ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉದ್ದವಾಗಿ ಕೂದಲು ನಿಮಿರ್ದು, ಗಡ್ಡಂಗಳು ಬೆಳದಡೇನು ಹೇಳಾ ! ಗಡ್ಡಂಗಳು ಬೆಳೆಯವೆ ಹೇಳಿರಣ್ಣಾ, ದೊಡ್ಡದಾಗಿ ಬೆಳೆದ ಗಡ್ಡ ಹೋತುಗಳಿಗೆ. ಗಡ್ಡದ ವೃದ್ಧ ವೈಶಿಕರ ಮೆಚ್ಚ, ಮಹಾದೇವ ಸೊಡ್ಡಳ ಭಕ್ತಿ ಸಜ್ಜನರಲ್ಲದವರ.
--------------
ಸೊಡ್ಡಳ ಬಾಚರಸ
ಉಡಲು ತೊಡಲು ಹೊದೆಯಲೆಂದು, ಮಡಿಹಿದ ಮೃಡ ಮೂವರತಂದು, ತೊಗಲನುಗಿದನಮಮ. ಕರಿದಾನವ ಕೇಸರಿ ದಾನವ, ಬಾಹೂರು ದಾನವರ ಸೊಡ್ಡಳನಂದು.
--------------
ಸೊಡ್ಡಳ ಬಾಚರಸ
ಉಂಡುಂಡು ಜರಿದವನು ಯೋಗಿಯೆ ? ಅಶನಕ್ಕೆ ಅಳುವವನು ಯೋಗಿಯೆ ? ವ್ಯಸನಕ್ಕೆ ಮರುಗುವವ[ನು] ಯೋಗಿಯೆ ? ಆದಿವ್ಯಾಧಿಯುಳ್ಳವ[ನು] ಯೋಗಿಯೆ ? ಯೋಗಿಗಳೆಂದಡೆ ಮೂಗನಾಗಳೆ ಕೊಯಿವೆ. ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳಾ, ಸಿದ್ಧರಾಮನೊಬ್ಬನೆ ಶಿವಯೋಗಿ.
--------------
ಸೊಡ್ಡಳ ಬಾಚರಸ