ಅಥವಾ
(11) (2) (3) (0) (0) (1) (0) (0) (4) (0) (1) (0) (0) (0) ಅಂ (3) ಅಃ (3) (21) (0) (2) (1) (0) (1) (0) (1) (0) (0) (0) (0) (0) (0) (0) (5) (0) (1) (1) (4) (3) (1) (6) (4) (7) (0) (2) (0) (1) (1) (2) (0) (11) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಹುರೂಪು ತೊಟ್ಟಾಡಿದ ದೇಹ ಒಂದೇ. ವೇಷ ರೂಪಿನ ಪಲ್ಲಟವಲ್ಲದೆ ವೇಷಕ್ಕೆ ತಕ್ಕ ಭಾಷೆ. ಭಾಷೆಗೆ ತಕ್ಕ ವೇಷ, ಅರಿವು ಆಚರಣೆ ಒಂದಾಗಬೇಕು, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
ಬಸವಣ್ಣನೆ ಗುರುಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಚೆನ್ನಬಸವಣ್ಣನೆ ಲಿಂಗಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಸಿದ್ಧರಾಮಯ್ಯನೆ ಜಂಗಮಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ. ಮರುಳಶಂಕರದೇವರೆ ಪ್ರಸಾದಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದರಯ್ಯಾ. ಪ್ರಭುದೇವರೆ ಜ್ಞಾನಮೂರ್ತಿಯಾಗಿ ಎನ್ನ ಹೃದಯಸ್ಥಲಕ್ಕೆ ಬಂದರಯ್ಯಾ. ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳು, ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು, ಸರ್ವತೋಮುಖವಾಗಿ. ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ, ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ. ಹರಹರಾ, ಶಿವಶಿವಾ ಮಹಾದೇವಾ ಮಹಾದೇವಾ, ತ್ರಿಕಾಲದಲ್ಲಿಯೂ ನಿಮ್ಮ ಶರಣರ ಶ್ರೀಪಾದವ ನೆನೆವುತಿರ್ದೆನಯ್ಯಾ, ವೀರಬಂಕೇಶ್ವರಾ.
--------------
ಸುಂಕದ ಬಂಕಣ್ಣ
ಬ್ರಹ್ಮನ ಕುದುರೆಯ ಮಾಡಿ, ವಿಷ್ಣುವ ಹೇರ ಮಾಡಿ, ಸಕಲಭೋಗೋಪಭೋಗಂಗಳೆಲ್ಲವ ಸರಕ ಮಾಡಿ, ಶ್ರದ್ಧೆ ನಿಬದ್ಧಿಯೆಂಬ ರುದ್ರ ಮಾರುತ್ತಿರಲಾಗಿ, ವಿರಕ್ತಿಯೆಂಬ ಚೀಟಿಗೆ ಒಪ್ಪವಿಲ್ಲದಿರಲು, ಅಲ್ಲಿ ಸಿಕ್ಕಿದ ಅಂತಕನ ಕೋಲುಕಾರಂಗೆ, ಬಂಕೇಶ್ವರಲಿಂಗನ ಒಪ್ಪವಿಲ್ಲದ ಕಾರಣ.
--------------
ಸುಂಕದ ಬಂಕಣ್ಣ
ಬಲುಗಲ್ಲಿನ ಮಣಿಯ ಬೆಗಡವನಿಕ್ಕೂದಕ್ಕೆ ಹುಲ್ಲು ಸೂಜಿ, ತಾವರೆಯ ನೂಲಿನ ಬಿಲ್ಲು, ದಳ್ಳುರಿಯ ನೇಣು. ಇವೆಲ್ಲವ ಕೂಡಿ ಕಲ್ಲಿನ ಮೇಲಿರಿಸಿ, ಮಣಿಯ ಮುಖಕ್ಕಿಕ್ಕಿ ತೆಗೆಯಲಾಗಿ ಮಣಿ ವಿರಾಳವಾಯಿತ್ತು. ಹುಲ್ಲು, ಬಿಲ್ಲು, ದಳ್ಳುರಿಯ ನೇಣು, ಬಂಕೇಶ್ವರಲಿಂಗದಲ್ಲಿ ಅಡಗಿತ್ತು. ಇದ ಬಲ್ಲವರಾರು ಹೇಳಾ ?
--------------
ಸುಂಕದ ಬಂಕಣ್ಣ
ಬ್ರಹ್ಮಾಂಡಮಂಡಲದಲ್ಲಿ ಒಬ್ಬ ನಾರಿ ಹುಟ್ಟಿದಳು. ಅವಳಿಗೆ ಐವರು ಗಂಡಂದಿರು, ಮೂವರು ಮಿಂಡಂದಿರು. ಗಂಡಂಗೆ ಕಾಲ ಕೊಟ್ಟು, ಮಿಂಡಂಗೆ ಮಂಡೆಯ ಕೊಟ್ಟು, ಗಂಡಮಿಂಡರ ಒಡಗೂಡಿಕೊಂಡಿಪ್ಪ ನಾರಿಯ ಅಂಗೈಯಲ್ಲಿ ಒಂದು ನಾರಿವಾಳದ ಸಸಿ ಹುಟ್ಚಿತ್ತು. ಅದು ಕಂಗಳ ನೀರ ಕುಡಿದು, ಅಂಗದ ಮರೆಯ ನೆಳಲಲ್ಲಿ ಬಲಿದು, ಸಸಿ ಮರನಾಯಿತ್ತು. ಮರ ಮಹದೊಡಗೂಡಿ ತೆಂಗಿನಕಾಯಿ ಆಕಾಶದಲ್ಲಿ ನಿಂದಿತ್ತು. ಮಟ್ಟೆಯನೊಡೆದು ಕಾಯ ನಿಶ್ಚಯದಲ್ಲಿ ನೋಡಲಾಗಿ, ಕಾಯಿಗೆ ಕಣ್ಣಿಲ್ಲ , ಅಲಿಕಿದಡೆ ಜಲವಿಲ್ಲ. ಅಂಗ ಭಿನ್ನವ ಮಾಡಿ ನೋಡಲಾಗಿ, ಕಾಯ ಕರ್ರಗಾಗಿತ್ತು , ನೀರು ಬೆಳ್ಳಗಾಯಿತ್ತು , ಒಡೆದಾತನ ಬಾಯಿ ಬೆತ್ತಲೆಯಾಯಿತ್ತು. ಬ್ರಹ್ಮಾಂಡಮಂಡಲದ ಶಕ್ತಿ ಗಂಡನ ಕೊಂಡು, ಮಿಂಡನ ವಂಚಿಸಿ, ಬಂಧುಗಳ ಹಿಂಗಿ, ತನ್ನ ಹಿಂಡನೊಡಗೂಡಿದಳು. ಇಂತಿವರೆಲ್ಲರ ಬಲ್ಲತನ ಅವಳಲ್ಲಿಯೇ ಹೋಯಿತ್ತು. ಶಕ್ತಿ ಉಮಾಪತಿ, ನಿಶ್ಶಕ್ತಿ ಪರಮಜ್ಞಾನ. ಕಾಯ ಭ್ರಮೆ, ಜೀವ ಬಯಲು, ಅರಿವು ರೂಪು, ಬಂಕೇಶ್ವರಲಿಂಗವನರಿದನೆಂಬುದು ಗರ್ವಮಾಯೆ.
--------------
ಸುಂಕದ ಬಂಕಣ್ಣ
ಬಂದವರಿವರಾರು ? ಅಂದಗೇಡಿಯ ಮೂಳಿಯ ಮಕ್ಕಳು. ಅವರು ಸಂದುಸಂದಿಗೆಲ್ಲಕ್ಕೂ ಕೊಂದಾಡುತ್ತಿರ್ಪರು. [ಖ]ಂಡವನೊಲ್ಲರು, ಹಿಡಿWಖಘೆಂಡವ ತಿಂಬರು, ಅವರೆಂದಿಗೂ ಮೂಳಿಯ ಮಕ್ಕಳು. ಇದು ಸಂದೇಹವಲ್ಲ, ಬಂಕೇಶ್ವರಲಿಂ[ಗಾ].
--------------
ಸುಂಕದ ಬಂಕಣ್ಣ