ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಮ್ಮ ಪುತ್ರರಂಗದ ಮೇಲೆ, ತಮ್ಮ ಶ್ರೀಗುರುವಿನ ಹಸ್ತದಲ್ಲಿ, ಲಿಂಗಸಾಹಿತ್ಯವ ಮಾಡಿದ ಬಳಿಕ, ಆ ಗುರುವಿನ ಪುತ್ರರಲ್ಲದೆ, ತಮ್ಮ ಪುತ್ರರಲ್ಲ. ತಾವವರೂ ಗುರುವಿನ ಸೊಮ್ಮೆಂದರಿದು, ಮತ್ತೆ ತಮ್ಮ ಪುತ್ರಿಯರೆಂದು ಮಾರಿಕೊಂಡುಂಡು, ನಾನು ಭಕ್ತ, ನಾನು ಮಹೇಶ್ವರನೆಂಬ ಶಿವಾಚಾರ ಭ್ರಷ್ಟರುಗಳ ವೀರಸೊಡ್ಡಳ ಮೆಚ್ಚುವನೆ, ಚನ್ನಬಸವಣ್ಣಾ ?
--------------
ಸೊಡ್ಡಳ ಬಾಚರಸ
ತಿರುಕನಾಗುವ, ನರಕಿಯಾಗುವ, ವಿರಸನಾಗುವ, ಕುರುಡನಾಗುವ, ಕುರುಟನಾಗುವ, ಕುಂಟನಾಗುವ, ಮುರುಡನಾಗುವ, ಕನ್ನವನಿಕ್ಕುವ, ಅನ್ಯಶಬ್ದವ ನುಡಿವ, ತೊನ್ನು ಹತ್ತುವ, ಬಣ್ಣಬಿಡುವ, ಹೊನ್ನ ಕೆಡುವ ಮುನ್ನ, ಸೊಡ್ಡಳನ ಆರಾಧನೆ ಇಲ್ಲದ ಕುನ್ನಿಗಳಿಗೆಲ್ಲಾ ಈ ವಿದ್ಥಿ ತಪ್ಪದು.
--------------
ಸೊಡ್ಡಳ ಬಾಚರಸ
ತನುವಿಕಾರ, ಮನವಿಕಾರ, ಜನನಮರಣಸ್ಥಿತಿ ಕಾರಣ, ಹೊನ್ನ ತೋರಿದೆ, ಜಗದ ಕಣ್ಣ ಮೊದಲಿಗೆ. ಹೆಣ್ಣ ಸುಳಿಸಿದೆ, ಜಗದ ಕಣ್ಣ ಮೊದಲಿಗೆ. ಮಣ್ಣ ಹರಹಿದೆ, ಜಗದ ಕಣ್ಣ ಮೊದಲಿಗೆ. ತನುವ ತಪ್ಪಿಸಿ, ಜಗವ ಸಂಸಾರಕ್ಕೊಪ್ಪಿಸಿ, ನುಣ್ಣನೆ ಹೋದನುಪಾಯದಿ ದೇವರಾಯಸೊಡ್ಡಳ.
--------------
ಸೊಡ್ಡಳ ಬಾಚರಸ
ತನ್ನ ಶ್ರೀಗುರುವಿಂಗೆ ಸಕಲಪದಾರ್ಥವ ಕೊಟ್ಟು ಕೊಂಡಡೆ ಪ್ರಸಾದ. ತನ್ನ ಪ್ರಾಣಲಿಂಗಕ್ಕೆ ಸಕಲಪದಾರ್ಥವ ಕೊಟ್ಟು ಕೊಂಡಡೆ ಪ್ರಸಾದ. ಜಂಗಮಕ್ಕೆ ಸಕಲಪದಾರ್ಥವ ಕೊಟ್ಟು ಕೊಂಡಡೆ ಪ್ರಸಾದ. ಇದೇ ಪ್ರಸಾದದ ಹಾದಿ ಕಂಡಯ್ಯಾ. ಮುನ್ನಾದಿಯ ಪುರಾತನರು ನಡೆದ ಪಥವು ಕಂಡಯ್ಯಾ. ಇಂತೀ ಶ್ರೀಗುರುವಿಂಗೆ ಕೊಡದೆ, ಲಿಂಗಕ್ಕೆ ಕೊಡದೆ, ಜಂಗಮಕ್ಕೆ ಕೊಡದೆ ತಾನೆ ಉಂಡನಾದಡೆ, ಹುಳುಗೊಂಡದಲ್ಲಿಕ್ಕುವ, ನಮ್ಮ ದೇವರಾಯ ಸೊಡ್ಡಳ.
--------------
ಸೊಡ್ಡಳ ಬಾಚರಸ
ತೋಟದೊಡೆಯ ತೋಟದ ನಾಲ್ಕು ಗೋಟ ಮೆಟ್ಟಿ ಕಾವಾಗ, ಕಣ್ಣ ತೆರೆವರಾರೊ ? ಹೂ ಕಾಯ ಹಣ್ಣ ತಿರುವರಾರೊ ? ಹೊಟ್ಟನೊಟ್ಟಿ ಬೀಜವನುಳುಹಿ ಸುಡುವ ಸೊಡ್ಡಳರಾಯ.
--------------
ಸೊಡ್ಡಳ ಬಾಚರಸ
ತೆರಹು ಮರಹೆಂಬುದು ನಿಮ್ಮ ಗುಣವಲ್ಲ. ಅಮೃತಸಾಗರದೊಳಗೆ ಬೇವಿನ ಬಿಂದುವುಂಟೆ ? ಮನವ ನೋಡಲೆಂದು ನಟ ನಾಟಕವನೊಡ್ಡಿದಡೆ, ಅದಕ್ಕೆ ಸಹಜವಲ್ಲಾಗಿ, ಹೆದರಲಿಲ್ಲ, ಮಹಾದಾನಿ ಸೊಡ್ಡಳನ ಮನ ನೊಂದಿತ್ತೆಂದು, ಅಂಜಬೇಡವೇಳಾ, ಸಂಗನಬಸವಣ್ಣಾ.
--------------
ಸೊಡ್ಡಳ ಬಾಚರಸ