ಅಥವಾ
(11) (2) (3) (0) (0) (1) (0) (0) (4) (0) (1) (0) (0) (0) ಅಂ (3) ಅಃ (3) (21) (0) (2) (1) (0) (1) (0) (1) (0) (0) (0) (0) (0) (0) (0) (5) (0) (1) (1) (4) (3) (1) (6) (4) (7) (0) (2) (0) (1) (1) (2) (0) (11) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೊಲದೊಳಗೊಂದು ಹುಲ್ಲೆ ಮರಿಯನೀದು, ಲಲ್ಲೆಯಿಂದ ನೆಕ್ಕುತ್ತಿರಲಾಗಿ, ಅದು ಹುಲಿಯ ಮರಿಯಂತಾಯಿತ್ತೆಂದು ತನ್ನ ಹೊಲಬಿಗೆ ತೋರಿ ಲಲ್ಲೆಯ ಬಿಟ್ಟಿತ್ತು. ಬಿಟ್ಟುದನರಿದು, ಆ ಮರಿ ಹುಲಿಯಾಗಿ ಹುಲ್ಲೆಯ ತಿಂದಿತ್ತು. ಬಂಕೇಶ್ವರಲಿಂಗ, ಎನ್ನಯ ಶಂಕೆಯ ಹೇಳಯ್ಯಾ.
--------------
ಸುಂಕದ ಬಂಕಣ್ಣ
ಹಾವ ಕೊಂದು ತಿಂದ ಹದ, ತಾ ತಿಂದಡೆ, ಸ್ವಾನುಭಾವಜ್ಞಾನಿ. ಹುಲಿಯ ಕೊಂದ ನಾಯ ಕೊಲ್ಲದೆ ತಂದಡೆ, ಆತ ಪರಂಜ್ಯೋತಿ ಪ್ರಕಾಶ. ಇಂತೀ ಹಾವಿನ ಹಗೆ, ಹುಲಿಯ ವಿರೋಧ. ಇಂತೀ ಉಭಯವ ತಿಂದವನ ತಿಂದು, ವಿಚ್ಛಂದವಿಲ್ಲದೆ ಬದುಕು, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
ಹಿಂಡುಗಟ್ಟಿಯ ಕಟ್ಟುವವನ ಅಂಡಿನ ಕೂದಲಿನಲ್ಲಿ , ಮೂರುಸಂದು ಹುಟ್ಚಿದವು. ಮೂರು ಸಂದಿನಿಂದ ಬಂದ ಸಂದೇಹವೆಲ್ಲವು ಜಗದಲ್ಲಿ ಹೊಂದುತ್ತಿದೆ. ಆ ಹೊಂದುವ ಅಂದವ ಹೇಳು, ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಹಡಗಿನ ಮನೆ ಮೂರು. ಸುರೆಯ ಗಡಿಗೆಯ ಹೊತ್ತು ಮಾರುವ ಅಸುವಿನ ಘಟಸುಂಕ, ತೆರಿಗೆಯ ಭೇದ. ಅರಿದು ನಡೆ, ಪಥ ಶುದ್ಧವಾಗಿ, ಬಂಕೇಶ್ವರಲಿಂಗದೊಪ್ಪದ ಚೀಟ ಕೊಂಡು.
--------------
ಸುಂಕದ ಬಂಕಣ್ಣ
ಹರಿಗೆಯ ಹಿಡಿದು ರಣವ ಹೊಕ್ಕಲ್ಲಿ, ತನ್ನೆಡೆಗೆ ಮರೆಯಹ ತೆರದಂತೆ, ತನ್ನಯ ಸತ್ಕ್ರೀ ಭಕ್ತಿಮಾರ್ಗದ ಮಾಟಕೂಟದಿರವು. ತಾ ಮಾಡುವಲ್ಲಿ ಇದಿರ ರೂಪ ನೋಡಲಿಲ್ಲ. ಅರಿಕೆಯಲ್ಲಿ ಉಭಯವನರಿಯಬೇಕು. ಎಲೆಯ ಮರೆಯ ಕಾಯನರಿದಂತೆ, ದರ್ಶನದ ಮರೆಯ ಅರಿವನರಿಯಬೇಕು, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
ಹೊರವಾರು ಉಭಯಮಾರ್ಗ, ಒಳವಾರು ಸ್ಥಲಕುಳ ವಿಸಂಚವಿಲ್ಲಾ ಎಂದು ಕೊಟ್ಟ ಚೀಟು, ನಿಮ್ಮ ಕೈಹಾಳೆಯಲ್ಲಿ ಅದೆ. ತಡಿಯೊಡೆಯಂಗೆ ಕುರುಹ ತೋರಿ, ನಿಮ್ಮ ನಿಮ್ಮ ಹೊರೆಯ ಕೊಂಡು ಹೋಗಿ, ಜಗದ ಸುಂಕದೊಡೆಯ ಬಂಕೇಶ್ವರಲಿಂಗದ ಅರಿಕೆಯಾಗಿ.
--------------
ಸುಂಕದ ಬಂಕಣ್ಣ
ಹಾವು ಸತ್ತು ಹೇಳಿಗೆಯ ಹೊತ್ತಾಡುವವರೆಲ್ಲರೂ ಎನ್ನವರು. ಹುಲಿ ಸತ್ತು ಗೂಡ ಹೊತ್ತಾಡುವವರೆಲ್ಲರೂ ಎನ್ನವರು. ಮಕ್ಕಳಿಲ್ಲದ ಬಂಜೆ ಗೊತ್ತಿಲ್ಲದ ರೂಪು ಮಾರಿ ಮಿಕ್ಕುದು ಎನ್ನೊಡವೆ. ರೂಪು ರುಚಿ ತೃಪ್ತಿ ಭಾವ ಅದು ನಿನ್ನೊಡವೆ. ನನಗೂ ನಿನಗೂ ತತ್ತುಗೊತ್ತು, ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಹುಲಿ ಹುತ್ತ ಕಳ್ಳರ ಹಾದಿ, ಬಲುಗೈಯರ ತೆಕ್ಕೆ, ಇದು ಬಲವಂತತನದಿಂದ ಆಗದು, ಅವರವರ ಒಲವರದಿಂದಲ್ಲದೆ. ಗೆಲುವ ಮನ, ಸೋಲುವ ಕಾಯ, ಈ ಉಭಯದ ಒಲವರದಿರವು, ಶರೀರದ ಸುಂಕ, ಬಂಕೇಶ್ವರಲಿಂಗಕ್ಕೆ.
--------------
ಸುಂಕದ ಬಂಕಣ್ಣ
ಹರಿವ ಮನ ತುರಗ, ಅಹಂಕಾರ ಗಜ, ಮೂಢಚಿತ್ತ ಒಂಟೆಯಾಗಿ, ಜೀವಗಳು ವ್ಯವಹಾರಿಯಾಗಿ, ಅಂಗವೆಂಬ ಭೂಮಿಯಲ್ಲಿ ಬೆವಹಾರವ ಮಾಡಲಾಗಿ, ಚಿತ್ತವೆಂಬ ಸೂಳುಗಾರ ಒಪ್ಪದ ಚೀಟ ತೋರಿಯೆಂದಲ್ಲಿ ಸಿಕ್ಕಿದ. ಜೀವವೆಂಬ ಸೆಟ್ಟಿ ಭವದ ತಕ್ಕೆಯ ಸೆರೆ ಸಾಲಿಯಲ್ಲಿ ಕೆಟ್ಟಿತ್ತು ಸುಂಕ, ಬಂಕೇಶ್ವರಲಿಂಗಕ್ಕೆ ನಷ್ಟ ಬಂದುದಿಲ್ಲ.
--------------
ಸುಂಕದ ಬಂಕಣ್ಣ
ಹುಳ್ಳಿ ಹಳ್ಳದಲ್ಲಿ ಹೋಗುತ್ತಿರೆ, ನೀರು ತಾಗಿ ಅಲ್ಲಾಡದಿಹುದೆ ? ಸಂಸಾರಸಾಗರಮಧ್ಯದಲ್ಲಿ ವಾಸವಾಗಿದ್ದ ಆತ್ಮ, ಸಂಸಾರದ ಪಾಶ ತಾಗಿ ಓಸರಿಸದಿಹುದೆ ? ರಸತಾಗಿದ ರಸ ಪಾವಕಂಗೆ ಹುಸಿಯಾದಂತೆ, ಅಸು ಘಟಯೋಗ ಅದರ ದೆಸೆಯಂತೆ ಇರಬೇಕು, ಹುಸಿ ದಿಟದಂತಿರಬೇಕು, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
ಹಸಿದುಂಬ ಅಣ್ಣಗಳೆಲ್ಲರೂ ಅಸುವಿನ ಘಾತಕ್ಕೊಳಗಾದರು. ಹಸಿ[ವೆ]ಯ ವಿಷಯಂಗಳಲ್ಲಿ ನಸಿದಾಡದೆ ಹುಸಿಯದೆ, ಮತ್ರ್ಯರಂತೆ ಗಸಣೆಗೊಳ್ಳದೆ, ದಯದೆರಕದಲ್ಲಿರು, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ