ಅಥವಾ
(11) (2) (3) (0) (0) (1) (0) (0) (4) (0) (1) (0) (0) (0) ಅಂ (3) ಅಃ (3) (21) (0) (2) (1) (0) (1) (0) (1) (0) (0) (0) (0) (0) (0) (0) (5) (0) (1) (1) (4) (3) (1) (6) (4) (7) (0) (2) (0) (1) (1) (2) (0) (11) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಾಗರದ ತಡಿಯಲ್ಲಿ ಒಂದು ಆರವೆ. ಆರವೆಯ ಬೇರಿನಲ್ಲಿ ಮೂರುಲೋಕ. ಲೋಕದೊಳಗೆ ಹೊತ್ತು ಬೆವಹಾರ ಮಾಡುವ ಅಣ್ಣಗಳೆಲ್ಲರೂ ಹೇರಿನ ಮೂಲೆಗೆ ತೋಳಕೊಟ್ಟು, ಅಳೆವ ಕೊಳಗಕ್ಕೆ ಕೈಯನಿಕ್ಕಿದರು. ಗಡಿವಾಡದ ಸುಂಕವ ಕದ್ದು ಹೋಗಲರಿಯದೆ ಬಂಕೇಶ್ವರಲಿಂಗವನರಿಯಿರಣ್ಣಾ.
--------------
ಸುಂಕದ ಬಂಕಣ್ಣ
ಸದಾಚಾರವೆ ಸಾಕಾರವಾಗಿ, ಸತ್ಪ್ರಣಮವೆ ಪ್ರಾಣವಾಗಿ, ಮಾಡುವ ಮಾಟವೆ ಕೈಯಾಗಿ, ಅರಿವೆಂಬ ಬಾಯಿಗೆ ಕುರುಹಿನ ಕೈ ಮರೆಯದೆ ಅರ್ಪಿಸಿತ್ತು. ಅಂಗಪ್ರಾಣ ಅರಿವು ಸಂಬಂಧ, ಅದು ಪ್ರಾಣಲಿಂಗಯೋಗ, ಬಂಕೇಶ್ವರಲಿಂಗದಲ್ಲಿ.
--------------
ಸುಂಕದ ಬಂಕಣ್ಣ
ಸಾಕಾರವೆಂಬ ಚೀಲದಲ್ಲಿ, ಪ್ರಕೃತಿ ವಿಕಾರವೆಂಬ ಭಂಡವ ತುಂಬಿ, ಕ್ರಿಯಾ ಧರ್ಮಂಗಳೆಂಬ ದಾರವ ದಾರದಲ್ಲಿ ಸೇರಿಸಿ, ಕಟ್ಟಲರಿಯದ ಅಣ್ಣಗಳಿಗೆ ಜಗಸೆಟ್ಟಿತನವೇಕೆ ? ಸುಂಕ ಸಿಕ್ಕಿತ್ತು, ಬಂಕೇಶ್ವರಲಿಂಗದಲ್ಲಿ.
--------------
ಸುಂಕದ ಬಂಕಣ್ಣ
ಸೂತಕ ತಡೆದಲ್ಲಿ ಮಕ್ಕಳಾದಹರೆಂದು ಮಚ್ಚಿಪ್ಪುದು ಜಗ. ಸೂತಕವೇತರಿಂದೊದಗೂದು. ಜಗದ ಉತ್ಪತ್ಯ, ಈ ಕಾಯದ ಆಶೆಯ ಸೂತಕ ತಡೆದು, ನಿರಾಶೆಯ ಮಾತೆಯ ಗರ್ಭದಲ್ಲಿ, ನಿರ್ಜಾತನು ಬೆಸಲಾದ. ಭಾವವೆಂಬ ಯೋನಿಯಲ್ಲಿ , ಬಂಕೇಶ್ವರಲಿಂಗ ಅಂತುಕ ಕುಮಾರನಾದ.
--------------
ಸುಂಕದ ಬಂಕಣ್ಣ
ಸುಧೆಯ ಸುಮ್ಮಾನದ ಗಿರಿಯಲ್ಲಿ ಒಂದು ಮಲಯಜದ ಮರ ಹುಟ್ಟಿತ್ತು. ಬೇರಿಲ್ಲದೆ ನೀರಿಲ್ಲದೆ ಭೂಮಿಯೊಳಗಲ್ಲದೆ ಬೆಳೆವುತ್ತದೆ ನೋಡಾ. ಅದಕ್ಕೆ ಬೇರಿನೊಳಗಣ ಹಣ್ಣು, ಮರದ ಮಧ್ಯದಲ್ಲಿ ಕಾಯಿ, ತುದಿಯಲ್ಲಿ ಹೂ. ತುದಿಯಲ್ಲಿ ಕುಸುಮ ಬಲಿದು, ಮರದ ಮಧ್ಯದಲ್ಲಿ ಕಾಯಿ ಬಲಿದು, ರಸ ಬೇರಿಗಿಳಿಯಿತ್ತು. ಬೇರಿನ ಹಣ್ಣು ಬಂಕೇಶ್ವರಲಿಂಗಕ್ಕೆ ಆರೋಗಣೆಯಾಯಿತ್ತು.
--------------
ಸುಂಕದ ಬಂಕಣ್ಣ
ಸರ್ವಜೀವಕ್ಕೆ ದಯವೆ ಮೂಲಮಂತ್ರ. ಸರ್ವರ ಭೂತಹಿತವೆ ದಿವ್ಯಜ್ಞಾನ. ಇಂತೀ ಉಭಯವನರಿತಲ್ಲಿ ಸದಮಲಪೂಜೆ. ಹೀಗಲ್ಲದೆ ಬೆನ್ನ ತಡಹಿ, ಅನ್ನವನಿಕ್ಕಿ, ತಿನ್ನು ಕೊಲ್ಲು ಎಂಬವನ ಪೂಜೆ. ಅವನನ್ನದ ಹಿರಣ್ಯದ ಒದಗು. ಅವನ ಮಾಟದ ಮರುಳಾಟ, ಏತದ ಕೂನಿಯ ಘಾತದ ವೆಜ್ಜದಂತೆ, ಅವನ ನೀತಿಯ ಇರವು, ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಸುಖದ ಸುಖಿಗಳ ಸಂಭಾಷಣೆಯಿಂದ, ದುಃಖ ವಿಶ್ರಾಮವಾಯಿತ್ತು. ಭಾವಕ್ಕೆ ಭಾವ ತಾರ್ಕಣೆಯಾದಲ್ಲಿ, ನೆನಹಕ್ಕೆ ವಿಶ್ರಾಮವಾಯಿತ್ತು. ಬೆಚ್ಚು ಬೆರಸಲೊಡನೆ ಮಚ್ಚು ಒಳಕೊಂಡಿತ್ತು, ಚೆನ್ನಬಂಕನಾಥನ ಮಾಹೇಶ್ವರಂಗೆ.
--------------
ಸುಂಕದ ಬಂಕಣ್ಣ
ಸರ್ವೇಂದ್ರಿಯವೆಲ್ಲವು ಸರ್ವಸುಖಂಗಳ ಭೋಗಿಸಿ, ಸರ್ವೇಶ್ವರನ ಗೊತ್ತ ಮುಟ್ಟಿಸಲರಿಯದೆ ಮತ್ತರಾಗಬೇಡ. ಗಳೆಯನೇರಿದ ವಿಧಾಂತ ಲಾಗು ಬಾರದೆ ಇಳಿದಡೆ ಅವಗದೇ ಭಂಗ. ಸರ್ವವನರಿದ ಜೀವನ್ಮುಕ್ತ ಮರಳಿ ಸರ್ವವನೊಡಗೂಡಿದಡೆ, ಬಂಕೇಶ್ವರಲಿಂಗಕ್ಕೆ ದೂರ.
--------------
ಸುಂಕದ ಬಂಕಣ್ಣ
ಸೂಜಿಯ ಹಿನ್ನಿಯಲ್ಲಿ ಮುಗಿಲ ತೋರದ ದಾರ ಹಿಡಿಯಿತ್ತು. ಸೂಜಿಯ ಮೊನೆ ಹಳೆಯ ಅರಿವೆಯ ಚುಚ್ಚಲಾರದು. ಹಿನ್ನಿ ಹಿಡದ ಭೇದದ ನೋಡಾ ! ಮೊನೆ ಗೆಲ್ಲದು ಹಿನ್ನಿಯ ಭಾರಕ್ಕಂಜಿ. ಹಿನ್ನಿಯ ನನ್ನಿಯ ಮಾಡಿ, ಚೆನ್ನಾಗಿ ಚುಚ್ಚಲಾಗಿ, ಹಿನ್ನಿ ಕಿತ್ತು ಮೊನೆ ಹೋಯಿತ್ತು. ಹಚ್ಚಡ ಎಣೆಗೂಡಿತ್ತು, ಬಂಕೇಶ್ವರಲಿಂಗದಲ್ಲಿ.
--------------
ಸುಂಕದ ಬಂಕಣ್ಣ
ಸುಖವ ನಿಶ್ಚೆ ೈಸಲಿಲ್ಲ, ಅದು ದುಃಖಕ್ಕೆ ಬೀಜ. ದುಃಖವ ನಿಶ್ಚೆ ೈಸಲಿಲ್ಲ, ಸುಖದೊಡಲು. ಸುಖದುಃಖವೆರಡು ಕಾಲನ ಸುಂಕಕ್ಕೆ ಒಳಗು. ಬಂಕೇಶ್ವರಲಿಂಗದೊಳಗೆ ಒಬ್ಬರೂ ಇಲ್ಲ.
--------------
ಸುಂಕದ ಬಂಕಣ್ಣ
ಸಾಕಾರವೆಂಬ ಸೆಟ್ಟಿ, ಜೀವವೆಂಬ ಎತ್ತಿನ ಮೇಲೆ ಎತ್ತಿ ಹೊಡೆಯಲಾಗಿ, ಬಹುವಿಧ ಚರಿತ್ರದ ಭೇದ ಬೆವಹಾರದ ಒಡೆಯಂಗೆ ಕೊಡಿ. ಕರಣಂಗಳೆಂಬ ಸರಕ ಹೊತ್ತುಮಾರುವ ಸೆಟ್ಟಿಗಳೆಲ್ಲರೂ ಕೊಡಿ ಬಂಕೇಶ್ವರಲಿಂಗಕ್ಕೆ ಸುಂಕವ.
--------------
ಸುಂಕದ ಬಂಕಣ್ಣ