ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಚನದ ರಚನೆಯ ನುಡಿವ ಬರುಬಾಯ ಭುಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ? ಮಾಡುವ ದಾಸೋಹದಿಂದ ಭಕ್ತಂಗೆ ಅವಗುಣಂಗಳಿಲ್ಲದಿರಬೇಕು. ಕೋಪದ ಕೆಚ್ಚಂ ಕಡಿದು, ಲೋಭಲಂಪಟಮಂ ಕೆದರಿ, ಮೋಹದ ಮುಳ್ಳುಮೊನೆಯ ತೆಗೆದು, ಮದದಚ್ಚಂ ಮುರಿದು, ಮಚ್ಚರಿಪ ಸರ್ಪನಂ ಸಮತೆಯೆಂಬ ಗಾರುಡದಲ್ಲಿ ಗಾರುಡಿಸಿ, ಕರಣಾದಿ ಗುಣಂಗಳಿಚ್ಛೆಗೆ ಹರಿಯಲೀಯದೆ, ವಿಶ್ರಮಿಸಿಪ್ಪ ಭಕ್ತನ ಕಾಯವೆ ಕೈಲಾಸ. ಅಂತಲ್ಲದೆ ಬರಿಯಮಾತಿಂಗೆ ಮಾತನೆ ಕೊಟ್ಟು, ತಾನಾಡಿದುದೆ ನೆಲೆಯೆಂಬಾತ ಭಕ್ತನೆ ? ಅಲ್ಲ, ಉಪಜೀವಿ. ಹೇಮದಿಚ್ಛೆಗೆ ಹರಿದು ಕಾಮರತಿಗಳುಪವ, ಕೋಪದುರಿಯ ಹೊದ್ದುಕೊಂಬ, ಲೋಭಮೋಹದ ಕೆಚ್ಚ ಕೂಡಿಕೊಂಡು, ನರಕದೊಳಗೋಲಾಡುವಾತ ಭಕ್ತನೆ ? ಅಲ್ಲ. ಆದಿಯಲ್ಲಿ ನಮ್ಮವರು ಹೊನ್ನು ಹೆಮ್ಣು ಮಣ್ಣು, ಈ ತ್ರಿವಿಧವ ಬಿಟ್ಟಿದರೆ ? ಇಲ್ಲ. ಆವ ತಲೆಯೆತ್ತಲೀಯರಾಗಿ, ಅನ್ಯಸಂಗವ ಹೊದ್ದರು. ಭವಿಮಿಶ್ರವ ಮುಟ್ಟರು, ಹಮ್ಮುಬಿಮ್ಮುಯಿಲ್ಲದಿಪ್ಪ ಇಂತಪ್ಪರೆ ನಮ್ಮ ಭಕ್ತರು. ನಮ್ಮ ಭಕ್ತರ ನೆಲೆಯ, ಮಹಾದಾನಿ ಸೊಡ್ಡಳಾ, ನೀನೆ ಬಲ್ಲೆಯಲ್ಲದೆ, ಉಳಿದ ಜಡಜೀವಿಗಳೆತ್ತ ಬಲ್ಲರು ?
--------------
ಸೊಡ್ಡಳ ಬಾಚರಸ
ವೇದಂಗಳು ನಿಜವ ಬಲ್ಲಡೆ, ವಟ್ಟಂಕುರರ ಮರೆಯಬೇಕಲ್ಲದೆ, ಚನ್ನಯ್ಯ ಕಕ್ಕಯ್ಯಗಳ ಮೆರೆಯಲೇಕೆ ? ಶಾಸ್ತ್ರಂಗಳು ಸತ್ಯವ ನುಡಿದಡೆ, ಶಾಸ್ತ್ರಂಗಳ ಮಾತಿಂಗೆ ಹೇಸಿ, ಕಿರಾತಬೊಮ್ಮಣ್ಣಂಗಳ ಮೆರೆಯಲೇಕೆ ? ಆಗಮಂಗಳು ಆಚಾರವನರಿದಡೆ, ಆಗಮಂಗಳ ಮೆರೆಯದೆ, ಕೆಂಬಾವಿಯ ಭೋಗಣ್ಣಗಳ ಹಿಂದುರುಳುತ್ತ ಹೋಗಿ ಮರೆಯಲೇಕೆ ? ಇಂತೀ ವೇದಶಾಸ್ತ್ರಾಗಮಂಗಳು ಶಿವನಾದಿಯಂತವನರಿದಡೆ, ಸಾಮವೇದಿಗಳು ಶ್ವಪಚಯ್ಯಂಗೆ ಶಿಷ್ಯರಾಗಲೇಕೆ ? ವಾದಿಸಿದರೆಲ್ಲರು ಪ್ರತಿವಾದಿಗಳಾದರು ನಿಮ್ಮಂತವನರಿಯದೆ. ಅಭೇದ್ಯವು, ಘನಕ್ಕೆ ಘನವು, ಶಂಭು ಸೊಡ್ಡಳಾ.
--------------
ಸೊಡ್ಡಳ ಬಾಚರಸ
ವೇದದವರನೊಲ್ಲದೆ ನಮ್ಮ ಮಾದಾರ ಚನ್ನಯ್ಯಂಗೊಲಿದ. ಶಾಸ್ತ್ರದವರನೊಲ್ಲದೆ ಶಿವರಾತ್ರಿಯ ಸಂಕಣ್ಣಂಗೊಲಿದ. ಆಗಮದವರನೊಲ್ಲದೆ ತೆಲುಗುಜೊಮ್ಮಯ್ಯಂಗೊಲಿದ. ಪುರಾಣಕರ್ಮಿಗಳೆಂಬ ವಿಶಿಷ್ಟಬ್ರಹ್ಮರನೊಲ್ಲದೆ ಉದ್ಭಟಯ್ಯಂಗೊಲಿದ. ಅಣ್ಣ ಕೇಳಾ ಸೋಜಿಗವ ! ದಾಸದುಗ್ಗಳೆಯರಿಗೊಲಿದ ಮುಕ್ಕಣ್ಣ ಸೊಡ್ಡಳ, ಹಾರುವಣ್ಣಗಳಿಗೆ ಹೇಸಿ ಕದವನಿಕ್ಕಿಕೊಂಡನು.
--------------
ಸೊಡ್ಡಳ ಬಾಚರಸ
ವಿಪಿನದೊಳು ಮದಕರಿಯ ಹಿಂಡು ಆನಂದಲೀಲೆಯೊಳಾಡುತ್ತಿರಲು, ಕೇಸರಿ ಬರಲು, ಮದಕರಿಗಳೆಲ್ಲಾ ಕೆದರಿ ಓಡುವ ತೆರನಂತೆ, ಸಾಕಾರ ಸೊಡ್ಡಳಾ, ನಿಮ್ಮ ಶರಣ ಪ್ರಭುದೇವರು ಬರಲೊಡನೆ ಹರೆದುದಯ್ಯಾ ನೆರೆದ ಶಿವಗಣಂಗಳು.
--------------
ಸೊಡ್ಡಳ ಬಾಚರಸ
ವಿಷ್ಣು ಪರಿಪೂರ್ಣನಾದಡೆ, ಸೀತೆ ಕೆಟ್ಟಳೆಂದು ಅರಸಲೇಕೊ ? ವಿಷ್ಣು ಪರಿಪೂರ್ಣನಾದಡೆ, ವಟಪತ್ರದ ಮೇಲೆ ಕುಳಿತು, ಜಲಪ್ರಳಯದಲ್ಲಿ ಅಡಗಿದನೆಂಬ ಮಾತೇಕೋ? ವಿಷ್ಣುವಿನ ಬಾಣ ಸಮುದ್ರಕಡ್ಡಕಟ್ಟಿಯಾದಡೆ, ಕಪಿ ಕೋಡಗವ ಹಿಡಿತಂದು, ಬೆಟ್ಟಗಟ್ಟಂಗಳ ಹಿಡಿತಂದು, ಸೇತುವೆಯ ಕಟ್ಟಲೇಕೋ? ವಿಷ್ಣು ಪರಿಪೂರ್ಣನಾದಡೆ, ರಾವಣನ ವಧೆಗಂಜಿ, ಧರೆಯ ಮೇಲೆ ಲಿಂಗಪ್ರತಿಷೆ*ಗಳ ಮಾಡಿ ಪೂಜಿಸಲೇಕೋ ? ಇಂತು ಬ್ರಹ್ಮಾಂಡದೊಳಗೆ ಸಿಕ್ಕಿ. ಸತ್ತುಹುಟ್ಟುತ್ತಿಹ ದೇವತೆಗಳು ಒಬ್ಬರೂ ಪರಿಪೂರ್ಣರಲ್ಲ. ಮಹಾದಾನಿ ಸೊಡ್ಡಳನೊಬ್ಬನೆ ಪರಿಪೂರ್ಣನು.
--------------
ಸೊಡ್ಡಳ ಬಾಚರಸ
ವಿಭೂತಿ ರುದ್ರಾಕ್ಷಿ ಲಿಂಗ ಲಾಂಛನಧಾರಿಯ ಕಂಡಡೆ, ತನುಮನ ದಿಟವೆಂಬೆ. ಅಲ್ಲದ ಸಟೆಗಳ, ಲೋಭಿಗಳ ಕಂಡು, ಮತ್ತೆ ಅಲ್ಲಿ ಅಲ್ಲವೆಂಬೆ. ಅಗ್ನಿ ರವಿ ಶಶಿ ನಿನ್ನಕ್ಷಿಯೆಂದಡೆ, ಆನು ಭ್ರಮೆಗೊಂಡೆ. ವಸುಧೆ ನಿನ್ನ ತನುವೆಂದಡೆ, ಕಠಿಣವ ಕಂಡಂತೆಂಬೆ. ಸಾಗರ ನಿನ್ನ ತನುವೆಂದಡೆ, ಹೆಚ್ಚುಕುಂದ ಕಂಡಂತೆಂಬೆ. ವಾಯು ನಿಮ್ಮ ತನುವೆಂದಡೆ, ದಿಕ್ಪಾಲಕರ ಕಂಡಂತೆಂಬೆ. ಗಗನ ನಿಮ್ಮ ತನುವೆಂದಡೆ, ಬಯಲ ಕಂಡಂತೆಂಬೆ. ಆತ್ಮ ನಿಮ್ಮ ತನುವೆಂದಡೆ, ಜನನ ಮರಣವ ಕಂಡಂತೆಂಬೆ. ನ ಚ ಭೂಮಿ ನ ಚ ರವಿ ನ ಚ ತೇಜ ನ ಚ ವಾಯು ನ ಚ ಗಗನಂ ನ ಚ ರವಿ ನ ಚ ಶಶಿ ನ ಚ ಆತ್ಮ || ಎಂದುದಾಗಿ, ಭಿನ್ನರೂಪುಗಳ ನಿನ್ನ, ನಿಜವೆನ್ನೆ ನನ್ನೆ ಸೊಡ್ಡಳಾ.
--------------
ಸೊಡ್ಡಳ ಬಾಚರಸ