ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮನದೊಡೆಯ ಮನೆಗೆ ಬಹಡೆ, ಮನ ಮನದಲಚ್ಚೊತ್ತಿದಂತಿರ್ಪುದು ನೋಡಯ್ಯಾ. ಮನಕ್ಕೆ ಮನೋಹರ, ಚಿತ್ತಕ್ಕೆ ಮನೋಹರವಾಗಿರ್ಪುದಯ್ಯಾ. ಮಹಾದಾನಿ ಸೊಡ್ಡಳನ ಬರವಿಂಗೆ, ಶುಭಸೂಚನೆ ಮೆಯಿದೋರುತ್ತಿದೆ. ಪ್ರಭುದೇವರ ಬರವನೀಗಳೆ ತೋರುವೆನಯ್ಯಾ ಸಂಗನಬಸವಣ್ಣಾ.
--------------
ಸೊಡ್ಡಳ ಬಾಚರಸ
ಮುರಿಸಬೇಕು ಹೊಲೆಯರ ಕೈಯಿಂದವರ ಮನೆಯನು, ಕೆರಿಸಬೇಕು ಮಂಡೆಯನೇಳು ಪಟ್ಟಿಯ ಮಾಡಿ, ಕುಳ್ಳಿರಿಸಬೇಕು ಕತ್ತೆಯ ನಡುಬೆನ್ನ ಮೇಲೆ, ಹುಟ್ಟಿಗೆಯನುಡಿಸಬೇಕು, ಹಳೆಮರವ ಸತ್ತಿಗೆಯ ಹಿಡಿಯಬೇಕವಗೆ, ನಿಟ್ಟೊರಸಬೇಕು ನೊಸಲಕ್ಷರವ, ನಾಲಿಗೆಯ ಸರ್ರಸರ್ರನೆ ಸೀಳಬೇಕು, ಎನ್ನೊಡೆಯ ಮಹಾಮಹಿಮ ಸೊಡ್ಡಳಂಗೆ ಅನ್ಯದೈವ ಸರಿಯೆಂಬ ಕುನ್ನಿಮಾನವನ.
--------------
ಸೊಡ್ಡಳ ಬಾಚರಸ
ಮನದ ಸಂಚದೋವರಿಯೊಳಗೆ, ಮಿಂಚಿನ ಗೊಂಚಲು ಬಳ್ಳಿವರಿಯಿತ್ತಯ್ಯಾ. ಎನ್ನ ಕಾಯದ ಕರಣಂಗಳೊಳಗೆ, ನಿರುಪಮಸುಖ ಸಾಧ್ಯವಾಯಿತ್ತು. ಬಯಸುವ ಬಯಕೆ ಕೈಸಾರಿತ್ತು, ಅರಸುವ ಅರಕೆ ನಿಂದಿತ್ತು. ಆಹಾ, ಕರತಲಾಮಲಕವಾಯಿತ್ತಲ್ಲಾ ! ಸತ್ಯಶರಣರ ದರುಶನ ಏನ ಮಾಡದೊ ? ಮಹಾದಾನಿ ಸೊಡ್ಡಳನ ಶರಣ ಪ್ರಭುದೇವರ ಶ್ರೀಪಾದವ ಕಂಡು, ಬದುಕಿದೆನಯ್ಯಾ.
--------------
ಸೊಡ್ಡಳ ಬಾಚರಸ
ಮತ್ಸ್ಯ ತಲೆಸುತ್ತಾಗಿ ಅಚ್ಚರಿಯ ಮುಡಿಯಲ್ಲದೆ. ಕೂರ್ಮನ ಕಪಾಲ ಹರನ ಹಾರದ ಮಧ್ಯದಲ್ಲದೆ. ನಿಮ್ಮ ಪರಿಯೆಂಬ ನರ ಹರಿಯ ಶಿರಪದದೊಳದೆ. ನಿಮ್ಮ ಆದಿವರಹನ ಕೊಂದಂದಿನ ದಾಡೆ ಕೈಯಲ್ಲದೆ. ನಿಮ್ಮ ತ್ರಿವಿಕ್ರಮನ ನಿಟ್ಟೆಲುವು ಖಟ್ವಾಂಗವಾಗಿ ಕೈಯಲ್ಲದೆ. ಕೇಶವನ ಕಣ್ಣು ಸೋಮೇಶ್ವರನ ಪಾದದಲ್ಲದೆ. ನಿಮ್ಮಗ್ಗದ ನಾರಾಯಣನ ಹೆಣನು ರುದ್ರನ ಹೆಗಲಲ್ಲದೆ. ಸಮಸ್ತ ದೇವರ್ಕಳ ಶಿರಂಗಳು ಇತ್ತರದ ಸರಮಾಲೆ ಬಲ್ಲಿದ ನರಹರಿಯ ತೊವಲು. ಕರಿಗಜಾಸುರನ ತೊವಲು ಕರಿಪುಲಿದೊವಲನುಟ್ಟು ಹೊದ್ದ. ಹಾವಿನಾಭರಣದ ತೊಟ್ಟ, ಕಾಮನ ಬೂದಿಯನಿಟ್ಟ. ದೃಷ್ಟರಿಗೆ ದೃಷ್ಟ, ಮಹಾದಿಟ್ಟ, ಅಘಟ್ಟ ಕಟ್ಟುಗ್ರದೇವ, ರಾವು ಭಾಪು ಸೊಡ್ಡಳಾ.
--------------
ಸೊಡ್ಡಳ ಬಾಚರಸ