ಅಥವಾ
(11) (2) (3) (0) (0) (1) (0) (0) (4) (0) (1) (0) (0) (0) ಅಂ (3) ಅಃ (3) (21) (0) (2) (1) (0) (1) (0) (1) (0) (0) (0) (0) (0) (0) (0) (5) (0) (1) (1) (4) (3) (1) (6) (4) (7) (0) (2) (0) (1) (1) (2) (0) (11) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾಡೆಲ್ಲರೂ ನೆರೆದು ಕೂಡಿ ಮಾಡುವ ಗುಣಸಮೂಹ ಬೇಡ. ಪಶುವ ನೆಚ್ಚು ಕೂಡಿ ಹಸಿಗೆಗೆ ಬಂದಂತೆ. ಉಂಬ ಊಣೆಯಕ್ಕೆ ನೆರೆದು, ಭಕ್ತಿಯ ಊಣೆಯಕ್ಕೆ ಹಿಂದುಮುಂದಾದ ಸಂದಣಿಯ ಚೋರರಿಗೇಕೆ, ವ್ರತ ನೇಮ ನಿತ್ಯ? ಇವರಂಗಕ್ಕೆ ಸಂಗವಾದ ಬಂಕೇಶ್ವರಲಿಂಗ.
--------------
ಸುಂಕದ ಬಂಕಣ್ಣ
ನಿಂದಿಸುವನೊಬ್ಬ, ಸ್ತುತಿಸುವನೊಬ್ಬ. ಇವರಿಬ್ಬರು ಪರಮಬಂಧುಗಳು. ಆ ಯೋಗಿಯ ಪುಣ್ಯವನೊಬ್ಬ ಕೊಂಬ, ಪಾಪವನೊಬ್ಬ ಕೊಂಬ. ಇದು ಕಾರಣ, ಗುರುಪ್ರಿಯ ಚೆನ್ನಬಂಕೇಶ್ವರನಲ್ಲಿ, ಸತ್ಯಶರಣರು ನಿತ್ತಮುಕ್ತರು.
--------------
ಸುಂಕದ ಬಂಕಣ್ಣ
ನಿಜ ನಿಶ್ಚಯವಾದಲ್ಲಿ ಚಿಲುಮೆ ಜಲ, ಸಕಲರುಚಿ, ವಿಚ್ಛಂದವಾಗಿ ಬಯಕೆಯ ಬಿಟ್ಟುದೆ ಲವಣನಾಸ್ತಿ. ಸರ್ವಕರಣೇಂದ್ರಿಯಂಗಳ ಸಂಸರ್ಗಕ್ಕೆ ಮನವನೀಯದಿದುದೆ ಭವಿ ವಿರೋಧ. ಉಚಿತ ತತ್ಕಾಲಂಗಳಲ್ಲಿ ಅಪ್ಯಾಯನವರಿತು ವಿಶ್ರಮಿಸೂದೆ ಕೃತ್ಯದ ಕಟ್ಟಣೆ. ಮನಬಂದಂತೆ ನುಡಿದು, ತನುಬಂದಂತೆ ಆಡಿ, ನಿಂದಿಹ ಸ್ಥಿತಿಯ ತಾನಾಡಿ, ಹಲಬರ ಕೈಯಲ್ಲಿ ಕೇಳಿ, ಇಂತೀ ಗುಣಕ್ಕೆ ಒಪ್ಪಿ, ಭಕ್ತನೆಂಬ ಕೃತ್ಯದ ಮತ್ತರನೊಪ್ಪ ಬಂಕೇಶ್ವರಲಿಂಗ.
--------------
ಸುಂಕದ ಬಂಕಣ್ಣ
ನಡೆದಾಚರಿಸೂದಕ್ಕೆ ಕ್ರೀ, ಅದು ಲೇಪವಾಗಿ ನಿಂದಲ್ಲಿ ಉಭಯನಾಮನಷ್ಟ. ಅದ ಭಾವಿಸುವ ಭಾವ, ತೆರದರಿಸಿನವಾದಲ್ಲಿ ವಿರಕ್ತಿಭಾವ. ಬಂಕೇಶ್ವರಲಿಂಗವನರಿವುದಕ್ಕೆ ಶ್ರದ್ಧೆಯ ಭಿತ್ತಿ.
--------------
ಸುಂಕದ ಬಂಕಣ್ಣ