಮ್ಮ ಶಿವನು. ಬಿರುದರ ಬಿಂಕದ ಬಿಂಕವ ಮುರಿದು, ಉಬ್ಬಿದವರ ಗರ್ಭವ ಕಲಂಕುವ, ಬಲ್ಲಿದನ ತಲೆ ಕೈಯಲ್ಲಿ . ಮೆಲ್ಲಿದನ ನಯನ ಚರಣದಲ್ಲಿ. ಅಯ್ಯಯ್ಯಾ, ಮಝ ಭಾಪುರೆ ರಾವುರಾವು ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಕಾಲ ಕಾಮ ಮಹಾಕಾಲ ಪ್ರಳಯಕಾಲ, ಕಾಲನ ಕೊಂದು, ಹರ ಲೀಲೆಯನಾಡುವಂದು, ಬ್ರಹ್ಮ ವಿಷ್ಣು ಜಿನಪಾಲರೆಂಬವರೆಲ್ಲಿದ್ದರೊ ? ಸರಿಯೆಂಬ ನಾರಸಿಂಹನ ಶಿರವರಿದು, ಹರನ ಶಿವಾಲಯಕ್ಕೆ ಕೀರ್ತಿಮುಖವಾಗಿದೆ. ಹರಿಯ ಚರ್ಮವ ಸೀಳಿ, ಹರನ ಖಟ್ವಾಂಗವಾಗಿದೆ. ಮತ್ಸ್ಯಾವತಾರನ ಕರುಳಂ ತೆಗೆದು, ಹರನ ಜಡೆಯಲ್ಲಿ ಉತ್ತರಿಗೆಯಾಗಿದೆ. ಸರಿಯೆಂಬ ಹೆಸರಿನ್ನಾರಿಗೊ, ಮುಕ್ಕಣ್ಣ ಸೊಡ್ಡಳಂಗಲ್ಲದೆ.
--------------
ಸೊಡ್ಡಳ ಬಾಚರಸ
ಕೊಳ್ಳಿಯ ಬೆಳಕಿನಲ್ಲಿ ಕುಳಿತು, ಒಡ್ಡದ ತಳಿಗೆಯಲಿ ಅಂಬಲಿಯನಿಕ್ಕಿಕೊಂಡು, ಸುರಿದು ಕೈದೊಳೆದು ಮುರಿದ ಗುಡಿಯೊಳಗೆ, ಹರಿದ ತಟ್ಟೆಯ ಮೇಲೆ ಹರಿದ ಬೊಂತೆಯ ಹಾಸಿಕೊಂಡು, ಕೆಡದಿಹಂಗೊಬ್ಬ ಮಗ ಹುಟ್ಟಿ, ಸಿರಿವಂತನಾದಡೆ, ಇಳಿಯ ಬಿಟ್ಟು ಕಳೆಯದಿಹನೆ ಹಿಂದಣ ಕಷ್ಟದರಿದ್ರವ ? ಬಂಡಿಯ ಹಿಡಿದಾತನ ತಂದೆಯ ತಲೆ ಹೋಹುದುಯೆಂದು ಪಿತರಾಚಾರವೆಂದು ವೃಥಾ ಸಾವನೆ ? ಕಂದ ಜಾಣನಾದಡೆ ತಮ್ಮ ತಂದೆಯಂತಹನೆ ? ವಿಷಯದಿಂ ಬಂದ ದೈವಂಗಳಿಗೆ ಅನು ಎಂದೂ ಎರಗೆ, ಸೊಡ್ಡಳಂಗಲ್ಲದೆ.
--------------
ಸೊಡ್ಡಳ ಬಾಚರಸ
ಕಣ್ಣಿಂ ತ್ರಿಜಗಮಂ ಸುಟ್ಟು ಮುಚ್ಚಿ ಬಚ್ಚಿಡುವನು. ಪಾಪಕಂಜನು ಕೋಪಕಂಜನು ನೆರೆಗಂಜನು ಹೊರೆಗಂಜನು. ಕೋಟಿಕೋಟಿ ಬ್ರಹ್ಮಹತ್ಯಮಂ ಮಾಡಿಪ್ಪನು. ಮಾರಿ ತೊತ್ತು ಮುರಾರಿ ಬಂಟನು, ತನಗಾರು ಇದಿರಿಲ್ಲ ನೋಡಾ. ಎಲುವುಗಳ ತಲೆಗಳ ಮಾಲೆಯ ಕೊರಳಲೆ ಒಳವನು ಮಾಡಿಕ್ಕಿದ. ಒಲಿದವರ ಕಾವ, ಒಲ್ಲದವರ ಕೊಂದೀಡಾಡುವ ಸೊಡ್ಡಳದೇವನು.
--------------
ಸೊಡ್ಡಳ ಬಾಚರಸ
ಕಾಲಾಂತ್ಯಕಾಲದಲ್ಲಿ, ಪ್ರಳಯಾಂತ್ಯಪ್ರಳಯದಲ್ಲಿ, ಕಾಲ ಮಹಾಕಾಲನಂ ಕೊಂದು, ಹರನು ಲೀಲೆಯನಾಡುವಲ್ಲಿ, ತ್ರಿವಿಕ್ರಮನ ನಿಟ್ಟೆಲುವು ಕಟ್ಟಿಗೆ ವಾಸುಗಿ ತೆಗೆ ನೇಣು, ನರಸಿಂಹನು ಗುರುಕೊಂಕಿ ಆದಿವರಾಹನ ಎಲೆಯಮಾಡಿ. ಅದೆಂತೆಂದಡೆ : ಕಲ್ಪಾಂತೇಶಮಿತತ್ರಿವಿಕ್ರಮ ಮಹಾಕಂಕಾಳ ಬದ್ಧಸ್ಫುರ | ಚೈಷಃ ಸೂತ್ರಮಥೋ ನೃಸಿಂಹ ನಖಪ್ರೋತಾದಿಕೋಲಾಮಿಷಂ | ವಿಶ್ವೈಕಾರ್ಣವ ಸಂವಿಹಾರಮುದಿತೌ ಯೌ ಮತ್ಸ್ಯ ಕೂರ್ಮೌ ವುಚೌಕರ್ಷನಿವರತಾಂಗತಃ ಶ್ಯಾತು ಸತಾಂ ಮೋಹಂ ಮಹಾಭೈರವಃ || ಎಂದುದಾಗಿ, ಇಂತಪ್ಪ ಮತ್ಸ್ಯ ಕೂರ್ಮಂಗಳಂ ತೆಗೆದಾಡುವಂದು, ಹರಿಹರನೆಂಬ ಹೆಸರಾಯಿತ್ತಯ್ಯಾ ಸೊಡ್ಡಳಾ.
--------------
ಸೊಡ್ಡಳ ಬಾಚರಸ