ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಂಸಾರ ಸಂಸಾರ, ಕಾಳಗತ್ತಲೆ ಕಾಳಗತ್ತಲೆ. ಕರ ಹಿರಿದು ಕರ ಹಿರಿದು, ಎಚ್ಚತ್ತಿರು ಎಚ್ಚತ್ತಿರು ಜ್ಞಾನಧನಕ್ಕೆ. ಎಚ್ಚತ್ತಿರು ಎಚ್ಚತ್ತಿರು ಇಂದ್ರಿಯಗಳ್ಳರಿಗೆ. ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ | ಜ್ಞಾನರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ. ಜನ್ಮ ದುಃಖಂ ಜರಾ ದುಃಖಂ ನಿತ್ಯಂ ದುಃಖಂ ಪುನಃ ಪುನಃ | ಸಂಸಾರಸಾಗರೋ ದುಃಖಂ ತಸ್ಮಾತ್ ಜಾಗ್ರತ ಜಾಗ್ರತ || ಎಂದುದಾಗಿ, ಸಲೆ ಜೀವಿತಗೊಂಡ ಸೊಡ್ಡಳ ಆಳು ಭಲಾ ಭಲಾ ಎನ್ನುತ್ತಿರಾ.
--------------
ಸೊಡ್ಡಳ ಬಾಚರಸ
ಸುರರೆಲ್ಲಾ ಮೇಣು ಸತ್ಯಕವಪ್ಪ ದ್ವಿಜರು ತಿರಿಯಕ್ಕಾಗಿ ವಿಭೂತಿಯ ಧರಿಸಿ ಇಹವರು, ನಿಷ್ಟಿಯರೆಲ್ಲಾ ಮೇಣು ಪಟ್ಟವರ್ಧನರು. ಬಟ್ಟಿತ್ತಾಗಿಯೆ ಬೊಟ್ಟನಿಟ್ಟು ಇಹವರು, ಸಿದ್ಧಾಯವ ತೆತ್ತು ಬಿತ್ತಿಯೆಂಬ ಒಕ್ಕಲಿಗರಾದವರು. ಅರ್ಧಚಂದ್ರಾಕೃತಿಯ ಗಂಧದವರು ಕೀಳುಜಾತಿಗಳಯ್ಯಾ. ನೀಳಗಂಧದವರೆಂದು ಹೇಳುವದು ಶೈವದೊಳಗಣ ವಿಭೂತಿಯ ಕಲ್ಪ. ಒಂ ತ್ರಿಪುಂಡ್ರಂ ಸುರವಿಪ್ರಾಣಾಂ ವರ್ತುಳಂ ನೃಜವೈಶ್ಯಯೊಃ | ಅರ್ಧಚಂದ್ರಂತು ಶೂದ್ರಾಣಾಂ ಅನ್ಯೇಷಾಮೂಧ್ರ್ವ ಪುಂಡ್ರಕಂ || ಎಂಬ ವಚನವಿಡಿದು, ಬತ್ತಲೆಗೊಂಬ ಮಾತಿನಲ್ಲಿ, ಮೆಚ್ಚ ಸೊಡ್ಡಳ.
--------------
ಸೊಡ್ಡಳ ಬಾಚರಸ
ಸಾಗರ ಘನವೆಂದಡೆ, ಧರೆಯೊಳಗಡಗಿತ್ತು. ಧರೆ ಘನವೆಂದಡೆ, ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು. ನಾಗೇಂದ್ರನ ಘನವೆಂದಡೆ, ದೇವಿಯರ ಕಿರುವೆರಳಿನ ಮುದ್ರಿಕೆಯಾಯಿತ್ತು. ಅಂಥ ದೇವಿಯ ಘನವೆಂದಡೆ, ಶಿವನರ್ಧಾಂಗಿಯಾದಳು, ಶಿವ ಘನವೆಂದಡೆ, ಬಾಣನ ಬಾಗಿಲ ಕಾಯ್ದ, ನಂಬಿಯ ಹಡಪವ ಹಿಡಿದ. ಇದು ಕಾರಣ, ಸೊಡ್ಡಳಾ ನಿಮ್ಮ ಭಕ್ತರೇ ಘನ.
--------------
ಸೊಡ್ಡಳ ಬಾಚರಸ
ಸೊಣಗಂಗೆ [ಖ]ಂಡವ ಚೆಲ್ಲುವ ತೆರನಂತೆ, ಸಂಸಾರಿಗೆ ಸಂಸಾರವ ಚೆಲ್ಲದೆ, ತೋರುವನೆ ಶರಣಪಥಂಗಳ ? ತೋರುವನೆ ಭಕ್ತಿಪಥಂಗಳ ? ಅದೆಂತೆಂದಡೆ : ಅಶ್ರುತಿಃ ಕರ್ಣಪೂರಂ ಚ ಶ್ರುತೋ ಧರ್ಮೋಪ್ಯರೋಚಕಃ | ಚರ್ಮಖಂಡನ ಭಕ್ಷಾಣಾಂ ಶ್ವಾನಮನ್ನ ಮರೋಚಕಂ || ಎಂದುದಾಗಿ, ಸೊಡ್ಡಳದೇವ ತಾನೊಲ್ಲದವರ ಭವದುಃಖ ದೋಣೆಯಲೂಡುವ.
--------------
ಸೊಡ್ಡಳ ಬಾಚರಸ
ಸಜ್ಜನನಾದ ಶರಣನ ಮುಂದೆ, ಮಜ್ಜನಕ್ಕೆರೆವೆನಯ್ಯಾ ಶಿವಲಿಂಗಕ್ಕೆ. ದುರ್ಜನರೊಡನೆ ಹೋಗಿ, ಅನ್ಯದೈವಕ್ಕೆ ಸಾಹಿತ್ಯ ಕೆಳಗಾಗಿ ಬೀಳುವರು ನೋಡಾ. ಹಾದರಕ್ಕೆ ಹುಟ್ಟಿದವರಿಗಲ್ಲದೆ ಇಂತಹ ಬುದ್ಧಿಯಿಲ್ಲ ಕಾಣಾ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಸೃಷ್ಟಿಪಾಲಕ ಪ್ರತಿಕೂಲವಾದಡೆ, ಸಿಟ್ಟುಗುಟ್ಟಿ ಚಿವುಟನೆ ಬ್ರಹ್ಮನ ಶಿರವ ? ಅವನಿಗೊಡೆಯ ನಾನೆಂದಡೆ, ಬಂಧನದಲ್ಲಿರಿಸನೆ ಬಂಟನಿಂದ ಬಲಿಯ ? ಜಗವಂದ್ಯವಿರಹಿತನಾಗಿ, ಭೂಮಿಯನಳದು ಕೊಂಡಡೆ, ಕಾಲಬಿದ್ದು ಕಾಲಲ್ಲಿರಿಸನೆ ಹರಿಯೆ ? ಹುಟ್ಟಿಸುವನಯ್ಯಾ, ಕುಸಕುಳಿಯೊಳಗೆ ದುರ್ಜೀವಿಗಳ ಮಾಡಿ. ಕತ್ತಿ ಕೌಚಿಯಲ್ಲಿ ಕುಸುರಿದರಸಿಕೊಂಡು, ಬಟ್ಟಬಯಲಲ್ಲಿ ಹೋದರು, ಸೃಷ್ಟಿಗೀಶ್ವರ ಕರ್ತ ಸೊಡ್ಡಳನನರಿಯದನ್ಯಾಯಿಗಳು.
--------------
ಸೊಡ್ಡಳ ಬಾಚರಸ