ಅಥವಾ
(11) (2) (3) (0) (0) (1) (0) (0) (4) (0) (1) (0) (0) (0) ಅಂ (3) ಅಃ (3) (21) (0) (2) (1) (0) (1) (0) (1) (0) (0) (0) (0) (0) (0) (0) (5) (0) (1) (1) (4) (3) (1) (6) (4) (7) (0) (2) (0) (1) (1) (2) (0) (11) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಾವವಿಕಾರ ಕಾಯಕ್ಕೆ ಚೇಗೆ. ಕಾಯದ ಕೇಡು, ಅರಿವಿಂಗೆ ಆಶ್ರಯಿಸುವದಕ್ಕೆ ಹೀನ. ಉಭಯದಲ್ಲಿ ಬಂದುದಕ್ಕೆ ಕಾಯ ಸುಂಕವ ತೆತ್ತು, ಜೀವ ಹೋಯಿತ್ತು, ಬಂಕೇಶ್ವರಲಿಂಗದಲ್ಲಿ .
--------------
ಸುಂಕದ ಬಂಕಣ್ಣ
ಭವಿಸಂಗವನೊಲ್ಲೆನೆಂದು, ಭವಿಗಳ ಮನೆಯಲ್ಲಿ ಉಣ್ಣೆನೆಂದು, ಭವಿಗಳಿಗೆ ಇಕ್ಕೆನೆಂದು, ಭವಿಪಾಕದ ಕ್ಷಾರ ಕ್ರಮುಕ ಮಧುರ ತಿಲ ಚೂರ್ಣ ಇವು ಮೊದಲಾದ ದ್ರವ್ಯಂಗಳ ಭಕ್ಷಿಸಿ, ಪ್ರೇತರ ಕೂಟವನೊಲ್ಲೆನೆಂಬ, ಜಗನೀತಿಯ ವರ್ತಕರುಗಳಿಗೆ ಅದೇತರ ಶೀಲ, ಬಂಕೇಶ್ವರಲಿಂಗದಲ್ಲಿ ?
--------------
ಸುಂಕದ ಬಂಕಣ್ಣ
ಭಾನುತೇಜವ ರಾಹು ಕೊಂಡಲ್ಲಿ, ಸೋನೆಯ ಡುಂಡುಕ ತನ್ನಯ ಕೇಣವನೆತ್ತಿದಂತೆ, ಎನ್ನಯ ಸುತ್ತಿದ ಮಾಯೆ ನಿನಗೆ ಅನ್ಯವೆ ? ಅದು ನಿನ್ನಯ ಚುನ್ನ, ಚೆನ್ನಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಭಂಡವ ತುಂಬಿರಿಸಿದ ಮುಟ್ಟು, ಭಂಡ ಹುಳಿತಡೆ ಮುಟ್ಟಿ ಮಾರುವರುಂಟೆ? ಅಂಗ ಪ್ರಾಣಸಂಗದಲ್ಲಿ ಪ್ರಾಣಪ್ರಕೃತಿಯಾದ ಮತ್ತೆ ಅಂಗಕ್ಕೆ ಹಂಗುಂಟೆ? ಪ್ರಾಣಪ್ರಕೃತಿಯ ಮಾಡಿ, ಅಂಗದ ಹಂಗವ ಕೊಳುತ್ತಿದೆ. ಇದರ ಸಂಗವ ಕೇಳಿಕೊಂಬ ಬನ್ನಿ, ಬಂಕೇಶ್ವರಲಿಂಗದಲ್ಲಿಗೆ.
--------------
ಸುಂಕದ ಬಂಕಣ್ಣ