ಅಥವಾ
(11) (2) (3) (0) (0) (1) (0) (0) (4) (0) (1) (0) (0) (0) ಅಂ (3) ಅಃ (3) (21) (0) (2) (1) (0) (1) (0) (1) (0) (0) (0) (0) (0) (0) (0) (5) (0) (1) (1) (4) (3) (1) (6) (4) (7) (0) (2) (0) (1) (1) (2) (0) (11) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನುಮಂಡಲ ರಣಮಯವಾಯಿತ್ತು . ಕರಣಂಗಳ ಹಿಂಡು ಕೆದರಿತ್ತು. ತನುಮಂಡಲದರಸು ಹಿಂದುಮುಂದಾದ ಚಂಡಿಕ, ಚಂಡಿಕ ಪ್ರಚಂಡ ತಮಕೋದಂಡ ಮಾರ್ತಾಂಡಮಯ, ಸ್ವಯಕುಲ ಚಕ್ರವರ್ತಿ ಗೆದ್ದ, ಬಂಕೇಶ್ವರಲಿಂಗದೊಲುಮೆಯಿಂದ.
--------------
ಸುಂಕದ ಬಂಕಣ್ಣ
ತರುಗಿಡು ಗುಣನಾಮವಾದಡೇನು, ಸ್ಥಾಣುವಿನ ಒಲವರದ ತೆರ ಬೇರೆ. ದರ್ಶನ ಸುಖಸಂಪತ್ತಾದಡೇನು, ಅರಿವಿನ ಒಲವರದ ತೆರ ಬೇರೆ. ಎಲೆಯ ಹಾಕಿ ತನ್ನಲ್ಲಿಗೆ ಕರೆವವನ ಗುಣ ಲೇಸೆ ? ಶಬರನ ವೇಷ, ಮೃಗದ ಹರಣದ ಕೇಡು. ಹಿರಿಯತನವ ತೋರಿ, ತ್ರಿವಿಧವ ಬೇಡುವ ಅಡಿಗರಿಗೇಕೆ, ಬಂಕೇಶ್ವರಲಿಂಗವ ಅರಿದ ಅರಿವು ?
--------------
ಸುಂಕದ ಬಂಕಣ್ಣ
ತತ್ವಾರ್ಥವ ಬಲ್ಲವಂಗೆ ಆ ತತ್ವಾರ್ಥವೆ ಕತ್ತಲೆಯ ಮಾಯೆ. ಆಧ್ಯಾತ್ಮವ ಬಲ್ಲವಂಗೆ ಆ ಪವನನೆ ತನ್ನ ಸುತ್ತಿದ ಮಾಯೆ. ಕ್ರೀಭಾವವಂತರಿಗೆ ಸಂದೇಹವೆ ತನ್ನ ಸುತ್ತಿದ ಮಾಯೆ. ಇಂತಿವನಹುದಲ್ಲಾ ಎಂಬುದು ತಾ ಮಾಯೆ, ಬಂಕೇಶ್ವರಲಿಂಗವ ಕೇಳಿಕೊಂಬ.
--------------
ಸುಂಕದ ಬಂಕಣ್ಣ
ತೋರುವ ತೋರಿಕೆ ಸಬರೆ ಮುಟ್ಟಾಗಿ, ಭಾವಭ್ರಮೆ ಸರ್ವತ್ರವ್ಯಾಪಾರ ವಿದಳ ಧಾನ್ಯವಾಗಿ, ಚಿತ್ತವನರಿಯದ ಭಾವ ಎತ್ತಾಗಿ, ಜಗವ ಸಿಕ್ಕಿಸುವ ವೇಷ ಲಾಂಛನಧಾರಿ ಸೆಟ್ಟಿಯಾಗಿ, ಸರ್ವಪ್ರಕೃತಿ ದೇಶದಲ್ಲಿ ಬೆವಹಾರವ ಮಾಡುತ್ತಿರಲು, ನಿರಾಸಕ ಕೋಲುಕಾರ ತನುವಿನ ಸೆಟ್ಟಿಯ ತಡೆ ಬಿಟ್ಟಿತ್ತು. ಗತವಾಗಿ, ಕಾಲದ ಮಂದಿರಕ್ಕೆ ಒಪ್ಪದ ಚೀಟಲ್ಲದೆ, ಬಂಕೇಶ್ವರಲಿಂಗಕ್ಕೆ ಸುಂಕಲಾಭವಾಯಿತ್ತು.
--------------
ಸುಂಕದ ಬಂಕಣ್ಣ
ತುರೀಯದಲ್ಲಿ ಕೂಡಿದ ಕೂಟ ಸುರತಕ್ಕೆ ಈಡಲ್ಲ. ತದನಂತರದಲ್ಲಿ ಕೂಡಿದ ಕೂಟ ಕರಣಂಗಳ ಹೋರಟೆ. ಕಡೆಯಲ್ಲಿ ಕೂಡಿದ ಕೂಟ ವಿಷಯಕ್ಕೆ ಒಡಮರಣವಾಯಿತ್ತು. ಈ ತ್ರಿವಿಧದ ತೊಡಿಗೆಯನರಿ, ಬಂಕೇಶ್ವರಲಿಂಗವ ಒಡಗೂಡುವುದಕ್ಕೆ.
--------------
ಸುಂಕದ ಬಂಕಣ್ಣ