ಅಥವಾ
(11) (2) (3) (0) (0) (1) (0) (0) (4) (0) (1) (0) (0) (0) ಅಂ (3) ಅಃ (3) (21) (0) (2) (1) (0) (1) (0) (1) (0) (0) (0) (0) (0) (0) (0) (5) (0) (1) (1) (4) (3) (1) (6) (4) (7) (0) (2) (0) (1) (1) (2) (0) (11) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಕ್ಕನ ಮೂಲೆಯ ಮೊದಲಿನಲ್ಲಿ ಮೂವರು ತಮ್ಮಂದಿರು ಬಂದರು. ತಮ್ಮ ತಮ್ಮ ಅಂಗವ ತೋರಿ, ಅಕ್ಕನ ಮುಂದೆ ಬೆತ್ತಲೆ ಆಡುತ್ತಿದ್ದರೆ, ಬೆತ್ತಲೆಯ ಮುಟ್ಟಿ ಕಂಡು, ತಮ್ಮನದ ತನ್ನದರಲ್ಲಿ ಇಕ್ಕಿಕೊಂಡಳು. ಅಕ್ಕ ತಮ್ಮನ ಕೂಡಿ ಒಪ್ಪವಾಗಿ ಬಾಳುತ್ತಿದ್ದರು, ಬಂಕೇಶ್ವರಲಿಂಗವನರಿತ ಕಾರಣ.
--------------
ಸುಂಕದ ಬಂಕಣ್ಣ
ಅರಿದಾಡುವಲ್ಲಿ ಹೊರೆಸುಂಕ. ಅರಿವು ತೆರೆದು ಬಿಟ್ಟಲ್ಲಿ ಪಸರಸುಂಕ. ಇಚ್ಛೆಯನರಿತ ಭಕ್ತಿಜ್ಞಾನ ನಿಶ್ಚಯವಾದಲ್ಲಿ, ಬಚ್ಚಬಯಲಸುಂಕ, ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಅಪ್ಪು ಉತ್ಪತ್ಯವಾಗಿ ಜಗವ ಕದಡುವಾಗ, ಇರುಹಿನ ಮೊಟ್ಟೆ ಹೆಪ್ಪಳಿದುದಿಲ್ಲ. ಇರುಹಿನ ಗೂಡಿನ ಗುಹೆಗೆ ಅಪ್ಪು ಮುಟ್ಟಿದುದಿಲ್ಲ. ಇದೇನು ಚೋದ್ಯ ? ಬಂಕೇಶ್ವರಲಿಂಗದಲ್ಲಿ ಆರಡಿಗೊಂದು ಬನ್ನಿ.
--------------
ಸುಂಕದ ಬಂಕಣ್ಣ
ಅನ್ನದ ಮೇಲಣ ಲವಲವಿಕೆ, ನಿದ್ರೆಯ ಮೇಲಣ ಲವಲವಿಕೆ, ಅಂಗನೆಯರ ಮೇಲಣ ಲವಲವಿಕೆಯಿದ್ದಂತೆ ಲಿಂಗದಲ್ಲಿರಬೇಕು. ಶಿವಲಿಂಗದಲ್ಲಿ ಮೋಹವನಳವಡಿಸಿದರೆ, ತನ್ನನೀವ ನಮ್ಮ ಚೆನ್ನಬಂಕನಾಥದೇವನು.
--------------
ಸುಂಕದ ಬಂಕಣ್ಣ
ಅಸ್ಥಿ ಚರ್ಮವ ಪುದಿದ ಮರೆಯ ಹರಿಗೆಯೊಳು, ಅಸುಭಟನೆಂಬ ಬಂಟ, ದಶೇಂದ್ರಿಯನಪ್ಪ ಮಿಸುಗುವ ಕೂರಲಗಿನಲ್ಲಿ ನಿರ್ಗತಿಯೆಂಬ ಪ್ರಮಥನೊಳು ಕದನವನೆಸಗೆ, ಹುಸಿಕಾಯ ತೋರದ ಧನುವ ಜೇವಡೆಗೈದು, ನಿರ್ಧರ ದಿವ್ಯಪ್ರಣಮವೆಂಬ ಮೊನೆದೋರದ ಸರದಲ್ಲೆಸೆಯೆ, ಅಸ್ಥಿ ಚರ್ಮದ ಪ್ರಕೃತಿಯ ಅಂಗದ ನೇಮದ ಠಾವಿನಲ್ಲಿ ಬಿದ್ದುಕೊಂಡಿತ್ತು. ಅವನಸುವ ನಿರ್ವಾಣದ ಕೂರಲಗು ಅರಿ ಇದಿರಿಲ್ಲ. ಬಂಕೇಶ್ವರಲಿಂಗಕ್ಕೆ ಇದಿರಿಲ್ಲ.
--------------
ಸುಂಕದ ಬಂಕಣ್ಣ
ಅಂಬುಧಿಯಲ್ಲಿ ಹಡಗು ಬರುತ್ತಿರಲಾಗಿ, ಹಡಗಿನ ಕುಕ್ಕೊಂಬಿನ ಮೇಲೆ ಒಂದು ಕರಡಿ ಬಂದಿತ್ತು. ಆ ಕರಡಿಗೆ ಕಾಲು ಮೂರು, ಕಣ್ಣು ಒಂದು, ಬಾಲ ಕಡೆಯಿಲ್ಲ. ಬಂಕೇಶ್ವರಲಿಂಗಕ್ಕೆ ಹಡಗಿನ ಸುಂಕ ಕಡೆನಡುವಿಲ್ಲ.
--------------
ಸುಂಕದ ಬಂಕಣ್ಣ
ಅಯ್ದು ಕೂಡಿ ವೇಧಿಸಿ, ಹಿರಿಯ ಸಾಗರವಾಯಿತ್ತು. ಇಪ್ಪತ್ತೈದು ಕೂಡಿ, ನಿಂದ ಸಮುದ್ರವಾಯಿತ್ತು. ಆ ಸಮುದ್ರದ ನಡುವೆ ನೂರೊಂದು ತುದಿಯಿಲ್ಲದ ಬೆಟ್ಟ. ತುದಿನೀರೊಳಗೆ ಮುಳುಗಿ, ಗಿರಿಯ ಅಂಡು ಆಕಾಶವ ನೋಡುತ್ತದೆ. ಇದು ಚೋದ್ಯ, ಬಂಕೇಶ್ವರಲಿಂಗವ ಕೇಳುವ ಬನ್ನಿ.
--------------
ಸುಂಕದ ಬಂಕಣ್ಣ
ಅಂಬರ ಸಂಭ್ರಮದ ಬಾಗಿಲಲ್ಲಿ, ನಾನಾ ಚೆಂದದ ಗುಡಿತೋರಣ, ಮಕರಪತಾಕೆ, ಧನುಚ್ಛಾಯ, ಸರ ತೋರಿ ಎತ್ತುತ್ತದೆ. ಕಂಡು ಎವೆ ಹಳಚೂದಕ್ಕೆ ಮುನ್ನವೆ ಅಳಿವುತ್ತದೆ. ಅರಿ ಅರಿವುದಕ್ಕೆ, ಹಿಂಚುಮುಂಚು ಬಂಕೇಶ್ವರಲಿಂಗವ.
--------------
ಸುಂಕದ ಬಂಕಣ್ಣ
ಅಂಗದಲ್ಲಿದ್ದು ಅವಧಾನಿಯಾಗಿ, ಭಾವದಲ್ಲಿದ್ದು ಭವಚ್ಛೇದನವಾಗಿ, ಸುಖದಲ್ಲಿದ್ದು ಅಸು ಅಂತಕನಾಗಿ, ಸಕಲಭೋಗಂಗಳಲ್ಲಿದ್ದು ಭೋಗವಿರಾಗನಾಗಿ, ಬಂಕೇಶ್ವರಲಿಂಗವ ನೋಡುತ್ತಿದ್ದು ನೋಡದಂತಿರು, ಮನ ಘನದಲ್ಲಿ ನಿಂದು.
--------------
ಸುಂಕದ ಬಂಕಣ್ಣ
ಅಜಶ್ರೋಣಿಯೆಂಬ ಶುಕ್ಲಪೀಠದಲ್ಲಿ, ಮೂವರು ವಿಧಾತರು ಹುಟ್ಟಿದರು. ಒಬ್ಬ ಇಂದ್ರಜಾಲ, ಒಬ್ಬ ಮಹೇಂದ್ರಜಾಲ. ಅವರಿಬ್ಬರ ಗೆದ್ದ ಅದೃಶಾಕರಣನೊಬ್ಬ, ಬಂಕೇಶ್ವರಲಿಂಗವ ಇಲ್ಲಾ ಉಂಟೋ ಎನುತಿದ್ದ.
--------------
ಸುಂಕದ ಬಂಕಣ್ಣ
ಅಡಿಗಡಿಗೆ ಬಂದಡರುತಿರ್ಪೆ. ಕಡುಛಲ ನಿನಗೆ ಬೇಡ ಕಂಡಾ ! ಮೃಡನೆ, ಎನ್ನೊಡನೆ ನೀ ತೊಡರಿ ಸಸಿನೆ ಹೋಗಲಿರಯೆ. ಎಂತೆಂದಡೆ ನಾನಂಜುವನಲ್ಲ. ಸಂತತ ಘಾಸಿ ಮಾಡದೆ, ಕಂತುಹರ ಅಭಯಕರ, ಎನ್ನ ನೇಮಕ್ಕೆ ಅಡ್ಡ ಬರುತ್ತಿರದಿರು. ಒಡವೆ ಸವೆದರೊಡಲನೊಡ್ಡುವೆ. ಕಡಗುವಡೊಮ್ಮೆ ಹಳಚಿ ನೋಡು. ಬಡವನ ಕೈಯ ಕಡುಹ ನೋಡೆನ್ನೊಡೆಯ ಸಂಗಪ್ರಿಯ ಚೆನ್ನಬಂಕೇಶ್ವರಾ.
--------------
ಸುಂಕದ ಬಂಕಣ್ಣ