ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹದನರಿದು ಹರಗುವ, ಬೆದೆಯರಿದು ಬಿತ್ತುವ, ಸಸಿ ಮಂದವಾದಡೆ ತೆಗೆವನಯ್ಯಾ. ಒಂದೊಂದ ಹೊಕ್ಕು ಬೆಳವಸಿಯ ತೆನೆ ಮೆಲುವನಯ್ಯಾ. ಕೊಯಿವನಯ್ಯಾ, ಕೊರೆವನಯ್ಯಾ, ಒಕ್ಕುವನಯ್ಯಾ, ತೂರುವನಯ್ಯಾ. ಲೋಕಾದಿಲೋಕಂಗಳ ಹಗೆಯನಿಕ್ಕುವನಯ್ಯಾ, ದೇವರಾಯ ಸೊಡ್ಡಳ.
--------------
ಸೊಡ್ಡಳ ಬಾಚರಸ
ಹಳೆಯ ಮಿಣಿಯ ಕಡಿವನು, ನಾದ ಹೋದ ಕೆರಹನು, ಬೂದಿಹೋದ ಎರಹನು. ಒಣಗಿದೆಲುವ ನಾಯ ಕೊಂಡೊಡಲ ತುಂಬಿ, ಬೂದಿಯೊಳಗೆ ಕೆಡದಿಪ್ಪ ಸ್ವಾನಬಲ್ಲುದೆ ? ಅಮೃತಾನ್ನಗಳಿಪ್ಪೆಡೆಯಡಿಗಡಿಗೆ ಅಹಂಕಾರ ಗರ್ವಗಳ ನುಡಿದು, ಪೊಡವಿ ಬ್ರಹ್ಮಾಂಡದೊಡೆಯ ಸೊಡ್ಡಳಂಗೆ ವಿಷ್ಣು ಸರಿಯೆಂದು ನುಡಿವ ಕುನ್ನಿಗಳ ತಲೆಗಳೊಡೆದು ಕೆಡೆವ[ರು]. ಕಳುವ ಕಳ್ಳಂಗೆ ಕತ್ತಲೆಯಲ್ಲದೆ ಬೆಳಗು ಸಮನಿಸುವುದೆ ?
--------------
ಸೊಡ್ಡಳ ಬಾಚರಸ
ಹಿಡಿದು ಬಿಟ್ಟ ಬಳಿಕ ಅಂತಿರಬೇಕಲ್ಲದೆ, ಇನ್ನು ಹಿಡಿದು ತಪ್ಪಿದ ವಸ್ತುವ ಅರಸಿ ಹಿಡಿಯಲುಂಟೆ ? ಮುನಿದು ಹಾವಿನೊಳಿಟ್ಟು ಒಸೆದು ಆನೆಯನೇರಿಸಿಹೆನೆಂದಡೆ, ಶಿವಶರಣರ ಮುನಿಸು ತಿಳಿಯದು ನೋಡಾ. ಒಡೆದ ಮುತ್ತು ನಾಣ್ಯಕ್ಕೆ ಸಲ್ಲದು, ಒಡೆದ ಹಾಲು ಅಮೃತಕ್ಕೆ ಸಲ್ಲದು. ನಾವೇತಕಯ್ಯಾ, ನಿನಗಂದು ಸೊಡ್ಡಳನ ಶರಣರು ನಿರೂಪವ ಕೊಡಲು, ಎನ್ನ ಪರಮಾರಾಧ್ಯರು ಸಂಗನಬಸವಣ್ಣನ ತಿಳುಹುತಿರ್ದರು.
--------------
ಸೊಡ್ಡಳ ಬಾಚರಸ
ಹರಿಬ್ರಹ್ಮಾದಿ ದೇವರ್ಕಳ ಸಲಹುವರೆ, ಮಾತಾ ಪಿತರುಂಟು. ಅಜಾತಲಿಂಗವ ಸಲಹುವರೆ, ಮಾತಾಪಿತರಿಲ್ಲವೆಂದು ಅಮ್ಮವ್ವೆ ಮರುಗುತ್ತಿರಲು, ಅಮ್ವವ್ವೆಯರ ಮರುಕಕ್ಕೆ ಮೆಚ್ಚಿ ಶಿಶುವಾದನು. ಅಮ್ವವ್ವೆ ಮೊಲೆಯನುಣ ಕಲಿಸಿದಳು. ಕೊಡಗೂಸು ಹಾಲನಾರೋಗಿಸ ಕಲಿಸಿದಳು. ಚೋಳಿಯಕ್ಕ ಸಕಲದ್ರವ್ಯಂಗಳು, ಅಪವಿತ್ರಗಳೆಂದವ ಮುಟ್ಟಲೀಯದೆ, ತನ್ನ ಪ್ರಸಾದವನಾರೋಗಿಸಲು ಕಲಿಸಿದಳು. ಇಂತೀ ಪ್ರಸಾದವಲ್ಲದೆ ಅನರ್ಪಿತವ ಮುಟ್ಟಲೊಲ್ಲನೆಂದು, ಸಂಗನಬಸವಣ್ಣನು ಜಂಗಮಪ್ರಸಾದವ ಲಿಂಗಕ್ಕೆ ಸಮರ್ಪಿಸಿ, ಆ ಪ್ರಸಾದವ ಸ್ವೀಕರಿಸಿ ಪ್ರಸಾದಿಯಾದ ಕಾಣಾ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಹರನ ಡಿಂಗರಿಗ ದಧೀಚಿಯ ಶಾಪದಿಂದ ಕರ ಬೇವಂತೆ ಬೆಂದರಾಗಳೆ ಹುರುಡಿಸುವರು. ಇದುಕಾರಣ, ದಿಟದಿಟ ಗರುಡಧ್ವಜದೇವನೆಂದೆಂಬಿರಿ. ಗರುಡವಾಹನನಲ್ಲದೆ ಬೇರೆರಡನೆಯ ದೇವರಿಲ್ಲೆಂದಡೆ, ಹರಿದು ಕಳೆದರು ವ್ಯಾಸನ ತೋಳೆರಡ. ನಂದಿ ಮಹಾಕಾಳರು ಬಂದು, ಮನಸಿನ ಹೊಲಸುಗಳು ನಿಃಕರಡರರಿವರೆ ಶಿವನ ನಿಲುವನು ? ಹರನ ಹೋಲುವ ದೈವರೊಳರೆ, ನಮ್ಮ ಪಂಚವದನ ಸೊಡ್ಡಳಂಗೆ ?
--------------
ಸೊಡ್ಡಳ ಬಾಚರಸ
ಹಂದಿಯಾಗದೆ, ಸೊಣಗನಾಗದೆ, ಮೃಗನಾಗದೆ, ಪಕ್ಷಿಯಾಗದೆ, ಕುರಿ ಬಳ್ಳು ಕತ್ತೆಯಾಗದೆ, ಚೆಂದವಾಯಿತ್ತು [ಚೆ]ಂದವಾಯಿತ್ತು . ಹಿಂದಣ ಜನ್ಮದ ಪರಿಯಲ್ಲಿ ಮಾನವನಾಗಿ ಹುಟ್ಟಿ, [ಚೆಂ]ದವಾಯಿತ್ತು [ಚೆಂ]ದವಾಯಿತ್ತು. ಚೆಂದವಾದ ದೇಹ ವಿಚ್ಛಂದವಾಗದ ಮುನ್ನ, ತಂದೆ ಸೊಡ್ಡಳಂಗೆ ಶರಣೆಂದು ಬದುಕಿದೆನಯ್ಯಾ.
--------------
ಸೊಡ್ಡಳ ಬಾಚರಸ
ಹುತ್ತ ಹೋರಿನೊಳಗೆ ಕೈಯನಿಕ್ಕುವನೆನ್ನ ಶಿಶುವೆಂದು, ಹೆತ್ತ ತಾಯಿ ಮಗನ ಬೆಂಬತ್ತಿ ಬಪ್ಪಂತೆ, ಬೆಂಬತ್ತಿ ಬಿಡಂ ಭೋ. ಅಯ್ಯಾ ಎಂದಡೆ ಓ ಎಂಬೆ. ಅನ್ಯವಿಷಯಕೆನ್ನ ಹತ್ತಲೀಯದೆ, ಎತ್ತೆತ್ತ ನೋಡಿದಡತ್ತತ್ತ ಸೊಡ್ಡಳ.
--------------
ಸೊಡ್ಡಳ ಬಾಚರಸ
ಹೆಂಗೂಸಿಂಗೆ ಶೃಂಗಾರ, ಪುರುಷನ ಕೂಟವೆಯುವನ್ನಕ್ಕ. ಗಂಡುಗೂಸಿಂಗಾಚಾರ, ಪರಮನ ಕೂಟವೆಯ್ದುವನ್ನಕ್ಕ. ಪುರುಷನ ಕೂಟದಲ್ಲಿ ಬಂಗಾರ ಶೃಂಗಾರ ವಸ್ತ್ರವಳಿಯಲು, ನಿಜ ಉಳಿಯಿತ್ತು. ಪರಮನ ಕೂಟದಲ್ಲಿ ಆಗಮಾಚಾರವಳಿಯಲು, ನಿಜ ಉಳಿಯಿತ್ತು. ಆ ಸಜ್ಜನಕ್ಕೆ, ಈ ಸಜ್ಜನಿಕಂಗೆ ಸಜ್ಜನವೆ ಲೇಸು, ಸಜ್ಜನದ ಗಂಡ ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ