ಅಥವಾ
(11) (2) (3) (0) (0) (1) (0) (0) (4) (0) (1) (0) (0) (0) ಅಂ (3) ಅಃ (3) (21) (0) (2) (1) (0) (1) (0) (1) (0) (0) (0) (0) (0) (0) (0) (5) (0) (1) (1) (4) (3) (1) (6) (4) (7) (0) (2) (0) (1) (1) (2) (0) (11) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಲ್ಲರೂ ಕೂಡಿ ಬೀರನ ಚಪ್ಪರಕ್ಕೆ ಬಂದ ಅಜಗಾಹಿಗಳಂತೆ. ದ್ವೇಷದಲ್ಲಿ , ಅಸಿಯ ಒಡಲಲ್ಲಿ ಗಸಣಿಗೊಂಡಡೆ, ಅದು ಮಿಸುಕದಂತೆ. ಕೂಟದಲ್ಲಿ ಕೂಡಿ, ಮಾತಿನಲ್ಲಿ ನಿಜವಿಲ್ಲದೆ, ಅದೇತರ ಭಕ್ತಿಯ ವ್ರತ? ನಿಜನೀತಿಯ ನಿಚ್ಚಟಂಗೆ ಬಳಕೆಯ ಬಳಸುವ ನೀತಿಯ ಅರ್ತಿಕಾರರಿಗಿಲ್ಲ, ನಿಚ್ಚಟಂಗಲ್ಲದೆ. ಬಂಕೇಶ್ವರಲಿಂಗದ ಒಲುಮೆ ಎಲ್ಲರಿಗೆಲ್ಲಿಯದೊ !
--------------
ಸುಂಕದ ಬಂಕಣ್ಣ
ಎವೆಯ ಮುಚ್ಚಿ, ಕಣ್ಣು ತೆರೆಯಬೇಕು. ಶರೀರವ ಗೆದ್ದು, ಜ್ಞಾನವನರಿಯಬೇಕು. ಜ್ಞಾನವ ಮರೆದು, ವಿಜ್ಞಾನ ಸುಜ್ಞಾನದಲ್ಲಿ ನಿಂದು, ಚಿದ್ಘನದಲ್ಲಿ ಚಿಚ್ಛಕ್ತಿಯ ಕೂಡಿ, ಚಿಚ್ಛಕ್ತಿ ನಷ್ಟವಾಗಿ ವಸ್ತುಲೇಪ. ದೃಕ್ಕಿಂಗೆ ಅಗೋಚರವಾಗಿ, ತತ್ವಮಸಿಯೆಂಬ ಭಿತ್ತಿಯ ಭಾವವಿತ್ತಲೆ, ಅತ್ತಲರಿ, ಬಂಕೇಶ್ವರಲಿಂಗವ.
--------------
ಸುಂಕದ ಬಂಕಣ್ಣ
ಎಂಬತ್ತನಾಲ್ಕುಲಕ್ಷಕೋಟಿ ಮಾರಿನಲ್ಲಿ ಮಾರಿಸಿಕೊಂಡ ಶರೀರ ಇದ ತಂದವರಾರಣ್ಣಾ. ಕಾಯಕ್ಕೆ ಜೀವ ಸುಂಕವ ಕೊಡದೆ, ಕಾಯದೊಳಗಣ ಬಂದ ಭಾವಭ್ರಮೆ ಸುಂಕ. ಈ ವಿಧದ ಚೀಟ, ಬಂಕೇಶ್ವರಲಿಂಗದಲ್ಲಿ ಒಪ್ಪಿಸಿಕೊಳ್ಳಿರಣ್ಣಾ.
--------------
ಸುಂಕದ ಬಂಕಣ್ಣ
ಎಲ್ಲರ ಸುಂಕ, ಎತ್ತು ತೊತ್ತು ಬಂಡಿ ಬಲ್ಲೆತ್ತು . ಎನ್ನ ಸುಂಕ ಎಲ್ಲರ ಪರಿಯಲ್ಲ. ಕಟ್ಟಿದ ಕುರುಹಿಂಗೆ, ಹಿಡಿದ ವ್ರತನೇಮನಿತ್ಯಕ್ಕೆ ತಪ್ಪಲಿಲ್ಲಾಯೆಂದು ಕೊಟ್ಟ ಚೀಟ ಸಿಕ್ಕಿಸಿದೆ ನಿಮ್ಮಂಗದಲ್ಲಿ. ಭಕ್ತರಾಗಿ ಕಳವು ಹಾದರ ಮಿಕ್ಕಾದೊಂದೂ ಬೇಡ ಎಂದು ಕೊಟ್ಟ ಚೀಟು ವಿಶುದ್ಧಿ, ಜಗದ ಸುಂಕದೊಡೆಯ ಬಂಕೇಶ್ವರಲಿಂಗನು.
--------------
ಸುಂಕದ ಬಂಕಣ್ಣ