ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಳವತ್ತಿಗೆಯಲ್ಲಿದಲ್ಲಿ ತಿಳಿವು ನಿನಗಿಲ್ಲ , ರೂಹತ್ತಿಗೆ ಬಂದಲ್ಲಿ ಮುಂದ ನೀ ಕಾಣೆ. ಸಿರಿವಳದಲ್ಲಿ ದೇವಕಾರ್ಯವಂ ಮಾಡು. ಮದುವಳದಲ್ಲಿಗೆ ಹೋಗದ ಮುನ್ನ ಭಕ್ತಿಯ ಮಾಡು. ನೀನರಿಯೆ ಕಾಡನೂರಿಗೆ ಹೋಗದ ಮುನ್ನ, ಸೊಡ್ಡಳಂಗೆ ಶರಣೆನ್ನಿ.
--------------
ಸೊಡ್ಡಳ ಬಾಚರಸ
ಎನ್ನ ಕಾಯವೆಂಬ ಸಿಂಹಾಸನದಲ್ಲಿ, ಪ್ರಾಣವೆಂಬ ಲಿಂಗವ ಮೂರ್ತಿಗೊಳಿಸಿ, ಧ್ಯಾನವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸುತ್ತಿರಲು, ಮೆಲ್ಲಮೆಲ್ಲನೆ ಸುತ್ತಿ ಮುತ್ತಿದ ಸಂಸಾರ ಬಯಲ ಬೆರಸಿ, ನಾ ನೀನೆಂಬ ಭೇದವಳಿದು, ಮಹಾದಾನಿ ಸೊಡ್ಡಳನಲ್ಲಿ ಲಿಂಗೈಕ್ಯವಾಯಿತ್ತು.
--------------
ಸೊಡ್ಡಳ ಬಾಚರಸ
ಎನ್ನನೆತ್ತಿಕೊಂಡನಯ್ಯಾ ಸಂಗನಬಸವಣ್ಣನು. ಎನ್ನ ಮುದ್ದಾಡಿಸಿದನಯ್ಯಾ ಚನ್ನಬಸವಣ್ಣನು. ಎನಗೆ ಪ್ರಸಾದವನುಣಕಲಿಸಿದನಯ್ಯಾ ಮರುಳಶಂಕರದೇವರು. ಎನ್ನ ಸಲಹಿದನಯ್ಯಾ ಪ್ರಭುದೇವರು. ಎನಗೆ ಅರುಹಕೊಟ್ಟನಯ್ಯಾ ಸಿದ್ಧರಾಮಯ್ಯನು. ಇಂತೀ ಐವರ ಕಾರುಣ್ಯಪ್ರಸಾದವ ಕೊಂಡು ಬದುಕಿದೆನಯ್ಯಾ, ಏಕಾಂತವೀರ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಎಲ್ಲಾ ದೈವಕ್ಕೆ ವಿಷ್ಣು ಘನವೆಂಬ ವೇದಾದಿಗಳು ನೀವು ಕೇಳಿ. ಎಲ್ಲಾ ದೈವಕ್ಕೆ ಸರಿಯೆಂಬ ಮಾಯಾವಾದಿಗಳು ನೀವು ಕೇಳಿ. ಗಾಯತ್ರಿ ಛಂದ, ವಿಶ್ವಾಮಿತ್ರ ಋಷಿ, ಸವಿತಾ ದೇವ, ಅಗ್ನಿ ಮುಖ, ಬ್ರಹ್ಮ ಶಿರ, ವಿಷ್ಣು ಹೃದಯ, ರುದ್ರ ಲಲಾಟವೆಂದು ಹೀಂಗೆ ಹೇಳುತ್ತಿದೆ [ಶ್ರುತಿ]. ಗಾಯತ್ರಿ ಕಲ್ಪದಲ್ಲಿ : ಒಂ ಭೂಃ ಒಂ ಭುವಃ ಒಂ ಸುವಃ ತತ್ಸ ವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿಯೋ ಯೋನಃ ಪ್ರಚೋದಯಾತ್ || ಎಂದುದು ಶ್ರುತಿ. ಸರ್ವದೇವ ಶಿಖಾಮಣಿ ಸೊಡ್ಡಳನಲ್ಲದೆ ದೈವವಿಲ್ಲೆಂದುದು.
--------------
ಸೊಡ್ಡಳ ಬಾಚರಸ